ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ಗೆಳತಿಯ ಧರ್ಮದ ಕುರಿತು ಅವಹೇಳನ: ವೈದ್ಯ ವಿದ್ಯಾರ್ಥಿ ಬಂಧನ

Published 4 ಸೆಪ್ಟೆಂಬರ್ 2024, 4:42 IST
Last Updated 4 ಸೆಪ್ಟೆಂಬರ್ 2024, 4:42 IST
ಅಕ್ಷರ ಗಾತ್ರ

ಉಡುಪಿ: ಗೆಳತಿಗೆ ಕಿರುಕುಳ ನೀಡಿ, ಆಕೆಯ ಧರ್ಮದ ಬಗ್ಗೆ ಅವಹೇಳನ ಮಾಡಿರುವ ಆರೋಪದಲ್ಲಿ ವೈದ್ಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿ ಮೂಲದ ಮಹಮ್ಮದ್ ಡ್ಯಾನಿಶ್‌ ಖಾನ್‌ (27) ಬಂಧಿತ ಆರೋಪಿ. ಪೊಲೀಸರು ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಡ್ಯಾನಿಶ್‌ ಮತ್ತು ವೈದ್ಯ ವಿದ್ಯಾರ್ಥಿನಿಯ ನಡುವೆ ಸ್ನೇಹ ಬೆಳೆದಿತ್ತು. ಮದುವೆಯ ವಿಚಾರ ಪ್ರಸ್ತಾಪ ಆದಾಗ ಆತ ಹಿಂದೂ ಧರ್ಮವನ್ನು ಅವಹೇಳನ ಮಾಡಿ ಆಕೆಯನ್ನು ನಿಂದಿಸಿರುವುದಾಗಿ, ಕಿರುಕುಳ ನೀಡಿರುವುದಾಗಿ ವಿದ್ಯಾರ್ಥಿನಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿನಿಯು ಡ್ಯಾನಿಶ್‌ ವಿರುದ್ಧ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT