ಬುಧವಾರ, ಜನವರಿ 20, 2021
26 °C
₹1 ಕೋಟಿ ಪ್ರಶ್ನೆಗೆ ಉತ್ತರಿಸದೆ ಹೊರಬಂದ ಬಾಲಕ

ಕೆಬಿಸಿ: ಉಡುಪಿಯ ಅನಮಯಗೆ ₹50 ಲಕ್ಷ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಬಾಲಿವುಡ್‌ ನಟ ಅಮಿತಾಬ್ ಬಚ್ಚನ್‌ ನಿರೂಪಣೆಯಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕೌನ್‌ ಬನೇಗಾ ಕರೋಡ್‌ಪತಿ‘ ಕಾರ್ಯಕ್ರಮದಲ್ಲಿ ಉಡುಪಿಯ ಬಾಲಕ ಅನಮಯ ₹ 50 ಲಕ್ಷ ಬಹುಮಾನ ಗೆದ್ದಿದ್ದಾನೆ.

ಡಿ.14ರಿಂದ 17ರವರೆಗೆ ಪ್ರಸಾರವಾಗುವ ಕೆಬಿಸಿ ಸ್ಟುಡೆಂಟ್ಸ್ ವೀಕ್‌ ಸರಣಿಯಲ್ಲಿ ಭಾಗವಹಿಸಿದ್ದ ಅನಮಯ, ಅಮಿತಾಬ್ ಕೇಳಿದ 14 ಪ್ರಶ್ನೆಗಳಿಗೆ ಉತ್ತರ ನೀಡಿ ₹ 50 ಲಕ್ಷ ಗೆದ್ದುಕೊಂಡ. ₹ 1 ಕೋಟಿ ಬಹುಮಾನದ 15ನೇ ಪ್ರಶ್ನೆಗೆ ಉತ್ತರಿಸದೆ ಸ್ಪರ್ಧೆಯಿಂದ ಹೊರಬಂದ.

ಸ್ಪರ್ಧೆಯ ನಿಯಮಾವಳಿಯ ಪ್ರಕಾರ 6 ವರ್ಷದ ಬಳಿಕ ಅನಮಯಗೆ ₹ 50 ಲಕ್ಷ ಬಹುಮಾನದ ಮೊತ್ತ ಹಾಗೂ ಬಡ್ಡಿಯ ಹಣ ಒಟ್ಟಾಗಿ ಕೈಸೇರಲಿದೆ. ಜತೆಗೆ, ₹ 5 ಲಕ್ಷದ ಸ್ಕಾಲರ್ ಶಿಪ್‌ ಕೂಡ ಅನಮಯ ಪಾಲಾಯಿತು.

ಅನಮಯ ಕಾರುಗಳ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿದ್ದು, ಕಾರ್ಯಕ್ರಮದಲ್ಲಿ ಅಮಿತಾಬ್‌ ಕಾರಿನ ಕುರಿತಾಗಿ ಕೇಳಿದ ಪ್ರಶ್ನೆಗಳಿಗೆಲ್ಲ ಪಟಪಟನೆ ಉತ್ತರಿಸುವ ಮೂಲಕ ಎಲ್ಲರನ್ನು ದಂಗು ಬಡಿಸಿದ. ಜಗತ್ತಿನ ದುಬಾರಿ ಕಾರುಗಳ ಹೆಸರು, ವಿಶೇಷತೆಯ ಕುರಿತು ವಿವರ ನೀಡಿದ ಅನಮಯ, ಮುಂದೆ ಕಾರು ತಯಾರಿಕಾ ಕಂಪನಿ ಆರಂಭಿಸುವ ಇರಾದೆಯನ್ನು ವ್ಯಕ್ತಪಡಿಸಿದ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು