ಪೋಲಿಗಳ ಮಟ್ಟಹಾಕಲು ಅಬ್ಬಕ್ಕ ಪಡೆ ಸಿದ್ಧ

ಬುಧವಾರ, ಏಪ್ರಿಲ್ 24, 2019
33 °C
ಮಹಿಳಾ ಸುರಕ್ಷತೆಗಾಗಿ ನಗರದಲ್ಲಿ ಕಾರ್ಯಾಚರಣೆಗಿಳಿದ ಪಡೆ

ಪೋಲಿಗಳ ಮಟ್ಟಹಾಕಲು ಅಬ್ಬಕ್ಕ ಪಡೆ ಸಿದ್ಧ

Published:
Updated:
Prajavani

ಉಡುಪಿ: ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಸಿಬ್ಬಂದಿಯನ್ನೊಳಗೊಂಡ ‘ರಾಣಿ ಅಬ್ಬಕ್ಕ ಪಡೆ’ ರಚನೆಯಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಮಂಗಳವಾರ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಅಬ್ಬಕ್ಕ ಪಡೆಗೆ ಚಾಲನೆ ನೀಡಿದರು.

ಅಬ್ಬಕ್ಕ ಪಡೆಯ ಕೆಲಸ:

ಮುಖ್ಯವಾಗಿ ಮಹಿಳೆಯರ ಮೇಲಿನ ಶೋಷಣೆಯನ್ನು ತಡೆಗಟ್ಟುವುದು ಅಬ್ಬಕ್ಕಪಡೆಯ ಕೆಲಸ. ಬಸ್ ಹಾಗೂ ರೈಲ್ಪೆ ನಿಲ್ದಾಣ, ಶಾಲಾ ಕಾಲೇಜುಗಳ ಬಳಿ ಪೋಲಿಗಳು ಮಹಿಳೆಯರಿಗೆ ಕಿರುಕುಳ ನೀಡಿದರೆ, ಅಸಭ್ಯವಾಗಿ ವರ್ತಿಸಿದರೆ ಅಬ್ಬಕ್ಕ ಪಡೆ ಹಾಜರಾಗಲಿದೆ. ಕಿಡಿಗೇಡಿಗಳಿಗೆ ಬುದ್ದಿಕಲಿಸುವುದರ ಜತೆಗೆ ಗಂಭೀರ ಕತ್ಯಗಳಾದರೆ ಕ್ರಿಮಿನಲ್ ಕೇಸ್‌ಗಳನ್ನೂ ದಾಖಲಿಸಿದ್ದಾರೆ.

ಎಸ್ಪಿ ಅವರ ಮುತುವರ್ಜಿಯಲ್ಲಿ ಸದ್ಯ ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆಗಿಳಿದಿರುವ ರಾಣಿ ಅಬ್ಬಕ್ಕ ಪಡೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಇರಲಿದೆ.

‘ರಾಣಿ ಅಬ್ಬಕ್ಕ’ ಪಡೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಎಸ್‌ಪಿ, ಚಿತ್ರದುರ್ಗದ ಓಬವ್ವ, ಸಾಗರದ ಕೆಳದಿ ಚೆನ್ನಮ್ಮ ಪಡೆಯ ಪ್ರೇರಣೆಯಿಂದ ರಾಣಿ ಅಬ್ಬಕ್ಕ ಪಡೆ ಆರಂಭಿಸಲಾಗಿದೆ. ಈ ಪಡೆಯಲ್ಲಿ ಮಹಿಳಾ ಠಾಣೆಯ ಎಸ್‍ಐ ಹಾಗೂ ಎಎಸ್‍ಐ, ಮೂವರು ಮಹಿಳಾ ಸಿಬ್ಬಂದಿ, ಒಬ್ಬರು ಪುರುಷ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಧ್ಯ ನಗರ ಹಾಗೂ ಮಣಿಪಾಲ ಸುತ್ತಮುತ್ತ ಪಡೆ ಕಾರ್ಯಾಚರಣೆ ನಡೆಸಲಿದ್ದು, ಮುಂದೆ ಜಿಲ್ಲೆಗೆ ವಿಸ್ತರಿಸುವ ಆಲೋಚನೆ ಇದೆ. ಸಾರ್ವಜನಿಕ ಸ್ಥಳಗಳಲ್ಲಿ ಅಬ್ಬಕ್ಕ ಪಡೆ ಗಸ್ತು ತಿರುಗುತ್ತಲಿರುತ್ತದೆ. ಮಹಿಳೆಯರಿಗೆ ತೊಂದರೆ ನೀಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಮಹಿಳಾ ಠಾಣೆಯ ಪಿಎಸ್‌ಐ ರೇಖಾ ನಾಯಕ್, ವೆಲೆಂಟ್ ಸೆಮಿನಾ, ಕಲ್ಪನಾ ಬಾಂಗ್ಲೆ, ಸೇಸಮ್ಮ, ಮುಮ್ತಾಜ್, ಎಎಸ್‍ಐ ಮುಕ್ತ, ಕಾನ್‌ಸ್ಟೆಬಲ್‌ ರುದ್ರಮ್ಮ ಉಪಸ್ಥಿತರಿದ್ದರು

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !