‘ಶೇ 25ರಷ್ಟು ದೋಣಿಗಳಷ್ಟೇ ಕಡಲಿಗಿಳಿದಿವೆ’
ಈ ಸಲ ಮಲ್ಪೆ ಬಂದರಿನ ಯಾಂತ್ರೀಕೃತ ದೋಣಿಗಳಲ್ಲಿ ಶೇ 25ರಷ್ಟು ದೋಣಿಗಳಷ್ಟೇ ಮೀನುಗಾರಿಕೆಗೆ ತೆರಳಿದ್ದವು. ಆದರೆ ಪದೇ ಪದೇ ಜೋರಾಗಿ ಗಾಳಿ ಬೀಸಿರುವುದರಿಂದ ಅವರಿಗೂ ಸಮಸ್ಯೆಯಾಗಿದೆ. ಕೆಲವರು ಮೀನುಗಾರಿಕೆಗೆ ತೆರಳಿ ಗಾಳಿಯಿಂದಾಗಿ ಎರಡೇ ದಿನಕ್ಕೆ ವಾಪಸ್ ಬಂದಿದ್ದಾರೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ ತಿಳಿಸಿದರು. ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಯಾಂತ್ರೀಕೃತ ದೋಣಿಗಳಲ್ಲಿ ಕೆಲವು ದೋಣಿಗಳು ಗಾಳಿಯ ಕಾರಣಕ್ಕಾಗಿ ಕಾರವಾರದ ಬಂದರಿಗೆ ತೆರಳಿ ಲಂಗರು ಹಾಕಿವೆ. ಪದೇ ಪದೇ ತೂಫಾನ್ ಬೀಸುತ್ತಿರುವುದರಿಂದ ಕೆಲವು ದೋಣಿಯವರು ಕಡಲಿಗಿಳಿದೇ ಇಲ್ಲ ಎಂದೂ ಅವರು ಹೇಳಿದರು.