ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ವಿವಿ: ಒಂದು ಗೆಲುವು, ಮತ್ತೊಂದು ಡ್ರಾ

ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಪುರುಷರ ಕಬಡ್ಡಿ ಚಾಪಿಯನ್‌ಷಿಪ್‌
Last Updated 19 ಡಿಸೆಂಬರ್ 2019, 15:33 IST
ಅಕ್ಷರ ಗಾತ್ರ

ಉಡುಪಿ: ಪೂರ್ಣಪ್ರಜ್ಞ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಪುರುಷರ ಕಬಡ್ಡಿ ಚಾಪಿಯನ್‌ಷಿಪ್‌ನಲ್ಲಿ ಗುರುವಾರ ಮಂಗಳೂರು ವಿಶ್ವವಿದ್ಯಾಲಯ ತಂಡ ಗೆಲುವು ಪಡೆದು ಮುಂದಿನ ಸುತ್ತು ಪ್ರವೇಶಿಸಿತು.

ಗಡ್ಚಿರೋಲಿಯ ಗೋಂಡ್ವಾನ ವಿವಿ ವಿರುದ್ಧ 95–16 ಪಾಯಿಂಟ್ಸ್‌ಗಳ ಅಂತರದಲ್ಲಿ ಮಂಗಳೂರು ವಿವಿ ಜಯಗಳಿಸಿತು. ನಂತರ ಸಂಜೆ ಕುರುಕ್ಷೇತ್ರ ವಿವಿ ಹಾಗೂ ಮಂಗಳೂರು ವಿವಿ ನಡುವಿನ ಪಂದ್ಯ ಡ್ರಾ ಆಯಿತು. ಉಭಯ ತಂಡಗಳು 32–32 ಪಾಯಿಂಟ್ಸ್‌ ಪಡೆದುಕೊಂಡರು.

ಫಲಿತಾಂಶದ ವಿವರ:

ಲೀಗ್ ಹಂತದಲ್ಲಿಚೆನ್ನೈನ ಎಸ್‌ಆರ್‌ಎಂ ವಿವಿ ವಿರುದ್ಧ68–17 ಪಾಯಿಂಟ್ಸ್‌ಗಳಿಂದರೋಹ್ಟಕ್‌ನ ಎಂ.ಡಿ ವಿವಿ ಗೆಲುವು ಸಾಧಿಸಿದರೆ, ರಾಯ್ಪುರದ ರವಿಶಂಕರ್ ವಿವಿ ವಿರುದ್ಧ 47–35 ಪಾಯಿಂಟ್ಸ್‌ಗಳಿಂದ ಕೋಟ ವಿವಿ ಜಯ ಗಳಿಸಿತು.

ಬಿವಾನಿಯ ಸಿಬಿಎಲ್ ವಿವಿ ವಿರುದ್ಧ 42–31ರಿಂದ ಉತ್ತರ ಪ್ರದೇಶದ ವಿಬಿಎಸ್‌ ವಿವಿ ಹಾಗೂ ಬಿಹಾರದ ಎಲ್‌ಎನ್‌ ಮಿತಿಲಾ ವಿವಿ ವಿರುದ್ಧ 60–26ರಿಂದ ಕೊಲ್ಲಾಪುರದ ಶಿವಾಜಿ ವಿವಿ, ವಾರಣಸಿಯ ಎಂಜಿಕೆವಿಪಿ ವಿರುದ್ಧ 42–33ರಿಂದ ಕುರುಕ್ಷೇತ್ರ ವಿವಿ, ತಿರುನಲ್ವೇಲಿಯ ಎಂ.ಎಸ್‌ ವಿವಿ ವಿರುದ್ಧ 53–23ರಿಂದ ಅಮೃತ್‌ಸರದ ಜಿಎನ್‌ಡಿ ವಿವಿ, ಮುಂಬೈ ವಿವಿ ವಿರುದ್ಧ 44–23ರಿಂದಚೆನ್ನೈನ ವಿಇಎಲ್‌ಎಸ್‌ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ ಅಂಡ್ ಟೆಕ್ನಾಲಜಿ ವಿವಿ ಜಯಗಳಿಸಿ ಮುಂದಿನ ಹಂತ ಪ್ರವೇಶಿಸಿತು.

ನಂತರ ನಡೆದ ಪಂದ್ಯದಲ್ಲಿ ಕೊಲ್ಲಾಪುರದ ಶಿವಾಜಿ ವಿವಿ ವಿರುದ್ಧ 48–17ರಿಂದ ಚೆನ್ನೈನ ಎಸ್‌ಆರ್‌ಎಂ ವಿವಿ,ಗಡ್ಚಿರೋಲಿಯ ಗೋಂಡ್ವಾನ ವಿವಿ ವಿರುದ್ಧ 68–10ರಿಂದ ವಾರಣಸಿಯ ಎಂಜಿಕೆವಿಪಿ ವಿವಿ,ರಾಯ್ಪುರದ ರವಿಶಂಕರ್ ವಿವಿ ವಿರುದ್ಧ 35–12ರಿಂದಅಮೃತ್‌ಸರದ ಜಿಎನ್‌ಡಿ ವಿವಿ ಗೆಲುವು ಸಾಧಿಸಿತು.

ಚೆನ್ನೈನ ವಿಇಎಲ್‌ಎಸ್‌ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ ಅಂಡ್ ಟೆಕ್ನಾಲಜಿ ವಿವಿ ಹಾಗೂ ಬಿವಾನಿಯ ಸಿಬಿಎಲ್‌ ವಿವಿ ನಡುವಿನಪಂದ್ಯ 47–47ರಿಂದ ಡ್ರಾ ಆಯಿತು.ಬಿಹಾರದ ಎಲ್‌ಎನ್‌ ಮಿತಿಲಾ ವಿವಿ ವಿರುದ್ಧ 48–11 ಪಾಯಿಂಟ್ಸ್‌ಗಳಿಂದರೋಹ್ಟಕ್‌ನ ಎಂ.ಡಿ ವಿವಿ ಗೆದ್ದು ಮುಂದಿನ ಸುತ್ತು ಪ್ರವೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT