ಬುಧವಾರ, ಮಾರ್ಚ್ 3, 2021
24 °C
ಕೋಮು ಸೌಹಾರ್ದ ವೇದಿಕೆ ಪ್ರತಿಭಟನೆ

ಗಾಂಧಿಯನ್ನು ಕೊಂದವರೇ ಗೌರಿಯನ್ನು ಕೊಂದಿದ್ದಾರೆ: ಜಿ.ರಾಜಶೇಖರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಉಡುಪಿ: ಯಾರು ಗಾಂಧೀಜಿ ಅವರನ್ನು ಕೊಂದರೋ ಅವರೇ ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ, ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರನ್ನು ಕೊಂದಿರುವುದು ಸ್ಷಷ್ಟವಾಗಿದೆ ಎಂದು ಕೋಮು ಸೌಹಾರ್ದ ವೇದಿಕೆ ಜಿಲ್ಲಾಧ್ಯಕ್ಷ ರಾಜಶೇಖರ್ ಅಭಿಪ್ರಾಯಪಟ್ಟರು.

ನಗರದ ಅಜ್ಜರಕಾಡು ಹುತಾತ್ಮರ ಚೌಕದ ಎದುರು ಕೋಮು ಸೌಹಾರ್ದ ವೇದಿಕೆ ಹಾಗೂ ದಲಿತ ಸಂಘಟನೆಗಳ ಮಹಾ ಒಕ್ಕೂಟ ಹಮ್ಮಿಕೊಂಡಿದ್ದ ಗೌರಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದರು. 

ಹಿಂದೆ ಇದೇ ಜಾಗದಲ್ಲಿ ಪ್ರತಿಭಟನೆ ನಡೆಸಿ, ಗಾಂಧಿಯನ್ನು ಕೊಂದವರು ಗೌರಿಯನ್ನು ಕೊಂದರೇ ಎಂದು ಘೋಷಣೆ ಕೂಗಲಾಗಿತ್ತು. ಅದು ನಿಜವಾದಂತೆ ಕಾಣುತ್ತಿದೆ. ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಬೇರು ಸಂಘಪರಿವಾರದಲ್ಲಿ ಆಳವಾಗಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪರಶುರಾಮ ವಾಗ್ಮೋರೆ ಕೆಲವರ್ಷಗಳ ಹಿಂದೆ ಸಿಂಧಗಿಯಲ್ಲಿ ಪಾಕ್ ಧ್ವಜ ಹಾರಿಸಿ ಗಲಭೆ ಸೃಷ್ಟಿಸಲು ಯತ್ನಿಸಿದ್ದ. ಈ ಪ್ರಕರಣದಲ್ಲಿ ತಾಂತ್ರಿಕ ಕಾರಣದಿಂದ ನ್ಯಾಯಾಲಯ ವಾಗ್ಮೋರೆಯನ್ನು ಬಿಡುಗಡೆಮಾಡಿದೆ. ಗೌರಿ ಲಂಕೇಶ್ ಪ್ರಕರಣದಲ್ಲೂ ತಾಂತ್ರಿಕ ಕಾರಣದಿಂದ ಆರೋಪಿಗಳು ಬಿಡುಗಡೆಯಾದರೂ ಅಚ್ಚರಿಯಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಸಾರ್ವಕರ್ ಪ್ರಣೀತ ಸಾರ್ವರ್ಕರ್ ಸಿದ್ಧಾಂತ ಸಾವಿರಾರು ಜನರ ಹತ್ಯೆಗೆ ಕಾರಣವಾಗಿದೆ. ಸರಣಿ ಹತ್ಯಾಕಾಂಡದಲ್ಲಿ ನೂರಾರು ಅಮಾಯಕರು ಬಲಿಯಾಗಿದ್ದಾರೆ. ಈ ಎಲ್ಲ ಸಾವುಗಳನ್ನು ನಾವೆಲ್ಲ ಖಂಡಿಸಬೇಕಿದೆ. ಹಿಂದುತ್ವದ ಸಿದ್ಧಾಂತಕ್ಕೆ ನಾವೆಲ್ಲ ದಿಕ್ಕಾರ ಕೂಗಬೇಕಿದೆ ಎಂದರು.

ಹೋರಾಟಗಾರ ಹಯವದನ ಉಪಾಧ್ಯಾಯ ಮಾತನಾಡಿ, ‘ದೇಶದಲ್ಲಿ ವೈಚಾರಿಕ ಹೋರಾಟವನ್ನು ದಮನಮಾಡಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ಅಭಿವ್ತಕ್ತಿ ಸ್ವಾತಂತ್ರ್ಯವನ್ನು ಕಸಿಯಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದಲಿತ ಸಂಘಟನೆ ಮುಖಂಡ ಸುಂದರ್ ಮಾಸ್ತರ್ ಮಾತನಾಡಿ, ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಹಿಂದೂಗಳು ದಲಿತರನ್ನು ದಮನ ಮಾಡುತ್ತಿರುವುದು ಖಂಡನೀಯ’ ಎಂದರು.

ಪ್ರತಿಭಟನೆಯಲ್ಲಿ ಮುಖಂಡರಾದ ಸಂದೇಶ್ ಭಂಡಾರಿ, ಅಲೋಕ್ ರಾಜವಾಡೆ, ವಿಲಿಯಂ ಮಾರ್ಟಿಸ್, ಇದ್ರಿಸ್ ಊಡೆ, ಶಾಮರಾಜ್ ಬಿರ್ತಿ, ಸಮರ್ಥ ಸಹೀಲ್ ಅವರೂ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು