ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಹಾಗೂ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಭಾನುವಾರ ನಡೆದ ಮಣಿಪಾಲ್ ಮ್ಯಾರಥಾನ್–2020ನಲ್ಲಿ ಕೀನ್ಯಾ ಸ್ಪರ್ಧಿಗಳು ಪ್ರಾಬಲ್ಯ ಮೆರೆದರು.

42 ಕೆ ಪುರುಷರ ವಿಭಾಗದಲ್ಲಿ ಮೊದಲ ಮೂರು ಸ್ಥಾನಗಳು ಕೀನ್ಯಾ ಸ್ಪರ್ಧಿಗಳ ಪಾಲಾದವು. ಮಹಿಳೆಯರ ವಿಭಾಗದಲ್ಲಿ ಭೂಮಿಕಾ ಮಿಂಚಿದರು. ಮಣಿಪಾಲ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.

42 ಕೆ ಪುರುಷರ ವಿಭಾಗ: ಸ್ಟೀಫನ್–1 (2ಗಂ:33ನಿ:38ಸೆ), ಜಾಪೆಟ್ ರೊನ್ನೊ–2 (2ಗಂ:33ನಿ:40ಸೆ), ಇಸಾಕ್–3(2ಗಂ:35ನಿ:40ಸೆ).

42 ಕೆ ಮಹಿಳೆಯರ ವಿಭಾಗ: ಭೂಮಿಕಾ–1 (3ಗಂ:37ನಿ:09ಸೆ), ದೀಪಿಕಾ ಪ್ರಕಾಶ್–2 (3ಗಂ:55ನಿ:39ಸೆ), ಪ್ರಿಯಾಂಕಾ–3 (4ಗಂ:43ನಿ:07ಸೆ).

21 ಕೆ ಪುರುಷರ ವಿಭಾಗ: ದಿನೇಶ್–1 (1ಗಂ:13ನಿ:47ಸೆ), ಪ್ರವೀಣ್ ಕಂಬಲ್–2(1ಗಂ:14ನಿ:05ಸೆ), ನಿಕ್ಕೊಡಾಮಸ್–3(1ಗಂ:15ನಿ:01ಸೆ).

21 ಕೆ ಮಹಿಳೆಯರ ವಿಭಾಗ: ಅರ್ಚನಾ–1(1ಗಂ:27ನಿ:02ಸೆ), ಕೆ.ಜೆ.ಸಂಧ್ಯಾ(1ಗಂ:33ನಿ:13ಸೆ), ಶಾಲಿನಿ(1ಗಂ:44ನಿ:31ಸೆ).

10 ಕೆ ಪುರುಷರ ವಿಭಾಗ: ಮನ್ ಚೌಧರಿ–1 (33ನಿ:02ಸೆ), ಸಂದೀಪ್–2, ಶ್ರೀಧರ್–3, ಮಹಿಳೆಯರ ವಿಭಾಗ: ಚೈತ್ರಾ ದೇವಾಡಿಗ–1(40ನಿ:39ಸೆ), ಎಲ್.ಡಿ.ಪ್ರಿಯಾ–2, ತಿಪ್ಪವ್ವ–3.

5 ಕೆ ಪುರಷರ ವಿಭಾಗ: ಬಸವರಾಜ ನೀಲಪ್ಪ–1 (17ನಿ:19ಸೆ), ಬೆಳ್ಳಣ್ಣ–2, ಧಾರೆಪ್ಪ ಬಸವಣ್ಣ–3, ಮಹಿಳೆಯರ ವಿಭಾಗ: ಹರ್ಷಿತಾ:1 (21ನಿ:15ಸೆ), ಧೀಕ್ಷಾ–2, ಚಿಕ್ಕಮ್ಮ–3.

3 ಕೆ ಪ್ರಾಥಮಿಕ ಶಾಲಾ ಬಾಲಕರ ವಿಭಾಗ: ಶರತ್–1, ಮಲ್ಲಪ್ಪ–2, ವಿವೇಕಾನಂದ–3, ಬಾಲಕಿಯರ ವಿಭಾಗ: ನಂದಿನಿ–1, ಸುಚಿತಾ–2, ಚೈತನ್ಯ–3,ಪ್ರೌಢ ಶಾಲಾ ವಿಭಾಗ ಬಾಲಕರು: ಹನುಮೇಶ್–1, ಯತೀಶ್–2, ಪ್ರಣಾಮ್–3,ಬಾಲಕಿಯರ ವಿಭಾಗ: ಪ್ರತೀಕ್ಷಾ–1, ಪ್ರತೀಶಾ–2, ರೋಸಿ ಶಹಾಬಾದಿ–3.

ಕಾಲೇಜು ವಿಭಾಗ ಪುರುಷರು: ರಾಜೇಂದ್ರ–1, ಕೆ.ಸಿ.ಚಿಂತನ್–2, ಕಿರಣ್–3, ಮಹಿಳೆಯರು: ಪ್ರಾಜ್ಞ–1, ನಿರೀಕ್ಷಾ–2, ವೈಷ್ಣವಿ ಶೆಟ್ಟಿ–3.

‘ಮ್ಯಾರಥಾನ್‌ನಲ್ಲಿ ಮಕ್ಕಳು ವೃದ್ಧರು’

ಭಾನುವಾರ ಬೆಳಗಿನ ಚುಮು–ಚುಮು ಚಳಿಯನ್ನೂ ಲೆಕ್ಕಿಸದೆ ಸಾವಿರಾರು ಮಂದಿ ಮಣಿಪಾಲ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು. ಶಾಲಾ ಮಕ್ಕಳಿಂದ ಹಿಡಿದು ವೃದ್ಧವರೆಗೂ ಭಾಗವಹಿಸಿದ್ದು ವಿಶೇಷವಾಗಿತ್ತು.

ನೀಲಿ ಬಣ್ಣದ ಟೀಶರ್ಟ್ ಧರಿಸಿ ಓಡುತ್ತಿದ್ದವರ ಮೊಗದಲ್ಲಿ ಪ್ರಶಸ್ತಿ ಗೆಲ್ಲುವ ಉತ್ಸಾಹ ಎದ್ದು ಕಾಣುತ್ತಿತ್ತು. ಮಣಿಪಾಲ್‌ನ ಮಾಹೆ ಸಂಸ್ಥೆಯು ಸತತ ನಾಲ್ಕನೇ ವರ್ಷ ಮ್ಯಾರಥಾನ್ ಹಮ್ಮಿಕೊಂಡಿದ್ದು, ಈ ಬಾರಿ ಅಂಗಾಂಗಗಳ ದಾನದ ಕುರಿತು ಜಾಗೃತಿ ಮೂಡಿಸಿತು.

ಮ್ಯಾರಥಾನ್ ಸಾಗುವ ಮಾರ್ಗದಲ್ಲಿ ಕುಡಿಯುವ ನೀರು, ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಲ್ಲಿ ಮಾರ್ಗಗಳ ವಿವರ ಹಾಕಲಾಗಿತ್ತು. ಒಟ್ಟು 6 ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ 9 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಮಣಿಪಾಲ ಎಜುಕೇಶನ್ ಮತ್ತು ಮೆಡಿಕಲ್ ಗ್ರೂಪ್‌ನ ಚೇರ್ಮನ್ ಡಾ.ರಂಜನ್ ಪೈ, ಮಾಹೆ ಕುಲಪತಿ ಡಾ.ಎಚ್.ಎಸ್.ಬಲ್ಲಾಳ್, ಐಸಿಐಸಿಐ ಬ್ಯಾಂಕ್ ವೆಲ್ತ್ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥ ಗಿರೀಶ್ ಸೆಹಗಲ್, ಮಾಜಿ ಅಂತರರಾಷ್ಟ್ರೀಯ ಕ್ರಿಕೆಟಿಗ ರಾಬಿನ್ ಸಿಂಗ್, ಬ್ಯಾಡ್ಮಿಂಟನ್ ಆಟಗಾರ್ತಿ ತೃಪ್ತಿ ಮರ್ಗುಂಡೆ, ಅದಾನಿ ಗ್ರೂಪ್‌ನ ಕಿಶೋರ್ ಆಳ್ವ, ಸಿಂಡಿಕೇಟ್ ಬ್ಯಾಂಕ್ ಜನರಲ್ ಮ್ಯಾನೇಜರ್ ಭಾಸ್ಕರ್ ಹಂದೆ, ಮಾಹೆ ಉಪ ಕುಲಪತಿ ಡಾ.ವಿನೋದ್ ಭಟ್,ಮಣಿಪಾಲ್ ಮ್ಯಾರಥಾನ್ ಸಮಿತಿಯ ಉಪಾಧ್ಯಕ್ಷ ಮಹೇಶ್ ಠಾಕೂರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.