ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲ್ಲಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಪ್ರಥಮ ವರ್ಧಂತಿ ಉತ್ಸವ ಸಂಪನ್ನ

Published 8 ಮಾರ್ಚ್ 2024, 14:20 IST
Last Updated 8 ಮಾರ್ಚ್ 2024, 14:20 IST
ಅಕ್ಷರ ಗಾತ್ರ

ಬ್ರಹ್ಮಾವರ: ಕೋಟ ಹರ್ತಟ್ಟು ಗಿಳಿಯಾರಿನ ಕಲ್ಲಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಪ್ರಥಮ ವರ್ಷದ ವರ್ಧಂತ್ಯೋತ್ಸವ ಕಾರ್ಯಕ್ರಮ ಗುರುವಾರ ಸಂಪನ್ನಗೊಂಡಿತು.

ಪ್ರಥಮ ವರ್ಧಂತಿ ಉತ್ಸವದ ಅಂಗವಾಗಿ ವೇದಮೂರ್ತಿ ಸುಧೀರ ಐತಾಳ ನೇತೃತ್ವದಲ್ಲಿ, ತಂತ್ರಿಗಳಾದ ಮಣಿಕಲ್ ಮಂಜುನಾಥ ಉಡುಪ ಪೌರೋಹಿತ್ಯದಲ್ಲಿ ಮಹಾಲಿಂಗೇಶ್ವರ ದೇವರಿಗೆ ನವಕ ಪ್ರಧಾನ ದ್ರವ್ಯ ಕಲಶ ಕಲಾತತ್ವ ಹೋಮ ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ರಂಗಪೂಜೆ, ಪಂಚವರ್ಣ ಮಹಿಳಾ ಮಂಡಳಿಯ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮಗಳು ನಡೆದವು.

ಧಾರ್ಮಿಕ ವಿಧಿವಿಧಾನದಲ್ಲಿ ದೇವಸ್ಥಾನದ ಅಧ್ಯಕ್ಷ ಶೇವಧಿ ಸುರೇಶ ಗಾಣಿಗ ದಂಪತಿ, ಜಿ.ಗೋಪಾಲಕೃಷ್ಣ ಮಯ್ಯ ದಂಪತಿ ಭಾಗಿಯಾದರು.

ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಹರೀಶ ದೇವಾಡಿಗ, ಸ್ಥಳೀಯರಾದ ವಾಸುದೇವ ಮಯ್ಯ, ಚಂದ್ರಿಕ ಭಟ್ ಸಿದ್ಧ(ಶ್ರೀಧರ) ದೇವಾಡಿಗ, ತಿಮ್ಮ ಕಾಂಚನ್, ಚಂದ್ರ ಹಾಡಿಕೆರೆ, ಬಾಬು ಶೆಟ್ಟಿ, ನಾಗರಾಜ ಗಾಣಿಗ, ಗಿರೀಶ ದೇವಾಡಿಗ, ದೇವಸ್ಥಾನದ ಸೇವಾ ಸಮಿತಿಯ ಶೇಖರ ದೇವಾಡಿಗ, ಪ್ರದೀಪ ದೇವಾಡಿಗ, ಕೀರ್ತೀಶ ಪೂಜಾರಿ, ದಿನೇಶ ದೇವಾಡಿಗ, ಪ್ರಶಾಂತ ದೇವಾಡಿಗ, ಶಾಂತಾ ಆಚಾರ್, ಗುಲಾಬಿ ಪೂಜಾರಿ, ಜಗದೀಶ ದೇವಾಡಿಗ, ದಿನೇಶ ಪೂಜಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT