ಹೆಬ್ರಿ: ವರಂಗ ಗ್ರಾಮದ ವರಂಗ ಮೊರಂಟೆಬೈಲು ಮಲೆಕುಡಿಯ ಕುಟುಂಬಗಳ ಮನೆಗೆ ಶಾಸಕ ಸುನಿಲ್ ಕುಮಾರ್ ಶುಕ್ರವಾರ ಭೇಟಿ ನೀಡಿದರು.

ಮೊರಂಟೆಬೈಲು ಮಲೆಕುಡಿಯ ಮೂರು ಕುಟುಂಬಗಳಿಗೆ ಶಾಸಕರ ಸೂಚನೆ ಮೇರೆಗೆ, ಅರಣ್ಯ ಇಲಾಖೆಯ ಕುದುರೆಮುಖ ವನ್ಯಜೀವಿ ವಿಭಾಗ ಪೆಟ್ರೋಲಿಂಗ್ ಪಾಥ್ ನಿರ್ಮಿಸಿತ್ತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಲೆಕುಡಿಯ ಸಮುದಾಯದ ಕುಂದುಕೊರತೆ ಸಭೆಯಲ್ಲಿ ಶಾಸಕ ಸುನಿಲ್ ಕುಮಾರ್ ಮನವಿ ಮೇರೆಗೆ, ರಸ್ತೆ ನಿರ್ಮಾಣದ ವಿಚಾರದ ಪ್ರಸ್ತಾವನೆ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಕುದುರೆಮುಖ ವನ್ಯಜೀವಿ ವಿಭಾಗದ ಡಿಸಿಎಫ್ ಅರಣ್ಯಾಧಿಕಾರಿ ಶಿವರಾಂ ಬಾಬು, ಸ್ಥಳ ಪರಿಶೀಲಿಸಿ 4ಕಿ.ಮೀ ಉದ್ದದ ಗಸ್ತು ರಸ್ತೆ ನಿರ್ಮಿಸಿದ್ದಾರೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅನುಕೂಲವಾಗಿದೆ. ಜನರ ಅಹವಾಲು ಆಲಿಸಿದ ಶಾಸಕರು ಮಲೆಕುಡಿಯ ಕುಟುಂಬಗಳ ಜೊತೆ ಚಹಾ, ತಿಂಡಿ ಸವಿದರು.

ಸ್ಥಳೀಯರಾದ ಸುದೀಪ್ ಅಜಿಲ ಮುಟ್ಲುಪಾಡಿ, ಸುಹಾಸ್ ಶೆಟ್ಟಿ ಮುಟ್ಲುಪಾಡಿ, ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರಿಧರ ಗೌಡ, ಕುದುರೆಮುಖ ವನ್ಯಜೀವಿ ವಿಭಾಗದ ಅಧಿಕಾರಿಗಳಾದ ಅಭಿಲಾಶ್, ಯಮನೂರ ಇದ್ದರು.

ಮೂಲ ಸೌಕರ್ಯಕ್ಕೆ ಆದ್ಯತೆ: ಮೊರಂಟೆಬೈಲು ಮಲೆಕುಡಿಯ ಕುಟುಂಬಗಳು ವಿದ್ಯುತ್ ಸಂಪರ್ಕ, ರಸ್ತೆಯ ಬೇಡಿಕೆ ಇಟ್ಟಿದ್ದರು. ರಸ್ತೆ ನಿರ್ಮಾಣ ಕಾರ್ಯ ಆಗಿದೆ. ಬೆಳಕಿಗಾಗಿ ಸೋಲಾರ್ ದೀಪದ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.