ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ರಿ: ಅಂಬೆ ನಾಟಕ 25ನೇ ಪ್ರದರ್ಶನ ಇಂದು

ಸುಕುಮಾರ್‌ ಮುನಿಯಾಲ್
Published 11 ಏಪ್ರಿಲ್ 2024, 7:27 IST
Last Updated 11 ಏಪ್ರಿಲ್ 2024, 7:27 IST
ಅಕ್ಷರ ಗಾತ್ರ

ಹೆಬ್ರಿ: ಅಂಬೆಯ ಜೀವನದ ಸಂಕಷ್ಟ, ಭಾವನೆಗಳ ತೊಳಲಾಟವನ್ನು ರಂಗಪ್ರಯೋಗದ ಮೂಲಕ ಪ್ರೇಕ್ಷಕರ ಮನಸ್ಸಿಗೆ ಮುಟ್ಟಿಸುವಲ್ಲಿ ಯಶಸ್ಸು ಕಂಡವರು ನಾಡಿನ ಪ್ರಸಿದ್ಧ ರಂಗಸಂಸ್ಥೆ, ಕಲಾ ಸಂಘಟನೆ ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆ.

ಮುದ್ರಾಡಿ ಎಂಬ ಸಣ್ಣ ಹಳ್ಳಿಯಲ್ಲಿ ಕುಟುಂಬ ಸದಸ್ಯರು ಸೇರಿ ‘ನಿಲಯದ ಕಲಾವಿದರು’ ಎಂಬ ಹೆಸರಿನಲ್ಲಿ 1987ರಲ್ಲಿ ಕಟ್ಟಿದ ಸಂಸ್ಥೆ ಈಗ ನಮ ತುಳುವೆರ್ ಕಲಾ ಸಂಘಟನೆಯಾಗಿ ದೇಶ ವಿದೇಶದಲ್ಲಿ ಖ್ಯಾತಿಗಳಿಸಿದೆ. 34  ವರ್ಷಗಳಲ್ಲಿ ಹಲವಾರು ಯಶಸ್ವಿ ಪ್ರದರ್ಶನದ ನಾಟಕಗಳನ್ನು ನೀಡಿದೆ. ಮೂರು ಹೆಜ್ಜೆ ಮೂರು ಲೋಕ, ಪಿಲಿಪತ್ತಿ ಗಡಸ್, ಸಿರಿಸಂಪಿಗೆ ಸೇರಿದಂತೆ ಹಲವಾರು ನಾಟಕಗಳು ಯಶಸ್ಸು ಕಂಡು ರಂಗಭೂಮಿಯಲ್ಲಿ ಅದ್ಬುತ ದಾಖಲೆ ಮಾಡಿವೆ.

ಇದೀಗ ಸಂಘಟನೆಯ ‘ಅಂಬೆ’ ನಾಟಕ25ನೇ ಪ್ರಯೋಗ ಕಾಣುತ್ತಿದೆ. ಇದೇ 11ರಂದು ಮುದ್ರಾಡಿ ನಾಟ್ಕದೂರು ಬಿ.ವಿ.ಕಾರಂತ ಬಯಲು ರಂಗಭೂಮಿಯಲ್ಲಿ 25ನೇ ಪ್ರದರ್ಶನ ಆಯೋಜಿಸಲಾಗಿದೆ. ಡಾ.ಸರಜೂ ಕಾಟ್ಕರ್ ನಾಟಕ ರಚಿಸಿದ್ದು, ಸಾಲಿಯಾನ್‌ ಉಮೇಶ್‌ ನಾರಾಯಣ್‌ ನಿರ್ದೇಶನ ಮಾಡಿದ್ದಾರೆ. . ದಿಗ್ವಿಜಯ್‌ ಹೆಗ್ಗೋಡು ಸಂಗೀತ ನೀಡಿದ್ದಾರೆ. ಚಂದ್ರನಾಥ ಬಜಗೋಳಿ ಉತ್ತಮವಾಗಿ ರಂಗ ಸಜ್ಜುಗೊಳಿಸಿದ್ದಾರೆ. ಪೃಥ್ವಿನ್‌ ಅಜೆಕಾರು ಮಾರ್ಗದರ್ಶನದಲ್ಲಿ ಪ್ರತೀಕ್‌ ಶಿವಮೊಗ್ಗ, ಪುಪ್ಪರಾಜ್‌, ಮಿಥುನ್‌ ಬೆಳಕಿನ ನಿರ್ವಹಣೆ ಮಾಡಿದ್ದಾರೆ

ಅಂಬೆ ಪಾತ್ರಕ್ಕೆ ವಾಣಿ ಸುಕುಮಾರ್ ಜೀವ ತುಂಬಿದ್ದಾರೆ. ಭೀಷ್ಮ ಪಾತ್ರಧಾರಿ ರಂಗನಟ ನಿರ್ದೇಶಕ ಸುಕುಮಾರ ಮೋಹನ್‌ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಸಾಲ್ವನ ಪಾತ್ರಕ್ಕೆ ಸಂದೇಶ್‌ ಕೋಟ್ಯಾನ್, ಕಾಶೀರಾಜನ ಪಾತ್ರಕ್ಕೆ ಮಿಥುನ್ ಕುಮಾರ್ ಸೋನಾ ನ್ಯಾಯ ಒದಗಿಸಿದ್ದಾರೆ. ಪುಪ್ಪರಾಜ ಆನೇಕಲ್
ಅವರ ಪರಶುರಾಮನ ಪಾತ್ರ ಗಮನ ಸೆಳೆಯುತ್ತದೆ. ಸುಗಂಧಿ ಉಮೇಶ್‌ ಕಲ್ಮಾಡಿ ವರಂಗಿ ಅವರು ಸೇವಕಿ, ರಾಜಮಾತೆ ಸತ್ಯವತಿ ದೇವಿ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ. 90 ನಿಮಿಷದ ಅಂಬೆ ನಾಟಕ ಅತ್ಯಂತ ಮನೋಜ್ಞಕವಾಗಿ ಜನಮನ ಸೂರೆಗೊಂಡಿದೆ. ನಾಟಕದ ಮೂಲಕ ಹೆಣ್ಣಿನ ಸ್ವಾತಂತ್ರ್ಯದ ಹೆಬ್ಬಯಕೆ ನಾಡಿಗೆ ಪಸರಿಸಲಿದೆ.

ಮುದ್ರಾಡಿ ನಮತುಳುವರ್‌ ಕಲಾ ಸಂಘಟನೆಯ ಅಂಬೆ ನಾಟಕದ ದೃಶ್ಯ. 
ಮುದ್ರಾಡಿ ನಮತುಳುವರ್‌ ಕಲಾ ಸಂಘಟನೆಯ ಅಂಬೆ ನಾಟಕದ ದೃಶ್ಯ. 
ಮುದ್ರಾಡಿ ನಮತುಳುವರ್‌ ಕಲಾ ಸಂಘಟನೆಯ ಅಂಬೆ ನಾಟಕದ ದೃಶ್ಯ. 
ಮುದ್ರಾಡಿ ನಮತುಳುವರ್‌ ಕಲಾ ಸಂಘಟನೆಯ ಅಂಬೆ ನಾಟಕದ ದೃಶ್ಯ. 
ಮುದ್ರಾಡಿ ನಮತುಳುವರ್‌ ಕಲಾ ಸಂಘಟನೆಯ ಅಂಬೆ ನಾಟಕ ತಂಡ
ಮುದ್ರಾಡಿ ನಮತುಳುವರ್‌ ಕಲಾ ಸಂಘಟನೆಯ ಅಂಬೆ ನಾಟಕ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT