ಕಾಪು (ಪಡುಬಿದ್ರಿ): ‘ಕಾಪುವಿನ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿಯಲ್ಲಿ ಶಿಲೆ ಮತ್ತು ಮರದ ಕೆತ್ತನೆ ಅದ್ಭುತವಾಗಿ ಮೂಡಿಬಂದಿದೆ. ಧಾರ್ಮಿಕ ಕ್ಷೇತ್ರಗಳು ಈ ರೀತಿ ಅಭಿವೃದ್ಧಿಯಾಗಬೇಕು’ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಕಾಪು ಶ್ರೀಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಎಂಟನೇ ದಿನವಾದ ಮಂಗಳವಾರ ನಡೆದ ಉಚ್ಚಂಗಿ ಬ್ರಹ್ಮಕಲಶಾಭಿಷೇಕದಲ್ಲಿ ಅವರು ಮಾತನಾಡಿದರು.

‘ಶ್ರದ್ಧೆ, ಭಕ್ತಿಯಿಂದ ಮಾಡಿದ ಯಾವುದೇ ಕಾರ್ಯವೂ ಯಶಸ್ವಿಯಾಗುತ್ತದೆ. ಇಲ್ಲಿ ನಡೆದ ಕಾರ್ಯದಲ್ಲೂ ಶ್ರದ್ಧೆ ಮತ್ತು ಭಕ್ತಿ ತುಂಬಿದೆ. ಕ್ಷೇತ್ರದ ಅಭಿವೃದ್ಧಿಯಿಂದ ನಾಡಿನ ಅಭಿವೃದ್ಧಿ ಸಾಧ್ಯ’ ಎಂದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಹೇಶ್ ಕೋಟ್ಯನ್, ವಿಶ್ವನಾಥ್ಮ, ಯೋಗೀಶ್ ಶೆಟ್ಟಿ, ದಿವಾಕರ ಶೆಟ್ಟಿ, ಅನಿಲ್ ಬಳ್ಳಾಲ್, ಹರಿಯಪ್ಪ ಕೋಟ್ಯಾನ್, ಮಾಧವ ಅರ್.ಪಾಲನ್, ಶಶಿಧರ ಶಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.