ಮಂಗಳವಾರ, ಜುಲೈ 27, 2021
21 °C
ಉತ್ತಮ ಸಾಧನೆ ತೋರಿದ ಕಾಲೇಜುಗಳು

ಉಡುಪಿ: ಪಿಯುಸಿ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಪಿಯುಸಿ ಫಲಿತಾಂಶದಲ್ಲಿ ಉಡುಪಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹೆಚ್ಚು ಫಲಿತಾಂಶ ಪಡೆದಿದ್ದಾರೆ.

ವಿಜ್ಞಾನ ಮೇಲುಗೈ: ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 4,928 ವಿದ್ಯಾರ್ಥಿಗಳಲ್ಲಿ 4721 ಮಂದಿ ಉತ್ತೀರ್ಣರಾಗಿದ್ದು ಶೇ 95.8 ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 7,408 ವಿದ್ಯಾರ್ಥಿಗಳ ಪೈಕಿ 6,783 ಮಕ್ಕಳು ಪಾಸ್‌ ಆಗಿದ್ದು, ಶೇ 91.56 ಫಲಿತಾಂಶ ಸಿಕ್ಕಿದೆ. ಕಲಾ ವಿಭಾಗದಲ್ಲಿ ‍ಪರೀಕ್ಷೆಗೆ ಹಾಜರಾದ 1439 ವಿದ್ಯಾರ್ಥಿಗಳಲ್ಲಿ 991 ಮಕ್ಕಳು ಉತ್ತೀರ್ಣರಾಗಿದ್ದು ಶೇ 68.87 ಫಲಿತಾಂಶ ಬಂದಿದೆ.

ಇಂಗ್ಲೀಷ್‌ ಮಾಧ್ಯಮ ಮುಂದು: ಇಂಗ್ಲೀಷ್ ಮಾಧ್ಯಮದಲ್ಲಿ ಎಕ್ಸಾಂ ಬರೆದ 11,940 ವಿದ್ಯಾರ್ಥಿಗಳಲ್ಲಿ 10,886 ಉತ್ತೀರ್ಣರಾದರೆ (ಶೇ 91.17), ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಗೆ ಹಾಜರಾದ 3,133 ವಿದ್ಯಾರ್ಥಿಗಳ ಪೈಕಿ 2,075 (ಶೇ 66.23) ಮಕ್ಕಳು ಪಾಸ್‌ ಆಗಿದ್ದಾರೆ.

ಪೂರ್ಣಪ್ರಜ್ಞ ಕಾಲೇಜು: ಉಡುಪಿಯ ಪೂರ್ಣಪ್ರಜ್ಞ ಪಿಯು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಆರ್‌. ಅಭಿರಾಮ್ (ಶೇ 98.2), ಅನೂಪ್ ಕಾಮತ್ (ಶೇ 98), ವಿಜಯಾ ಭಕ್ಷಿ (ಶೇ 98) ಅಂಕ ಪಡೆದಿದ್ದು, ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿಶ್ವಪ್ರಿಯ ತೀರ್ಥ ಶ್ರೀಗಳು ಹಾಗೂ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್, ಪ್ರಾಂಶುಪಾಲರಾದ ಪ್ರತಿಮಾ ಬಾಳಿಗ ಅಭಿನಂದಿಸಿದ್ದಾರೆ.

ಮಣಿಪಾಲದ ಮಾಧವ ಕೃಪಾ ಕಾಲೇಜು ಶೇ 100 ಫಲಿತಾಂಶ ಪಡೆದಿದ್ದು, ವಿಜ್ಞಾನ (44), ವಾಣಿಜ್ಯ (25) ವಿಭಾಗದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸಂಜನಾ ಗಣೇಶ್ ನಾಯಕ್‌ (95.8), ಕೃತಿಕಾ ಸಗ್ರಿ ನಾಯಕ್ (95.4), ಎಂ. ಸ್ವಾತಿ (95.4), ಎ.ಸಿ. ಚಿತ್ರಾ (95.2), ವೈಶಾಲಿ (95) ಅಂಕ ಪಡೆದಿದ್ದಾರೆ. ಶಾಲಾ ಸಂಚಾಲಕ ಪಿ.ಜಿ.ಪಂಡಿತ್, ಪ್ರಾಂಶುಪಾಲರಾದ ಜೆಸ್ಸಿ ಆಂಡ್ರ್ಯೂಸ್‌ ಅಭಿನಂದಿಸಿದ್ದಾರೆ.

ಉಡುಪಿ ವಿದ್ಯೋದಯ ಕಾಲೇಜಿನ ಮಿಹಿರ್ 584 ಅಂಕಗಳನ್ನು ಪಡೆದಿದ್ದು, ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಹಾಗೂ ದಿ.ಛಾಯಾ ಅವರ ಪುತ್ರ. ಹಿರಿಯಡ್ಕದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ವಾಣಿಜ್ಯ ವಿಭಾಗದಲ್ಲಿ 587 ಅಂಕ ಪಡೆದಿದ್ದಾಳೆ. ಕಾಲೇಜಿಗೆ ಶೇ 90ರಷ್ಟು ಫಲಿತಾಂಶ ಬಂದಿದೆ. ಕೋಡಿ ಕನ್ಯಾನದ ರತ್ನಾಕರ್ ಪೂಜಾರಿ, ಲಕ್ಷ್ಮೀ ಪೂಜಾರಿ ದಂಪತಿ ಪುತ್ರಿ ರಶ್ಮಿತಾ ಪೂಜಾರಿ ಶೇ 95.66 ಅಂಕ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು