ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹೆಯಲ್ಲಿ ಮೆಗಾ ಬಾಕ್ಸಿಂಗ್ ಟೂರ್ನಿ 9 ಹಾಗೂ 10ರಂದು

Last Updated 8 ಏಪ್ರಿಲ್ 2022, 16:06 IST
ಅಕ್ಷರ ಗಾತ್ರ

ಉಡುಪಿ: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಸಂಸ್ಥೆಯ ಎಂಐಟಿ ಸ್ಟೂಡೆಂಟ್ ಫ್ಲಾಜಾದಲ್ಲಿ ಏ.9 ಹಾಗೂ 10ರಂದು ಮೆಗಾ ಬಾಕ್ಸಿಂಗ್‌ ಟೂರ್ನಿ ಆರಂಭವಾಗಲಿದ್ದು, ಶುಕ್ರವಾರ ಫೇಸ್‌ ಆಫ್‌ ರೌಂಡ್‌ಗೆ ಚಾಲನೆ ನೀಡಲಾಯಿತು.

ಬಾಕ್ಸಿಂಗ್ ಟೂರ್ನಿಯಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧಿಗಳು ಭಾಗವಹಿಸಲಿದ್ದು, ಮೂರು ಬಾರಿ ಡಬ್ಲ್ಯುಬಿಸಿ ಏಷ್ಯಾ ಗೌರವ ಪಡೆದಿರುವ ನೀರಜ್‌ ಗೋಯಟ್‌ ಉದ್ಘಾಟಿಸಲಿದ್ದಾರೆ.

ಪ್ರತಿದಿನ ನಾಲ್ಕರಂತೆ ಎಂಟು ಪಂದ್ಯಗಳು ನಡೆಯಲಿದ್ದು, ಸೂಪರ್‌ ಫೆದರ್‌ ವೇಯ್ಟ್‌, ಸೂಪರ್‌ ಲೈಟ್‌ ವೇಯ್ಟ್‌, ಸೂಪರ್‌ ಮಿಡ್ಲ್‌ ವೇಯ್ಟ್‌, ಲೈಟ್‌ ಹೆವಿ ವೇಯ್ಟ್‌, ವೆಲ್ಟರ್‌ ವೇಯ್ಟ್‌ ವಿಭಾಗಗಳಲ್ಲಿ ಸ್ಪರ್ಧಿಗಳು ಸ್ಪರ್ಧಿಸಲಿದ್ದಾರೆ.

9ರಂದು ಸಂಗೀತ ಬಿರ್ಡಿ (ಬ್ರಿಟಿಷ್‌ ಚಾಂಪಿಯನ್‌), ನೀತೂ (ರಾಜ್ಯ ಮಟ್ಟದ ರಜತ ಪದಕ ವಿಜೇತೆ), ನಿತ್ವೀರ್‌ ಸಿಂಗ್‌ (ರಾಜ್ಯ ಮಟ್ಟದ ಸ್ವರ್ಣ ಪದಕ ವಿಜೇತ), ಅಂಕಿತ್‌ ಕುಮಾರ್‌ (ಎರಡುಬಾರಿ ರಾಜ್ಯ ಮಟ್ಟದ ರಜತಪದಕ ವಿಜೇತ), ಸಂದೀಪ್‌ (ಎರಡು ಬಾರಿ ಜೂನಿಯರ್‌ ರಾಷ್ಟ್ರೀಯ ಚಾಂಪಿಯನ್‌), ಲವ್‌ಪ್ರೀತ್‌ (ಅಖಿಲಭಾರತ ವಿಶ್ವವಿದ್ಯಾನಿಲಯ ಮಟ್ಟದ ಕಂಜಿನ ಪದಕ ವಿಜೇತ), ಗುರುಪ್ರೀತ್‌ ಸಿಂಗ್‌ (ಕಿರಿಯ ರಾಜ್ಯಮಟ್ಟದ ರಜತ ಪದಕ ವಿಜೇತ), ಅಕಾಶ್‌ ದೀಪ್‌ ಸಿಂಗ್‌ (ರಾಜ್ಯ ಮಟ್ಟದ ರಜತ ಪದಕ ವಿಜೇತ) ಭಾಗವಹಿಸಲಿದ್ದಾರೆ.

10 ರಂದು ನೀರಜ್‌ ಗೋಯಟ್‌ ಮತ್ತು ಸುರೇಶ್‌ ಪಶಾಮ್‌ ನಡುವಿನ ಹಣಾಹಣಿ ವಿಶೇಷವಾಗಿರಲಿದೆ. ಜತೆಗೆ, ವಿಕಾಸ್‌ ಫಂಗಲ್‌ (ಉತ್ತರ ಭಾರತ ಮಟ್ಟದ ಸ್ವರ್ಣ ಪದಕ ವಿಜೇತ), ಸಾಗರ್‌ ಚಂದ್‌ (4 ಶ್ರೇಷ್ಠ ರಾಷ್ಟ್ರೀಯ ಚಾಂಪಿಯನ್‌ ಕಂಚಿನ ಪದಕ ವಿಜೇತ), ಜಸ್‌ಪ್ರೀತ್‌ ಸಿಂಗ್‌ (ಹಿರಿಯ ರಾಜ್ಯ ಮಟ್ಟದ ಸ್ವರ್ಣ ಪದಕ ವಿಜೇತ), ಹರ್‌ಪಾಲ್‌ ಸಿಂಗ್‌ (ಐರ್ಲೆಂಡ್‌ ಟಿಆರ್‌ಜಿ-ಕಮ್‌-ಗ್ರೂಪ್‌ನ ಸ್ವರ್ಣ ವಿಜೇತ), ಮನ್‌ದೀಪ್‌ ದಲಾಲ್‌ (ಮಹಾರಾಷ್ಟ್ರದ ಸ್ವರ್ಣ ಪದಕ ವಿಜೇತ), ಮ್ಯಾಕ್ಸ್‌ (ಜರ್ಮನ್‌ ಪ್ರೊಫೆಷನಲ್‌ ಬಾಕ್ಸಿಂಗ್‌ನಲ್ಲಿ 13ನೇ ರ‍್ಯಾಂಕ್ ವಿಜೇತ) ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಹೆ ಸ್ಟೋರ್ಟ್ಸ್‌ ಕೌನ್ಸಿಲ್‌ ಕಾರ್ಯದರ್ಶಿ ಡಾ. ವಿನೋದ್‌ ನಾಯಕ್‌, ಮಾಹೆಯಲ್ಲಿ ಕ್ರೀಡಾಪಟುಗಳಿಗೆ ಅವಕಾಶಗಳು ಮುಕ್ತವಾಗಿದ್ದು, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟಕ್ಕೇರುವ ಸಾಮರ್ಥ್ಯವಿರುವ ಕ್ರೀಡಾಪಟುಗಳನ್ನು ಹೊಂದಿದೆ. ಬಾಕ್ಸಿಂಗ್‌ ಟೂರ್ನಿಯು ಕ್ರೀಡಾಪಟುಗಳ ಉತ್ಸಾಹ ಹೆಚ್ಚಿಸುವುದರ ಜತೆಗೆ ಬಾಕ್ಸಿಂಗ್ ಕ್ರೀಡೆಯನ್ನು ವೃತ್ತಿಯನ್ನಾಗಿ ಸ್ವೀಕರಿಸಲು ಪ್ರೇರಣೆಯಾಗಲಿದೆ ಎಂದರು.

ಸಾರ್ವಜನಿಕ ಸಂಪರ್ಕ, ಮಾಧ್ಯಮ, ಸಾಮಾಜಿಕ ಮಾಧ್ಯಮ ವಿಭಾಗದ ನಿರ್ದೇಶಕ ಎಸ್‌. ಪಿ.ಕಾರ್‌, ಎಂಐಟಿ ನಿರ್ದೇಶಕ ಡಾ.ಅನಿಲ್‌ ರಾಣಾ, ಮಾಹೆ ಕ್ರೀಡಾ ಮಂಡಳಿಯ ಕಾರ್ಯದರ್ಶಿ ಡಾ. ವಿನೋದ್‌ ನಾಯಕ್‌, ಸಾರ್ವಜನಿಕ ಸಂಪರ್ಕ ವಿಭಾಗ ಮತ್ತು ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮ ವಿಭಾಗದ ನಿದೇಶಕ ಎಸ್‌. ಪಿ. ಕಾರ್‌, ಮಾಹೆಯ ಐಟಿ ಮತ್ತು ಡಿಜಿಟಲ್‌ ವಿಭಾಗದ ನಿರ್ದೇಶಕ ಪ್ರೊ. ಬಾಲಕೃಷ್ಣ ರಾವ್‌, ವಿದ್ಯಾರ್ಥಿ ಕ್ಷೇಮಪಾಲನ ವಿಭಾಗದ ನಿರ್ದೇಶಕರಾಗಿರುವ ಡಾ. ಗೀತಾ ಮಯ್ಯ, ಮಾಹೆ ಪರ್ಚೇಸ್‌ ವಿಭಾಗದ ನಿರ್ದೇಶಕ ವಿಠಲದಾಸ ಭಟ್‌, ಮಾಹೆ ಜನರಲ್‌ ಸರ್ವಿಸಸ್‌-ವಿಭಾಗದ ನಿರ್ದೇಶಕ ಕರ್ನಲ್‌ ಪ್ರಕಾಶ್‌ಚಂದ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT