ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ರಿ: ನವಗ್ರಹಗಳ ಪ್ರೀತಿಗೆ ಶನಿಶ್ಚರ ಪೂಜೆ

Published 11 ಮೇ 2024, 13:28 IST
Last Updated 11 ಮೇ 2024, 13:28 IST
ಅಕ್ಷರ ಗಾತ್ರ

ಹೆಬ್ರಿ: ಇಲ್ಲಿನ ವಿಶ್ವಕರ್ಮ ಮಹಿಳಾ ಮಂಡಳಿ ವತಿಯಿಂದ ವಿಶ್ವಕರ್ಮ ಸಮಾಜ ಸೇವಾ ಸಂಘ, ವಿಶ್ವಕರ್ಮ ಯುವ ವೃಂದದ ಸಹಕಾರದಲ್ಲಿ ಸಂಘದ ಸಮುದಾಯ ಭವನದಲ್ಲಿ ಶನಿವಾರ ಸಾಮೂಹಿಕ ಶನೈಶ್ಚರ ಪೂಜೆ ರವೀಂದ್ರ ಪುರೋಹಿತ್‌ ನೇತೃತ್ವದಲ್ಲಿ ನಡೆಯಿತು.

ವಿದ್ವಾನ್‌ ಚಂದ್ರಕಾಂತ್‌ ಪುರೋಹಿತ್‌ ಶನೀಶ್ವರ ಮಹಾತ್ಮೆ ಧಾರ್ಮಿಕ ಕಥಾ ಪ್ರವಚನ ನೀಡಿ, ನವಗ್ರಹಗಳ ಪ್ರೀತಿಗಾಗಿ, ವಿವಿಧ ದೋಷಗಳ ನಿವಾರಣೆಗೆ ಶನೈಶ್ಚರ ಗ್ರಹದೋಷ ಇರುವ ವ್ಯಕ್ತಿಗಳು, ರಾಶಿಯವರಿಗೆ ಪೂಜೆಯಿಂದ ಹೆಚ್ಚು ಅನುಕೂಲವಾಗುತ್ತದೆ ಎಂದರು.

ಮಂಡಲ, ಕಲಶದಲ್ಲಿ ಆವಾಹನೆ ಮಾಡಿ ನವಗ್ರಹ ಪೂರ್ವಕವಾಗಿ ವಿಶೇಷವಾಗಿ ಮಕರ, ಕುಂಭ, ಮೀನ ರಾಶಿಯವರಿಗೆ ದೋಷ ನಿವಾರಣೆಗೆ ಸಾಮೂಹಿಕ ಪೂಜೆ, ಎಳ್ಳುಗಂಟು ದೀಪ ಹಚ್ಚಲಾಯಿತು. ವಿಶ್ವಕರ್ಮ ಮಹಿಳಾ ಮಂಡಳಿ ಅಧ್ಯಕ್ಷೆ ಸುಗುಣಾ ಶಿವರಾಮ ಆಚಾರ್ಯ ದಂಪತಿ ಪೂಜಾ ನೇತೃತ್ವ ವಹಿಸಿದ್ದರು. ವಿದ್ವಾನ್ ಚಂದ್ರಕಾಂತ ಪುರೋಹಿತ್‌ ಅವರನ್ನು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮಕೃಷ್ಣ ಆಚಾರ್, ಮಹಿಳಾ ಮಂಡಳಿ ಪದಾಧಿಕಾರಿಗಳು ಸನ್ಮಾನಿಸಿದರು.

ಪ್ರಮೋದ್ ಪುರೋಹಿತ್, ಪುರಂದರ ಪುರೋಹಿತ್ ಸಹಕರಿಸಿದರು. ಮಂಡಳಿಯ ಪದಾಧಿಕಾರಿಗಳು, ಗಣ್ಯರು, ಭಕ್ತರು ಇದ್ದರು. ವಿಶ್ವಕರ್ಮ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಶಶಿಶಂಕರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT