ಕೋಟ(ಬ್ರಹ್ಮಾವರ): ‘ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆಯು ಆತ್ಮತೃಪ್ತಿಯನ್ನು ತರುತ್ತದೆ. ನಾವು ಮಾಡಿದ ಸೇವೆಯನ್ನು ಜನರು ನೆನಪಿಸಿದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ’ ಎಂದು ಪ್ರೇಮಾನಂದ ಶೆಟ್ಟಿ ಕಟ್ಕೇರಿ ಹೇಳಿದರು.
ಕೋಟ ಸಿಟಿ ರೋಟರಿ ಕ್ಲಬ್‍ನ 2021-22ನೇ ಸಾಲಿನ ಪದಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಉದಯ ಶೆಟ್ಟಿ ಹಾಗೂ ಕಾರ್ಯದರ್ಶಿ ಶಿವಾನಂದ ನಾಯರಿ ಅವರಿಗೆ ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3182ರ ವಲಯ 2ರ ಸಹಾಯಕ ಗವರ್ನರ್ ಧನಂಜಯ ಪ್ರಭು ಪದಪ್ರದಾನ ಮಾಡಿದರು.
ಉದ್ಯಮಿ ಕರುಣಾಕರ ಕಾಂಚನ್ ಹೊಸ ಸದಸ್ಯರಾಗಿ ಸೇರ್ಪಡೆಗೊಂಡರು. ವಲಯ ಸೇನಾನಿ ಗಂಗಾಧರ ಉಡುಪ ಕ್ಲಬ್‍ನ ಮುಖವಾಣಿ ದಿಕ್ಸೂಚಿಯನ್ನು ಬಿಡುಗಡೆಗೊಳಿಸಿದರು. ಸಾಲಿಗ್ರಾಮ ಕಾರ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮಿನ್ನು ಎ.ಸಿ ಹಾಗೂ ಕೋಟದ ಮೆಸ್ಕಾಂ ಶಾಖೆಯಲ್ಲಿ ಜ್ಯೂನಿಯರ್ ಪವರ್ ಮ್ಯಾನ್ ರಮೇಶ ಮೇಳೆದ ಅವರನ್ನು ಗೌರವಿಸಲಾಯಿತು. ನಿರ್ಗಮಿತ ಅಧ್ಯಕ್ಷ ವಿಷ್ಣುಮೂರ್ತಿ ಉರಾಳ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಸತೀಶ ಪೂಜಾರಿ ವಂದಿಸಿದರು. ಶಾನಾಡಿ ಉದಯ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.