ಕುಂದಾಪುರ: ಎಸ್.ಶಿವರಾಮ ಹೆಗ್ಡೆ ಅವರ ವತಿಯಿಂದ ಪುರಸಭೆ ವ್ಯಾಪ್ತಿಯ 18 ಅಂಗನವಾಡಿಗಳಿಗೆ ನೀಡಲಾದ ಕಪಾಟು, ಡ್ರಂ ಇತರೆ ಕೊಡುಗೆ ಹಸ್ತಾಂತರ ಕಾರ್ಯಕ್ರಮ ಪುರಸಭೆಯಲ್ಲಿ ಗುರುವಾರ ನಡೆಯಿತು.

ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ದಾನಿಗಳ ಮೂಲಕ ಕಲೆ ಹಾಕಿರುವ ವಸ್ತುಗಳನ್ನು ನೀಡಿ, ಶಿಕ್ಷಣಕ್ಕೆ ಬೇಕಾದ ಕೆಲಸಗಳನ್ನು ಪುರಸಭೆ ವತಿಯಿಂದಲೇ ಮಾಡಲಾಗುತ್ತಿದೆ’ ಎಂದರು.

ಕೊಡುಗೆ ನೀಡಿದ ಬೆಂಗಳೂರಿನ ಸೌತ್ ಫೀಲ್ಡ್ ಪೈಂಟ್ ಸಂಸ್ಥೆಯ ಆಡಳಿತ ನಿರ್ದೇಶಕ ಎಸ್.ಶಿವರಾಮ ಹೆಗ್ಡೆ ಮಾತನಾಡಿ, ‘ಸಮಾಜಮುಖಿ ಕಾರ್ಯಕ್ಕೆ ಸದಾ ನಮ್ಮ ಬೆಂಬಲ ಇದೆ. ಅಂಗನವಾಡಿಗಳಿಗೆ ಕೊಡುಗೆ ನೀಡುವ ಕುರಿತು ಮೋಹನದಾಸ ಶೆಣೈ ಅವರು, ಗಮನಕ್ಕೆ ತಂದ ಕೂಡಲೇ ಒಪ್ಪಿಗೆ ನೀಡಿದ್ದೇವೆ. ಸಂಸ್ಥೆಯ ಸಾಮಾಜಿಕ ಕಳಕಳಿಯ ಭಾಗವಾಗಿಯೂ ಇಂತಹ ಅನೇಕ ಕೆಲಸಗಳನ್ನು ಮಾಡಲಾಗುತ್ತಿದೆ’ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ್ ಕೋಟ್ಯಾನ್ ಮಾತನಾಡಿದರು. ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ವಿ., ಪುರಸಭೆ ವ್ಯವಸ್ಥಾಪಕ ಸೂರ್ಯಕಾಂತ್ ಗಂಗೊಳ್ಳಿ ಇದ್ದರು. ಗಣೇಶ್ ಜನ್ನಾಡಿ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.