ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆಕುದ್ರು ಶ್ರೀಮಠಕ್ಕೆ ಹರಿಹರಪುರ ಸ್ವಾಮೀಜಿ ಭೇಟಿ

Published 26 ಏಪ್ರಿಲ್ 2024, 13:15 IST
Last Updated 26 ಏಪ್ರಿಲ್ 2024, 13:15 IST
ಅಕ್ಷರ ಗಾತ್ರ

ಬ್ರಹ್ಮಾವರ: ತಾಲ್ಲೂಕಿನ ಬಾಳೆಕುದ್ರು ಶ್ರೀಮಠಕ್ಕೆ ಹರಿಹರಪುರದ ಸ್ವಯಂಪ್ರಕಾಶ ಸಚ್ಚಿದಾನಂದ ಸ್ವರಸ್ವತಿ ಸ್ವಾಮೀಜಿ, ಬೆಂಗಳೂರಿನ ರಾಜರಾಜೇಶ್ವರಿ ನಗರದ ಕೈಲಾಸ ಆಶ್ರಮ ಮಹಾಸಂಸ್ಥಾನ ಜಯೇಂದ್ರಪುರಿ ಸ್ವಾಮೀಜಿ ಬಂದು ಮಠದ ನೃಸಿಂಹಾಶ್ರಮ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಮಠದ ಬಗ್ಗೆ ಮಾಹಿತಿ ಪಡೆದರು.

ಶ್ರೀಮಠದ ಲಕ್ಷ್ಮಿನರಸಿಂಹನಿಗೆ ವಿಶೇಷ ಪೂಜೆ ಸಲ್ಲಿಸಿ ನೆರೆದಿದ್ದ ಭಕ್ತಾದಿಗಳಿಗೆ ಆಶೀರ್ವಚನ, ಮಂತ್ರಾಕ್ಷತೆ ನೀಡಿದರು.

ಕುಂದಾಪುರ ತಾಲ್ಲೂಕು ಭಜನಾ ಒಕ್ಕೂಟದ ಕುಂದೇಶ್ವರ ಭಜನಾ ಮಂಡಳಿ, ಹಂಗಾರಕಟ್ಟೆ ಬ್ರಹ್ಮಶ್ರೀ ನಾರಾಯಣಗುರು ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಕುಂದಾಪುರದ ರಾಮ ಕ್ಷತ್ರಿಯ ಮಹಿಳಾ ಮಂಡಳಿಯ ಸದಸ್ಯೆಯರಿಂದ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣೆ ನಡೆಯಿತು.

ಶ್ರೀಮಠದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜಶೇಖರ ಕಲ್ಕೂರ, ಸದಸ್ಯರಾದ ಪಾಮರ ಚಡಗ, ಮಠದ ವ್ಯವಸ್ಥಾಪಕ ಮಂಜುನಾಥ ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT