ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರ ಒಡಗೂಡುವಿಕೆಯಲ್ಲಿ ಕಂಬಳ: ಬಾರಾಡಿ ಬೀಡು ಜೀವಂಧರ್

Published 10 ಡಿಸೆಂಬರ್ 2023, 13:10 IST
Last Updated 10 ಡಿಸೆಂಬರ್ 2023, 13:10 IST
ಅಕ್ಷರ ಗಾತ್ರ

ಕಾರ್ಕಳ: ಬಾರಾಡಿ ಬೀಡು ಕಂಬಳ ಎಲ್ಲರ ಒಡಗೂಡುವಿಕೆಯಲ್ಲಿ ನಡೆಯುತ್ತಿದೆ ಎಂದು ಕಂಬಳ ಪ್ರವರ್ತಕ ಬಾರಾಡಿ ಬೀಡು ಜೀವಂಧರ್ ಬಲ್ಲಾಳ್ ಹೇಳಿದರು.

ತಾಲ್ಲೂಕಿನ ಕಾಂತಾವರ ಬಾರಾಡಿ ಬೀಡು ಪಾಂಡ್ಯರಾಜ್ ಬಲ್ಲಾಳ್ ಸ್ಮಾರಕ ಕಂಬಳ ಕ್ರೀಡಾಂಗಣದಲ್ಲಿ 37ನೇ ವರ್ಷದ ಸೂರ್ಯಚಂದ್ರ ಕಂಬಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕಂಬಳ ವ್ಯವಸ್ಥಿತವಾಗಿ ನಡೆಯುವಲ್ಲಿ ಕೋಣಗಳ ಯಜಮಾನರು, ತೀರ್ಪುಗಾರರು, ಕಂಬಳಾಭಿಮಾನಿಗಳು ಮುಖ್ಯ ಕಾರಣ’ ಎಂದರು.

ಮಾಜಿ ಸಚಿವ ಮೂಡಬಿದಿರೆಯ ಕೆ.ಅಭಯಚಂದ್ರ ಜೈನ್, ಜಯವರ್ಮ ರಾಜ್ ಬಲ್ಲಾಳ್ ಮಂಗಳೂರು, ರಾಜ ವರ್ಮರಾಜ್ ಬಲ್ಲಾಳ್ ಮಂಗಳೂರು, ಪ್ರಸನ್ನ ಕುಮಾರ್ ಬೆಳ್ತಂಗಡಿ, ಪ್ರಸಾದ್ ಕಾಸರಗೋಡು ಅತಿಥಿಗಳಾಗಿ ಭಾಗವಹಿಸಿದ್ದರು.

ಬಾರಾಡಿ ಮನೆತನದ ಹಿರಿಯರಾದ ಸುಮತಿ ಆರ್ ಬಲ್ಲಾಳ್, ಕಂಬಳ ಅಕಾಡೆಮಿಯ ಗುಣಪಾಲ ಕಡಂಬ, ಜಯೇಶ್ ಬಲ್ಲಾಳ್, ಸಂಜಯ್ ಬಲ್ಲಾಳ್, ಅಜಿತ್ ಬಲ್ಲಾಳ್, ದೆಹಲಿಯ ರತ್ನಂಜಯ ರಾಜ್, ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್, ನಕ್ರೆ ಅಂತೋನಿ ಡಿಸೋಜ, ವಿಜಯಕುಮಾರ್ ಕಂಗಿನ ಮನೆ, ಪದ್ಮರಾಜ್ ಹೆಗಡೆ ಮುಂಬಯಿ, ರವೀಂದ್ರ ಕುಮಾರ್ ಕುಕ್ಕುಂದೂರು, ಧನಂಜಯ ಶೆಟ್ಟಿ ಮುಂಬಯಿ, ಇಶಾನ್ ಬಲ್ಲಾಳ್, ಸುಭಾಶ್ಚಂದ್ರ ಹೆಗಡೆ ಕಾರ್ಕಳ, ವಿದ್ಯಾದರ್ ಜೈನ್ ರೆಂಜಾಳ, ಮಹಾವೀರ ಪಾಂಡಿ ಕಾಂತಾವರ, ಧರ್ಮರಾಜ ಕಂಬಳಿ, ಗುಣಪಾಲ ಹೆಗಡೆ, ಸದೀಶ್ ಕುಮಾರ್ ಆರಿಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT