ಕೋಟ (ಬ್ರಹ್ಮಾವರ): ಕೋಟದ ಗಾಣಿಗ ಯುವ ಸಂಘಟನೆ ಆಶ್ರಯದಲ್ಲಿ 2024ನೇ ಸಾಲಿನ ಹಾರಾಡಿ ಮಹಾಬಲ ಗಾಣಿಗ ಸಂಸ್ಮರಣೆ ಪ್ರಶಸ್ತಿ ಪ್ರದಾನ ಹಾಗೂ ಯುವ ಸಂಗಮ ಕಾರ್ಯಕ್ರಮ ಸಾಲಿಗ್ರಾಮ ಗಿರಿಜಾ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಕೋಟ ಮಣೂರಿನ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ‘ಯಕ್ಷಗಾನ ಕ್ಷೇತ್ರಕ್ಕೆ ಗಾಣಿಗ ಸಮಾಜದ ಕೊಡುಗೆ ಅಪಾರವಾಗಿದೆ. ಹಾರಾಡಿ ಮನೆತನವು ಯಕ್ಷಗಾನ ಕ್ಷೇತ್ರದಲ್ಲಿ ಚಿರಸ್ಥಾಯಿಯಾದ ಹೆಸರಾಗಿದೆ’ ಎಂದರು.

ಯಕ್ಷಗಾನ ವಿದ್ವಾಂಸ ಗುಂಡ್ಮಿ ಸದಾನಂದ ಐತಾಳ ಮಾತನಾಡಿ, ‘ಯಕ್ಷಗಾನ ಕ್ಷೇತ್ರದಲ್ಲಿ ಜೋಡೆ ಕೋರೆ ಮುಂಡಾಸು ಮಹಾಬಲ ಗಾಣಿಗರಿಗೆ ಮೀಸಲಾಗಿತ್ತು. ಅವರ ನಿಧನದ ನಂತರ ವೃತ್ತಿ ರಂಗದಲ್ಲಿ ಈ ವಿಶೇಷ ಸಂಪೂರ್ಣ ಮರೆಯಾಯಿತು. ಹಿರಿಯ ಕಲಾವಿದರನ್ನು ನೆನಪಿಸಿಕೊಳ್ಳುವ ಇಂತಹ ಕಾರ್ಯಕ್ರಮಗಳು ಶ್ಲಾಘನೀಯ’ ಎಂದರು.

ಪ್ರಗತಿಪರ ಕೃಷಿಕರಾದ ಚಂದ್ರಶೇಖರ ಗಾಣಿಗ ಹಂದಟ್ಟು, ಸಾಸ್ತಾನ ಸಹಕಾರಿ ಸಂಘದ ನಿರ್ದೇಶಕ ಆನಂದ ಗಾಣಿಗ ಮಾಬುಕಳ ಹಾಗೂ ಗಾಣಿಗ ಸಮಾಜದಲ್ಲಿ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಗಳಲಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ, ದಿ.ವಸಂತಿ ಹಾಗೂ ದಿ. ಸುಬ್ಬ ಗಾಣಿಗ ಐರೋಡಿ ಸ್ಮರಣಾರ್ಥ ಸಂತೋಷ ಕುಮಾರ್ ಮತ್ತು ಶೇವಧಿ ಸುರೇಶ ಗಾಣಿಗ ಕೊಡಮಾಡಿದ ಶೈಕ್ಷಣಿಕ ಪರಿಕರಗಳ ವಿತರಣೆ ನಡೆಯಿತು.

ಗಾಣಿಗ ಯುವ ಸಂಘಟನೆ ಕೋಟ ಘಟಕದ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಲಕ್ಕಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಸೋಮ ಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಸೂರ್ಯನಾರಾಯಣ ಗಾಣಿಗ ಮಟಪಾಡಿ, ಉಪಾಧ್ಯಕ್ಷ ಉದಯ ಕುಮಾರ್ ಕೆ., ಶೇವಧಿ ಸುರೇಶ ಗಾಣಿಗ, ಉದ್ಯಮಿ ನಿತಿನ್ ನಾರಾಯಣ, ಜಿಲ್ಲಾ ಯುವ ಸಂಘಟನೆ ಅಧ್ಯಕ್ಷ ದಿನೇಶ ಗಾಣಿಗ ಕೋಟ, ಕೋಟ ಘಟಕದ ಗೌರವ ಅಧ್ಯಕ್ಷ ಪ್ರಶಾಂತ ಗಾಣಿಗ ಕಾರ್ಕಡ, ಮಹಿಳಾ ಸಂಘಟನೆ ಅಧ್ಯಕ್ಷೆ ರೇಖಾ ಗಣೇಶ, ಮಹಾಬಲ ಗಾಣಿಗ ಮಕ್ಕಳಾದ ವಿಶ್ವನಾಥ ಕಾರ್ತಟ್ಟು, ಜನಾರ್ಧನ ಬ್ರಹ್ಮಾವರ, ವಸಂತಿರಾಜು ಕಾರ್ತಟ್ಟು ಮತ್ತು ಕುಟುಂಬದ ಸದಸ್ಯರು ಇದ್ದರು.

ಆರ್.ಕೆ. ಬ್ರಹ್ಮಾವರ ಸ್ವಾಗತಿಸಿದರು. ನಾಗರಾಜ ಗಾಣಿಗ ಸಾಲಿಗ್ರಾಮ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವನಾಥ ಗಾಣಿಗ ನಿರೂಪಿಸಿದರು. ಆನಂದ ಮಾಬುಕಳ ವಂದಿಸಿದರು.

ಆಜ್ರಿ ಗೋಪಾಲ ಗಾಣಿಗರಿಗೆ ಪ್ರಶಸ್ತಿ

ಮಂದಾರ್ತಿ ಮೇಳದ ಎರಡನೆಯ ವೇಷಧಾರಿ ಆಜ್ರಿ ಗೋಪಾಲ ಗಾಣಿಗರಿಗೆ ಹಾರಾಡಿ ಮಹಾಬಲ ಗಾಣಿಗ ಸಂಸ್ಮರಣೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಸಮಗ್ರ ಗಾಣಿಗ ಕಲಾವಿದರಿಂದ ಕೂಡಿದ ಭೀಷ್ಮವಿಜಯ ಯಕ್ಷಗಾನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.