ಮುಡಿಪು: ಹರೇಕಳ ಗ್ರಾಮ ಪಂಚಾಯಿತಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಸೋಮವಾರ ಮಕ್ಕಳ ಗ್ರಾಮಸಭೆ ನಡೆಯಿತು. ಹಿಂದಿನ ಗ್ರಾಮಸಭೆ ನಮ್ಮದೇ ಶಾಲೆಯಲ್ಲಿ ನಡೆದಾಗ ಹಂಪ್ಸ್ ಬೇಡಿಕೆ ಸಲ್ಲಿಸಿದ್ದು ಇನ್ನೂ ಈಡೇರಿಲ್ಲ. ಶಾಲೆ ಬಳಿ ಶಬ್ದ ಮಾಡಬೇಡಿ ಎಂದು ನಾಮಫಲಕ ಹಾಕಿದ್ದರೂ ವಾಹನಗಳ ಹಾರ್ನ್, ಮೈಕ್ ನಲ್ಲಿ ಅನೌನ್ಸ್ ಮಾಡಿಕೊಂಡು ಹೋಗ್ತಾರೆ. ಶಾಲೆಯಲ್ಲಿ ನೀರಿನ ಸಮಸ್ಯೆ ಇದೆ ಎಂದು ರಾಮಕೃಷ್ಣ ಶಾಲೆಯ ಮಕ್ಕಳು ಸಮಸ್ಯೆ ಮುಂದಿಟ್ಟರು.
ಶಾಲೆಗೆ ಹೋಗುವ ದಾರಿ ಸರಿಯಿಲ್ಲದೆ ಬಿದ್ದು ಗಾಯಗಳಾಗುತ್ತಿವೆ. ಕೈತೋಟ ನಾವು ಮಾಡುತ್ತೇವೆ, ಒಂದು ಲೋಡು ಮಣ್ಣು, ಗೇಟು, ನೀರಿನ ವ್ಯವಸ್ಥೆ ಮಾಡಿ. ಒಂದು ಕೋಣೆ ಅಂಗನವಾಡಿಗೆ ಕೊಟ್ಟಿರುವುದರಿಂದ ನಮಗೆ ಕೊಠಡಿ ಕೊರತೆಯಾಗಿದೆ. ಶಾಲೆಗೆ ಹೋಗಿ ಬರಲು ಬಸ್ಸಿನ ಸಮಸ್ಯೆ ಇದೆ ಎಂದು ರಾಜಗುಡ್ಡೆ ಶಾಲೆಯ ಮಕ್ಕಳು ಬೇಸರ ವ್ಯಕ್ಯಪಡಿಸಿದರು.
ಹೆಣ್ಮಕ್ಕಳ ವೈಯುಕ್ತಿಕ ಸ್ವಚ್ಚತೆ ದೃಷ್ಟಿಯಿಂದ ವಿದ್ಯುತ್ ಚಾಲಿತ ನ್ಯಾಪ್ ಕಿನ್ ಬರ್ನರ್ ಒದಗಿಸುವಂತೆ ನ್ಯೂಪಡ್ಪು ಹಾಜಬ್ಬರ ಶಾಲೆಯ ಮಕ್ಕಳು ಬೇಡಿಕೆ ಸಲ್ಲಿಸಿದರು.
ಪಂಚಾಯಿತಿ ಅಧ್ಯಕ್ಷ ಬದ್ರುದ್ದೀನ್ ಅವರು ಮಾತನಾಡಿ ದಾನಿಗಳು, ಶಾಸಕರು ಹಾಗೂ ಪಂಚಾಯಿತಿಯ ಅನುದಾನದಲ್ಲಿ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇವೆಂದು ಭರವಸೆ ನೀಡಿದರು.
ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಶವಂತ ಬೆಳ್ಚಡ, ಉಪಾಧ್ಯಕ್ಷೆ ಕಲ್ಯಾಣಿ, ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್, ಅಬ್ದುಲ್ ಮಜೀದ್ ಎಂ.ಪಿ, ಪುಷ್ಪಲತಾ, ಅಧಿಕಾರಿ ನಾಗರಾಜ ಎಂ, ರಾಜಗುಡ್ಡೆ ಶಾಲೆಯ ಮುಖ್ಯಶಿಕ್ಷಕಿ ಗೀತಾ ಎಂ, ನ್ಯೂಪಡ್ಪು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರಾಜೇಶ್ವರಿ, ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿ ಶುಭ, ಹರೇಕಳ ಶಾಲೆಯ ಮುಖ್ಯ ಶಿಕ್ಷಕ ಬಿ.ನಾಗೇಂದ್ರ ನಾಯ್ಕ, ನ್ಯೂಪಡ್ಪು ಪ್ರೌಢಶಾಲೆಯ ಶಿಕ್ಷಕಿ ಸುರೇಖಾ, ಅಂಗನವಾಡಿ ಮೇಲ್ವಿಚಾರಕಿ ಶಾಲಿನಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.