ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಸಮಾಜದ್ರೋಹಿ ಕೃತ್ಯಬಿಟ್ಟು, ಸಮಾಜದ ಸ್ವಾಸ್ಥ್ಯ ಕಾಪಾಡಿ- ಎಸ್‌ಪಿ ಸೂಚನೆ

ಮಾದಕ ವಸ್ತು ಮಾರಾಟ, ಸಾಗಾಟ ಪ್ರಕರಣದ ಆರೋಪಿಗಳಿಗೆ ಎಸ್‌ಪಿ ಸೂಚನೆ
Last Updated 28 ಅಕ್ಟೋಬರ್ 2020, 16:38 IST
ಅಕ್ಷರ ಗಾತ್ರ

ಉಡುಪಿ: ಮಾದಕ ವಸ್ತುಗಳ ಸಾಗಾಟ ಹಾಗೂ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಪರೇಡ್‌ ಬುಧವಾರ ನಗರದ ಚಂದು ಮೈದಾನದಲ್ಲಿ ನಡೆಯಿತು.

ಬೈಂದೂರು ಠಾಣೆ ವ್ಯಾಪ್ತಿಯ ಇಬ್ಬರು, ಕುಂದಾಪುರ ಠಾಣೆ ವ್ಯಾಪ್ತಿಯ 18, ಕುಂದಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ನಾಲ್ವರು, ಕೋಟ ಠಾಣೆ ವ್ಯಾಪ್ತಿಯ ಇಬ್ಬರು, ಉಡುಪಿ ನಗರ ಠಾಣೆ ವ್ಯಾಪ್ತಿಯ 12, ಮಲ್ಪೆ ಠಾಣೆ ವ್ಯಾಪ್ತಿಯ ಐವರು, ಮಣಿಪಾಲ ಠಾಣೆ ವ್ಯಾಪ್ತಿಯ 16, ಸೆನ್, ಕಾರ್ಕಳ ಠಾಣೆ ವ್ಯಾಪ್ತಿಯ ತಲಾ ಇಬ್ಬರು, ಪಡುಬಿದ್ರಿ ಠಾಣೆ ವ್ಯಾಪ್ತಿಯ ಐವರು, ಕಾಪು ಠಾಣೆ ವ್ಯಾಪ್ತಿಯ ಮೂವರು, ಹಿರಿಯಡ್ಕ ಠಾಣೆ ವ್ಯಾಪ್ತಿಯ ಒಬ್ಬರು ಸೇರಿ 72 ಆರೋಪಿಗಳು ಪರೇಡ್‌ಗೆ ಹಾಜರಾಗಿದ್ದರು.

ಸಮಾಜ ದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗದೆ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು. ಮುಂದೆಯೂ ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗವವಹಿಸಿದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಸ್‌ಪಿ ವಿಷ್ಣುವರ್ಧನ್‌ ಎಚ್ಚರಿಕೆ ನೀಡಿದರು.

ಮಾದಕವಸ್ತು ಸಾಗಾಟ ಹಾಗೂ ಮಾರಾಟ ಮಾಡುವವರ ಮಾಹಿತಿಯನ್ನು ಇಲಾಖೆಗೆ ನೀಡಬೇಕು, ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಎಸ್‌ಪಿ ತಿಳಿಸಿದರು.

ಎಎಸ್‌ಪಿ ಕುಮಾರಚಂದ್ರ, ಡಿವೈಎಸ್‌ಪಿ ಜೈಶಂಕರ್, ಡಿಎಆರ್‌ ಡಿವೈಎಸ್‌ಪಿ ರಾಘವೇಂದ್ರ, ಉಡುಪಿ ಇನ್‌ಸ್ಪೆಕ್ಟರ್ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT