ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಲೂರು: ಆನ್‌ಲೈನ್‌ ಸೇವೆ ಆರಂಭ

Last Updated 23 ಮೇ 2020, 16:05 IST
ಅಕ್ಷರ ಗಾತ್ರ

ಕುಂದಾಪುರ: ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಪ್ರವರ್ಗ ’ಎ’ ದರ್ಜೆಯ ದೇವಸ್ಥಾನಗಳಲ್ಲಿ ಪ್ರಮುಖಕ್ಷೇತ್ರವಾಗಿರುವ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನಕ್ಕೆ ಕಳೆದ ವರ್ಷದ ಮಾರ್ಚ್‌, ಎಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಬಂದಿರುವ ಆದಾಯಕ್ಕೆ ಹೋಲಿಸಿದ್ದಲ್ಲಿ ಈ ಬಾರಿಯ ಆದಾಯದಲ್ಲಿ ಕಡಿಮೆಯಾಗಿರುವ ಬಗ್ಗೆ ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

2019 ನೇ ಮಾರ್ಚ್‌, ಏಪ್ರಿಲ್‌ ಹಾಗೂ ಮೇ ಮೂರು ತಿಂಗಳ ಅವಧಿಯಲ್ಲಿ ದೇವಸ್ಥಾನಕ್ಕೆ 13 ಕೋಟಿ ಆದಾಯ ಬಂದಿದ್ದು, ಇದೀಗ ದೇಶಾದ್ಯಾಂತ ಕೊವಿಡ್‌–19 ರ ಕಾರಣದಿಂದ ಲಾಕ್‌ ಡೌನ್‌ ಆಗಿರುವುದರಿಂದ ಈ ಮೂರು ತಿಂಗಳ ಅವಧಿಯಲ್ಲಿ ಅಂದಾಜು 14 ಕೋಟಿ ಆದಾಯ ಕಡಿಮೆಯಾಗಿದೆ ಎಂದು ದೇಗುಲದ ಕಾರ್ಯನಿರ್ವಹಣಾಧಿಕಾರಿಯವರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೊವಿಡ್‌ ಕಾರಣದಿಂದ ದೇವಸ್ಥಾನಗಳಿಗೆ ಪ್ರವೇಶ ನಿರ್ಬಂಧ ಇರುವುದರಿಂದ ಸೇವೆ ಮಾಡುವ ಭಕ್ತಾದಿಗಳು ಆನ್‌ಲೈನ್‌ ಮೂಲಕ ಸೇವೆಗಳಿಗೆ ಹಣ ಸಂದಾಯ ಮಾಡಬಹುದು.

ಸೇವೆ ಮಾಡಲು ಇಚ್ಚಿಸುವ ಭಕ್ತಾಧಿಗಳು ಕೊಲ್ಲೂರಿನ ಸಿಂಡಿಕೇಟ್‌ (ಕೆನರಾ) ಬ್ಯಾಂಕ್‌ನ ದೇವಸ್ಥಾನದ ಉಳಿತಾಯ ಖಾತೆ ಸಂಖ್ಯೆ 01752200000014 ( ಐಎಫ್‌ಸಿ ಸಂಖ್ಯೆ : ಎಸ್‌ವೈಎನ್‌ಬಿ 0000175) ಅಥವಾ ಕೊಲ್ಲೂರಿನ ವಿಜಯ ಬ್ಯಾಂಕ್‌ ( ಬ್ಯಾಂಕ್‌ ಆಫ್‌ ಬರೋಡಾ ) ಖಾತೆ ಸಂಖ್ಯೆ 142801011000001 ( ಐಎಫ್‌ಸಿ ಸಂಖ್ಯೆ : ವಿಐಜೆಬಿ0001428) ಗೆ ಹಣ ಸಂದಾಯ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ kollurmookambika.org ಮೂಲಕ ವಿವರ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT