ಕಾಪು (ಪಡುಬಿದ್ರಿ): ಸರ್ಕಾರಿ ಕಾರ್ಯಕ್ರಮಗಳು, ಇತರ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ವೇತನ ನೀಡಲು ಹಣ ಇದೆ. ಆದರೆ ಪುರಸಭೆ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ನಡೆಸಲು ಅನುದಾನ ಸಿಗುತ್ತಿಲ್ಲ. ಹೀಗಾದರೆ ನಾವೇನು ಮಾಡಬೇಕು ಎಂದು ಪ್ರಶ್ನಿಸಿದ, ಪುರಸಭೆ ಸದಸ್ಯರು, ಕಾರ್ಯಕ್ರಮಗಳಿಗೆ ಪುರಸಭೆ ಖರ್ಚು ನಿರ್ವಹಣೆ ಮಾಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಕಾಪು ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮಾಸಿಕ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.

ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಸಂಬಂಧಿಸಿ ₹72 ಸಾವಿರ ಖರ್ಚಾದ ಬಗ್ಗೆ ವಿವರ ನೀಡಿದಾಗ, ಇದಕ್ಕೆ ಆಕ್ಷೇಪಿಸಿದ ಹಿರಿಯ ಸದಸ್ಯ ಅರುಣ್ ಶೆಟ್ಟಿ ಪಾದೂರು, ‘ಸರ್ಕಾರಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಪುರಸಭೆಯಿಂದ ಹಣ ಪಾವತಿಯಾಗಿದ್ದು, ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರು, ಸದಸ್ಯರಿಗೆ ಗೌರವವನ್ನೂ ನೀಡಿಲ್ಲ. ನಮಗೆ ಗೌರವ ಸಿಗದೇ ಇರುವ ಕಡೆ ನಾವ್ಯಾಕೆ ಪುರಸಭೆಯಿಂದ ಖರ್ಚು ಮಾಡಬೇಕು’ ಎಂದು ಪ್ರಶ್ನಿಸಿದರು.

ಪುರಸಭಾ ವ್ಯಾಪ್ತಿಯ ಪಕೀರ್ಣಕಟ್ಟೆ ವಾರ್ಡ್ನಲ್ಲಿ ಹಲವು ರಸ್ತೆಗಳು ದುರಸ್ತಿ ಕಂಡಿಲ್ಲ. ಎರಡು ವರ್ಷಗಳಿಂದ ದುರಸ್ತಿಗೆ ಒತ್ತಾಯಿಸಿದರೂ, ಅನುದಾನ ಇಲ್ಲ ಎಂಬ ಕಾರಣ ಬರುತ್ತಿದೆ ಎಂದು ಸದಸ್ಯ ನೂರುದ್ದೀನ್ ಹೇಳಿದರು.

ಇದಕ್ಕೆ ಉತ್ತರಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪುರಸಭೆ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ನಡೆಸುವ ಬಗ್ಗೆ ಸದಸ್ಯರ ಅಭಿಪ್ರಾಯ, ಸಲಹೆ ಪಡೆದು ನಿರ್ಣಯ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು. ಮುಂದೆ ಈ ಪ್ರದೇಶಗಳ ಅಭಿವೃದ್ಧಿಗೆ ಅಲ್ಪಸಂಖ್ಯಾತ ಅನುದಾನ ಮೀಸಲಿಡುವುದಾಗಿ ಹೇಳಿದರು.

ಪ್ರಾಧಿಕಾರದಲ್ಲಿ ಸಮಸ್ಯೆ ಇದ್ದು, ಅಧಿಕಾರಿಗಳಿಲ್ಲದೆ ಜನರಿಗೆ ತೊಂದರೆಯಾಗುತ್ತಿದೆ. ಜನರು ಪ್ರಾಧಿಕಾರಕ್ಕೂ ಪುರಸಭೆಗೂ ಸಂಬಂಧ ಕಲ್ಪಿಸಿ, ಪುರಸಭೆಯನ್ನು ದೂರುತ್ತಿದ್ದಾರೆ ಎಂದು ಅರುಣ್ ಶೆಟ್ಟಿ ಪಾದೂರು ಹೇಳಿದರು.

ಶಾಸಕರು ಉತ್ತರಿಸಿ, ಕಾಪು ಪ್ರಾಧಿಕಾರಕ್ಕೆ ಪೂರ್ಣಕಾಲಿಕ ಅಧಿಕಾರಿಗಳು ಬರಲು ಹಿಂದೇಟು ಹಾಕುತ್ತಿದ್ದಾರೆ. ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈವರೆಗೆ 9 ಅಧಿಕಾರಿಗಳು ಬಂದು ಹೋಗಿದ್ದಾರೆ. 470ಕ್ಕೂ ಅಧಿಕ ಕಡತಗಳು ಬಾಕಿ ಇವೆ. ಮುಂದಿನ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಯಲ್ಲಿ ಸ್ಥಳೀಯಾಡಳಿತ ಸಮಿತಿಯ ಚುನಾಯಿತ ಸದಸ್ಯರನ್ನು ನಾಮನಿರ್ದೇಶನಗೊಳಿಸುವ ಅಗತ್ಯವಿದೆ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ನಿಯಂತ್ರಣಕ್ಕೆ ಆರೋಗ್ಯ ಇಲಾಖೆ, ಪುರಸಭೆ ಕ್ರಮ ತೆಗೆದುಕೊಳ್ಳುವಂತೆ ಸದಸ್ಯ ನೂರುದ್ದೀನ್, ಕಿರಣ್ ಆಳ್ವ, ಫರ್ಜಾನ ಮನವಿ ಮಾಡಿದರು.

ಕಾಪು ಪೇಟೆಯಲ್ಲಿ ಟ್ರಾಫಿಕ್ ಅವ್ಯವಸ್ಥೆ, ಗೊಂದಲ, ಪೇಟೆಯಲ್ಲಿ ವಲಸೆ ಕಾರ್ಮಿಕರ ಜಗಳ, ಹೊಡೆದಾಟ, ಗೂಡಂಗಡಿಗಳ ಹಾವಳಿ, ಮಲ್ಲಾರು ಗರಡಿ ವಾರ್ಡ್ನ ಖಾಸಗಿ ಲೇಔಟ್ನಲ್ಲಿ ಬಿ ಖಾತೆದಾರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಪುರಸಭೆ ವಿಫಲವಾಗಿದೆ ಎಂಬ ಬಗ್ಗೆ ಫರ್ಜಾನ, ಮೋಹಿನಿ ಶೆಟ್ಟಿ, ರತ್ನಾಕರ ಶೆಟ್ಟಿ, ಶೈಲೇಶ್ ಅಮೀನ್ ಮಾತನಾಡಿದರು. ಉಪಾಧ್ಯಕ್ಷೆ ಸರಿತಾ, ಕಂದಾಯ ಅಧಿಕಾರಿ ಶಶಿಕಲಾ ಇದ್ದರು.

‘ಕುಳಿತುಕೊಳ್ಳಲು ಫಲಕ ಅಳವಡಿಸಿ’

‘ಇಬ್ಬರು ಎಸ್ಡಿಪಿಐ ಸದಸ್ಯರಿದ್ದಾರೆ. ಅವರಿಗೆ ಸಭೆಯಲ್ಲಿ ಕುಳಿತುಕೊಳ್ಳಲು ಸೂಕ್ತ ಜಾಗವನ್ನು ಗುರುತಿಸಿ. ನಮ್ಮ ಸದಸ್ಯರ ಬಳಿ ಕುಳಿತುಕೊಳ್ಳುವುದು ಬೇಡ’ ಎಂದು ಫರ್ಜಾನಾ ಒತ್ತಾಯಿಸಿದರು. ಇದಕ್ಕೆ ಕಾಂಗ್ರೆಸ್ನ ಹಲವು ಸದಸ್ಯರು ಧ್ವನಿಗೂಡಿಸಿದರು. ಎಸ್ಡಿಪಿಐ ಸದಸ್ಯ ನೂರುದ್ದೀನ್ ಆಕ್ಷೇಪ ವ್ಯಕ್ತಪಡಿಸಿ ‘ನಾವು ಜನಪ್ರತಿನಿಧಿಗಳು. ಜನರ ಸಮಸ್ಯೆ ಪರಿಹರಿಸುವುದೇ ನಮ್ಮ ಗುರಿಯಾಗಬೇಕೇ ಹೊರತು ಪಕ್ಷದ ಬಗ್ಗೆ ಮಾತನಾಡಲು ನಮ್ಮನ್ನು ಜನರು ಆಯ್ಕೆ ಮಾಡಿಲ್ಲ. ಸದಸ್ಯರು ಎಲ್ಲಿ ಕುಳಿತಕೊಳ್ಳಬೇಕು ಎಂದು ಫಲಕ ಅಳವಡಿಸಿ’ ಎಂದರು.

- ವೇತನ ಸ್ಥಗಿತಕ್ಕೆ ಆಗ್ರಹ

ಕಾಪು ಪುರಸಭೆಯಲ್ಲಿ ಒಟ್ಟು 69 ಮಂದಿ ಸಿಬ್ಬಂದಿ ಇದ್ದು 19 ಮಂದಿ ಕಾಯಂ31 ಮಂದಿ ಪೌರ ಕಾರ್ಮಿಕರು 7 ಕನಿಷ್ಠ ವೇತನ 12 ಹೊರಗುತ್ತಿಗೆ ಸಿಬ್ಬಂದಿ ಇದ್ದು ಇಬ್ಬರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇಬ್ಬರಿಗೆ ಪುರಸಭೆಯಿಂದ ನೀಡಲಾಗುತ್ತಿರುವ ವೇತನವನ್ನು ಸ್ಥಗಿತಗೊಳಿಸುವಂತೆ ಸದಸ್ಯರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.