ಬುಧವಾರ, ಮಾರ್ಚ್ 22, 2023
23 °C

ಸಿದ್ದರಾಮಯ್ಯಗೆ ಕೈಕೊಡಲಿದ್ದಾರೆ ಕೋಲಾರ ಜನರು: ಸುನಿಲ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಪ್ರತಿ ಬಾರಿಯ ಚುನಾವಣೆಯಲ್ಲಿ ಕ್ಷೇತ್ರಗಳನ್ನು ಬದಲಿಸಿ ಜನರಿಂದ ತಿರಸ್ಕೃತವಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದ ಜನರು ಕೈ ಕೊಡಲಿದ್ದಾರೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ವ್ಯಂಗ್ಯವಾಡಿದರು.

ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ನಿರ್ಧಿಷ್ಟ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಮೂಲಕ ಆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು. ಆದರೆ, ಸಿದ್ದರಾಮಯ್ಯ ಪ್ರತಿಬಾರಿ ಕ್ಷೇತ್ರ ಬದಲಿಸುವ ಮೂಲಕ ಬದ್ಧತೆ ಮರೆತಿದ್ದಾರೆ ಎಂದರು.

ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದ ಜೆಡಿಎಸ್‌ ಪಕ್ಷಕ್ಕೆ, ವರುಣ, ಬಾದಾಮಿ ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ ಕೈಕೊಟ್ಟಿದ್ದಾರೆ. ಹಾಗಾಗಿ ಕೋಲಾರದಲ್ಲಿ ಜನ ಅವರನ್ನು ತಿರಸ್ಕರಿಸಲಿದ್ದಾರೆ ಎಂದರು.

ಪಾದಯಾತ್ರೆ, ಪ್ರತಿಭಟನೆ ಹಾಗೂ ಹೋರಾಟ ಪ್ರಜಾಪ್ರಭುತ್ವದ ಭಾಗವಾಗಿದ್ದು ಪ್ರಣಾವನಂದ ಸ್ವಾಮೀಜಿ ಕೂಡ ಮಾಡುತ್ತಿದ್ದಾರೆ. ಸ್ವಾಮೀಜಿಗಳ ಪ್ರಮುಖ ಬೇಡಿಕೆಯನ್ನು ಸಮಾಜ ಹಾಗೂ ಸರ್ಕಾರ ಒಪ್ಪಿಕೊಂಡು ಅಧಿಕೃತವಾಗಿ ನಾರಾಯಣಗುರುಗಳ ನಿಗಮ ಘೋಷಿಸಿದೆ. ಹಾಗಾಗಿ, ಸ್ವಾಮೀಜಿ ಮರುಚಿಂತಿಸಬೇಕಾದ ಅವಶ್ಯಕತೆ ಇದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು