ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ| ಪರೀಕ ಅರಮನೆಯಲ್ಲಿ ಕಂಬಳ ಸಂಭ್ರಮ

ಕೆಸರಿನಲ್ಲಿ ಓಡಿ ರಂಜಿಸಿದ ಕೋಣಗಳು
Last Updated 12 ಡಿಸೆಂಬರ್ 2019, 9:37 IST
ಅಕ್ಷರ ಗಾತ್ರ

ಉಡುಪಿ: ನೂರಾರು ವರ್ಷಗಳ ಇತಿಹಾಸ ಇರುವಪರೀಕ ಅರಮನೆಯ ಜಮೀನಿನಲ್ಲಿ ನಡೆಯುವ ಸಾಂಪ್ರದಾಯಿಕ ಕಂಬಳವನ್ನು ಆಧುನಿಕವಾಗಿ ನಡೆಸುವ ಉದ್ದೇಶವಿದ್ದು, ಇದಕ್ಕೆ ಸರ್ಕಾರದ ಬೆಂಬಲ ಅಗತ್ಯವಿದೆ ಎಂದು ಜಿಲ್ಲಾ ಕಂಬಳ ಸಮಿತಿಯ ಸದಸ್ಯ ವಿಜಯಕುಮಾರ್ ತೆಂಗಿನಮನೆ ಹೇಳಿದರು.

ಬುಧವಾರ ಪರೀಕದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಜೈನರ ಆಳ್ವಿಕೆಯಲ್ಲಿದ್ದ ಪ್ರದೇಶದಲ್ಲಿ 1913ರಲ್ಲಿ ಯೋಜನಾಗಂಧಿ ಹೆಗ್ಗಡ್ತಿ ಅವರು ಅರಮನೆ ನಿರ್ಮಿಸಿದ್ದರು. ಅಂದಿನಿಂದ ಇಲ್ಲಿ ಕಂಬಳವನ್ನು ನಡೆಸಿಕೊಂಡು ಬರುತ್ತಿರುವುದಕ್ಕೆ ದಾಖಲೆಗಳಿವೆ ಎಂದರು

ದೈವರಾಧನೆಯ ಭಾಗವಾಗಿ ಕಂಬಳವು ನಡೆದುಕೊಂಡು ಬಂದಿದ್ದು, ಪ್ರತಿವರ್ಷ 30-40 ಜೋಡಿ ಕೋಣಗಳು ಭಾಗವಹಿಸುತ್ತವೆ. ಹಿರಿಯ, ಕಿರಿಯ ವಿಭಾಗದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ಕೋಣಗಳಿಗೆ ತಲಾ 4 ಗ್ರಾಂ, 2 ಗ್ರಾಂ ಚಿನ್ನದ ಪದಕಗಳನ್ನು ಬಹುಮಾನವಾಗಿ ನೀಡಲಾಗುತ್ತಿದೆ.ತೀರ್ಪು ಪಾರದರ್ಶಕವಾಗಿರಬೇಕು ಎಂಬ ಕಾರಣಕ್ಕೆಲೇಸರ್ ಬೀಮ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಪರೀಕ ಅರಮನೆಯ ಪ್ರಭಾತ್ ರೈ ಮಾತನಾಡಿ, ಕಂಬಳಕ್ಕೆ ₹ 10 ಲಕ್ಷ ವೆಚ್ಚವಾಗುತ್ತದೆ. ಜಾತಿ–ಮತ ಭೇದವಿಲ್ಲದೆ ಎಲ್ಲರೂ ಕಂಬಳದಲ್ಲಿ ಭಾಗವಹಿಸುತ್ತಾರೆ. ಯುವಕರಲ್ಲಿ ಕ್ರೀಡೆಯ ಜತೆಗೆ ದೈವಾರಾಧನೆಯ ಆಸಕ್ತಿಯೂ ಬೆಳೆಯುತ್ತಿದೆ. ಕಂಬಳ ಉಳಿವಿಗೆ ಸರ್ಕಾರದ ಆರ್ಥಿಕ ನೆರವು ಅಗತ್ಯ ಎಂದರು.

ಕಂಬಳ ನಿಂತಿಲ್ಲ:ಪೇಟಾ ಸಂಸ್ಥೆ ಕಂಬಳದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ 2016 - 17ರಲ್ಲಿ ಬೇರೆ ಕಡೆಗಳಲ್ಲಿ ಕಂಬಳ ನಿಂತಿದ್ದರೂ, ಶತಮಾನಗಳ ಇತಿಹಾಸ ಇರುವ ಪರೀಕ ಕಂಬಳ ಇದುವರೆಗೂ ನಿಂತಿಲ್ಲ. ಆ ವರ್ಷ ಹೊರಗಿನ ಕೋಣಗಳ ಬದಲಾಗಿ,ಮನೆಯ ಕೋಣಗಳನ್ನು ಗದ್ದೆಗಿಳಿಸಲಾಗಿತ್ತು ಎಂದು ಪ್ರಭಾತ್ ರೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅರಮನೆಯ ಚಿತ್ತರಂಜನ್ ರೈ, ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್.ಶೆಟ್ಟಿ, ಕೋಣಗಳ ಯಜಮಾನ ಲೋಕೇಶ್ ಶೆಟ್ಟಿ, ಸುಫಲ್ ಚಂದ್ರ ರೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT