ಉಡುಪಿ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾದ ಮಲ್ಪೆ ಬೀಚ್ಗೆ ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದರೂ, ಅಲ್ಲಿ ಸ್ವಚ್ಛತೆ ಮಾತ್ರ ಮರೀಚಿಕೆಯಾಗಿದೆ.

ಮಲ್ಪೆ ಬೀಚ್ ಪರಿಸರ ಹಾಗೂ ಬೀಚ್ನಿಂದ ಸೀವಾಕ್ ವರೆಗಿನ ಕಡಲ ತೀರದಲ್ಲಿ ಪ್ಲಾಸ್ಟಿಕ್ ಕಸ, ತ್ಯಾಜ್ಯಗಳ ಸಂಗ್ರಹ ಕಣ್ಣಿಗೆ ರಾಚುತ್ತದೆ. ಅಲ್ಲಲ್ಲಿ ಕುಡಿದು ಎಸೆದಿರುವ ಬಿಯರ್ ಬಾಟಲಿಗಳು ಮರಳಿನಲ್ಲಿ ನಡೆದಾಡುವವರಿಗೆ ಅಪಾಯ ಆಹ್ವಾನಿಸುತ್ತಿದೆ.

ಮಲ್ಪೆ ಬೀಚ್ನ ಸಮೀಪ ಕೊಳಚೆ ನೀರು ಸಂಗ್ರಹಗೊಂಡು ಸಾಂಕ್ರಾಮಿಕ ರೋಗವನ್ನು ಆಹ್ವಾನಿಸುತ್ತದೆ. ಅಂಗಡಿ ಮೊದಲಾದವುಗಳಿಂದ ಹೊರ ಹರಿಯುವ ತ್ಯಾಜ್ಯ ನೀರು ಸಂಗ್ರಹಗೊಂಡು ಗಬ್ಬು ನಾರುತ್ತಿದೆ.

ಬೀಚ್ನ ವಿವಿಧೆಡೆ ಸ್ಥಾಪಿಸಿರುವ ಕಸದ ಡಬ್ಬಿಗಳು ತುಂಬಿ ತುಳುಕುತ್ತಿದ್ದು, ಅದರ ಸುತ್ತಲೂ ಕಸ ಚೆಲ್ಲಿರುತ್ತದೆ. ನಿತ್ಯ ಕಸ ವಿಲೇವಾರಿ ನಡೆಯದ ಕಾರಣ ಇಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರವಾಸಿಗರು ದೂರುತ್ತಾರೆ.

ಬೀಚ್ನ ಪರಿಸರದಲ್ಲಿರುವ ಅಂಗಡಿಯವರು ಸ್ವಚ್ಛತೆ ಕಾಪಾಡುತ್ತಿಲ್ಲ. ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಪ್ರವಾಸಿಗರು ಕೂಡ ಪ್ಲಾಸ್ಟಿಕ್ ಬಾಟಲಿಗಳನ್ನು ಮರಳಿನಲ್ಲೇ ಎಸೆದು ಹೋಗುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಕೆಲವರು ರಾತ್ರಿ ಹೊತ್ತಿನಲ್ಲಿ ಬಿಯರ್, ಮದ್ಯದ ಬಾಟಲಿಗಳನ್ನು ಸಮುದ್ರ ತೀರಕ್ಕೆ ಎಸೆದು ಹೋಗುತ್ತಿದ್ದಾರೆ. ಸಂಬಂಧಪಟ್ಟವರು ಅವುಗಳನ್ನು ತೆರವುಗೊಳಿಸಬೇಕು ಮತ್ತು ಬೀಚ್ನ ಸ್ವಚ್ಛತೆಗೆ ಧಕ್ಕೆ ತರುವವರಿಗೆ ದಂಡ ವಿಧಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಬೀಚ್ಗೆ ಸಮುದ್ರದಿಂದ ರಾಶಿ ರಾಶಿ ಕಸ ಬಂದು ಬೀಳುತ್ತವೆ. ಮಳೆ ನಿಂತ ಕೂಡಲೇ ಅವುಗಳನ್ನು ತೆರವುಗೊಳಿಸಲಾಗುತ್ತದೆ. ಆದರೆ, ನಿರಂತರವಾಗಿ ಬೀಚ್ನ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿಲ್ಲ ಎಂದು ಆರೋಪಿಸುತ್ತಾರೆ.

ಮಳೆ ನಿಂತ ಕೂಡಲೇ ಸಮುದ್ರದ ದಂಡೆಗೆ ಅಳವಡಿಸಿದ್ದ ತಡೆಬೇಲಿಯನ್ನು ತೆರವುಗೊಳಿಸಲಾಗುತ್ತದೆ. ಅನಂತರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ಯಾರಾ ಸೈಲಿಂಗ್, ಜೆಟ್ಸ್ಕಿ ಮೊದಲಾದ ಜಲಕ್ರೀಡೆಗಳು ಆರಂಭವಾದ ಬಳಿಕವಂತು ದಿನನಿತ್ಯ ಮಲ್ಪೆ ಬೀಚ್ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತದೆ.

ಕ್ರಿಸ್ಮಸ್ ರಜೆಯ ಸಂದರ್ಭದಲ್ಲಿ ಮಲ್ಪೆ ಬೀಚ್ಗೆ ರಾಜ್ಯದ ವಿವಿಧೆಡೆಯಿಂದ ಪ್ರತಿವರ್ಷ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಶಾಲಾ ಮಕ್ಕಳನ್ನೂ ಪ್ರವಾಸಕ್ಕೆ ಕರೆದುಕೊಂಡು ಬರಲಾಗುತ್ತದೆ. ಇಂತಹ ಸಂದರ್ಭದಲ್ಲಿ ಬೀಚ್ ಸುತ್ತಮುತ್ತ ವಾಣಿಜ್ಯ ಚಟುವಟಿಕೆಗಳೂ ಗರಿಗೆದರುವುದರಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯ ಇದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬೀಚ್ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ವಾಟರ್ ಸ್ಪೋರ್ಟ್ ನಡೆಸುವ ಖಾಸಗಿಯವರಿಗೂ ಸಂಬಂಧಪಟ್ಟವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಬೇಕು ಎಂದೂ ಒತ್ತಾಯಿಸಿದ್ದಾರೆ.

ದಿನನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಮಲ್ಪೆ ಬೀಚ್ನಲ್ಲಿ ಸ್ವಚ್ಛತೆ ಕಾಣದಾಗಿದೆ. ಇದರಿಂದ ಬೀಚ್ ಅಂದಗೆಡುತ್ತಿದೆ. ಸಂಬಂಧಪಟ್ಟವರು ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು

-ನಿತ್ಯಾನಂದ ಒಳಕಾಡು ಸಾಮಾಜಿಕ ಕಾರ್ಯಕರ್ತ

ಮಲ್ಪೆ ಬೀಚ್ ಪರಿಸರದಲ್ಲಿ ಬೀದಿನಾಯಿಗಳು ಹಿಂಡು ಹಿಂಡಾಗಿ ಮಲಗಿಕೊಂಡಿರುತ್ತವೆ. ಇದರಿಂದ ಮರಳಿನಲ್ಲಿ ನಡೆದಾಡಲು ಭಯವಾಗುತ್ತಿದೆ

-ಸುನಿಲ್ ಪ್ರವಾಸಿಗ

‘ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು’

‘ಮಲ್ಪೆ ಬೀಚ್ನಲ್ಲಿ ಭದ್ರತೆಗಾಗಿ ಹೋಮ್ ಗಾರ್ಡ್ಗಳನ್ನು ನೇಮಿಸಲಾಗಿದೆ. ಕೆಲವು ಪ್ರವಾಸಿಗರು ಹೋಮ್ ಗಾರ್ಡ್ ಸಿಬ್ಬಂದಿಯ ಮಾತನ್ನೂ ಕೇಳುವುದಿಲ್ಲ. ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ. ಕಸ ಎಸೆದು ಬೀಚ್ನ ಅಂದಗೆಡಿಸುವವರಿಗೆ ದಂಡ ವಿಧಿಸುವ ನಿಟ್ಟಿನಲ್ಲಿ ಕರಾವಳಿ ಕಾವಲು ಪೊಲೀಸ್ನವರೊಂದಿಗೂ ಚರ್ಚೆ ನಡೆಸಲಾಗುವುದು’ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕಿ ವಿಂಧ್ಯಾ ಎನ್.ಎಂ. ತಿಳಿಸಿದರು. ‘ಬೀಚ್ನ ಶೌಚಾಲಯದ ನಿರ್ವಹಣೆ ನೀಡಿರುವವರ ಟೆಂಡರ್ ಅವಧಿ ಮುಗಿಯುತ್ತಾ ಬಂದಿದೆ. ಮುಂದೆ ರಾತ್ರಿ 9ರ ವರೆಗಾದರೂ ಶೌಚಾಲಯವನ್ನು ತೆರದಿಡುವಂತೆ ಕ್ರಮ ವಹಿಸಲಾಗುವುದು’ ಎಂದು ಅವರು ಹೇಳಿದರು.

‘ತಾಂತ್ರಿಕ ಸಹಕಾರಕ್ಕೆ ಸಿದ್ಧ’

‘ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯವರೇ ಬೀಚ್ನ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಅವರೇ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನಗರಸಭೆಯವರಿಗೆ ನೀಡಬೇಕು. ಇಲ್ಲದಿದ್ದರೆ ನಗರಸಭೆಗೆ ಹಣ ಪಾವತಿಸಿದರೆ ಕಸ ವಿಲೇವಾರಿಯನ್ನು ನಾವೇ ಮಾಡಬಹುದು. ಬೀಚ್ನಲ್ಲಿ ಸ್ವಚ್ಛತೆಗೆ ಅಗತ್ಯವಿರುವ ತಾಂತ್ರಿಕ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ’ ಎಂದು ನಗರಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ ಹೇಳಿದ್ದಾರೆ.

ಬೀದಿನಾಯಿ ಹಾವಳಿ

ಮಲ್ಪೆ ಬೀಚ್ ಪರಿಸರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳೂ ಕೇಳಿ ಬರುತ್ತಿವೆ. ಬೀಚ್ನ ಮರಳಿನ ಮೇಲೆ ನಾಯಿಗಳು ಹಿಂಡು ಹಿಂಡಾಗಿ ಮಲಗಿರುತ್ತವೆ. ಬೀಚ್ನಲ್ಲಿ ಪ್ರವಾಸಿಗರಿಗೆ ನೆರಳಿಗಾಗಿ ನಿರ್ಮಿಸಿರುವ ತಾಣಗಳಲ್ಲೂ ನಾಯಿಗಳು ಬೀಡುಬಿಟ್ಟಿರುತ್ತವೆ. ಅಂಗಡಿಯವರು ಪ್ರವಾಸಿಗರು ಎಸೆಯುವ ಆಹಾರಕ್ಕಾಗಿ ಬೀದಿನಾಯಿಗಳು ಬೀಚ್ಗೆ ಬರುತ್ತಿವೆ. ಸಂಬಂಧಪಟ್ಟವರು ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರವಾಸಿಗರು ಆಗ್ರಹಿಸಿದ್ದಾರೆ.

ಶೌಚಾಲಯ ಸಮಸ್ಯೆ ಮಲ್ಪೆ ಬೀಚ್ನಲ್ಲಿ ಶೌಚಾಲಯ ವ್ಯವಸ್ಥೆ ಇದ್ದರೂ ರಾತ್ರಿ ಏಳು ಗಂಟೆಯ ಸುಮಾರಿಗೆ ಅದಕ್ಕೆ ಬೀಗ ಹಾಕಲಾಗುತ್ತದೆ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಪ್ರವಾಸಿಗರು ದೂರಿದ್ದಾರೆ. ಕನಿಷ್ಠ ರಾತ್ರಿ 9 ಗಂಟೆಯವರೆಗಾದರೂ ಶೌಚಾಲಯವನ್ನು ತೆರೆದಿಡಬೇಕು. ಹಾಗಾದರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.