ಹೆಬ್ರಿ: ‘ಸಾಮಾಜಿಕ ಜಾಲತಾಣವನ್ನು ವಿದ್ಯಾರ್ಥಿಗಳು ಉಪಯುಕ್ತ ಮಾಹಿತಿಗೆ ಮಾತ್ರ ಬಳಸಬೇಕು. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳದೆ, ಮಾದಕ ವಸ್ತುಗಳಿಂದ ದೂರ ಇದ್ದು, ವಿದ್ಯಾರ್ಥಿ ಜೀವನವನ್ನು ಯಶಸ್ವಿಗೊಳಿಸಿ’ ಎಂದು ಹೆಬ್ರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವಿ ಬಿ.ಕೆ. ಹೇಳಿದರು.

ಹೆಬ್ರಿಯ ಕುಚ್ಚೂರು ಕುಡಿಬೈಲ್ ಶಾಂತಿನಿಕೇತನ ಯುವ ವೃಂದ ಮತ್ತು ಹೆಬ್ರಿ ಶ್ರೀರಾಘವೇಂದ್ರ ಚಾರಿಟಬಲ್ ಟ್ರಸ್ಟ್ ವತಿಯಿಂದ ಕುಚ್ಚೂರು ಹೆರ್ಗ ವಿಠಲಶೆಟ್ಟಿ ಪ್ರೌಢಶಾಲೆಯಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹೆತ್ತವರು ತಮ್ಮ ಮೇಲೆ ಆಸೆ ಆಕಾಂಕ್ಷೆ ಇಟ್ಟಿರುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಜಾಗೃತರಾಗಿರಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಕೌಶಲಗಳು ಬಹಳ ಅಗತ್ಯ. ಅದನ್ನು ಕಲಿಯಿರಿ’ ಎಂದು ಪಿಎಸ್ಐ ರವಿ ಹೇಳಿದರು.

ಹೆಬ್ರಿ ಶ್ರೀ ರಾಘವೇಂದ್ರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಭಾರ್ಗವಿ ಆರ್. ಐತಾಳ್ ಮಾತನಾಡಿ, ‘ಕಾನೂನಿನ ಪಾಲನೆ ನಮ್ಮೆಲ್ಲರ ಕರ್ತವ್ಯ. ನಾವೆಲ್ಲರೂ ಕಾನೂನಿಗೆ ವಿಧೇಯರಾಗಬೇಕು. ಚೌಕಟ್ಟಿನಲ್ಲಿದ್ದಾಗ ಮಾತ್ರ ವಿದ್ಯಾರ್ಥಿ ಜೀವನ ಶಿಸ್ತು ಬರುತ್ತದೆ. ಶಾಲೆಯಲ್ಲಿ ಇರುವ ಶಿಸ್ತು ಹೊರಜಗತ್ತಿಗೂ ಬೇಕಾಗಿದೆ’ ಎಂದರು.

ಮುಖ್ಯ ಶಿಕ್ಷಕಿ ಪ್ರಭಾವತಿ ಅಧ್ಯಕ್ಷತೆ ವಹಿಸಿದ್ದರು. ಪಿಎಸ್ಐ ಮಹಾಂತೇಶ್ ಜಾಬಗೌಡ, ಶಾಂತಿನಿಕೇತನದ ಅಧ್ಯಕ್ಷ ಮಹೇಶ್, ನರೇಂದ್ರ ಎಸ್. ಮರಸಣಿಗೆ, ಚೇತನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.