ಹೆಬ್ರಿ: ಇಲ್ಲಿನ ಶಿವಪುರ ಬಿಲ್ಲುಬೈಲು ಬಳಿ 169ಎ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಸಲು ಮಣ್ಣು ತೆಗೆಯಲಾಗಿದ್ದು, ಕಂದಕ ನಿರ್ಮಾಣವಾಗಿದೆ. ಸಮೀಪದಲ್ಲಿ ಭಾರಿ ಎತ್ತರದಲ್ಲಿರುವ 4 ಮನೆಗಳು ಕುಸಿಯುವ ಭೀತಿಯಲ್ಲಿವೆ.
ಮನೆಗಳಿಗೆ ಹೋಗುವ ರಸ್ತೆ ಕುಸಿಯುತ್ತಿದ್ದು ಅಪಾಯ ಎದುರಾಗಿದೆ. ಶೀಘ್ರ ತಡೆಗೋಡೆ ನಿರ್ಮಿಸುವಂತೆ ಸಮಾಜ ಸೇವಕ ಬೈಕಾಡಿ ಮಂಜುನಾಥ ರಾವ್ ಶಿವಪುರ ನೇತೃತ್ವದಲ್ಲಿ ಮನೆಯವರು ಜಿಲ್ಲಾಧಿಕಾರಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅವರು ತಡೆಗೋಡೆ ನಿರ್ಮಿಸುವ ಭರವಸೆ ನೀಡಿ, ಕ್ರಮ ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕರಿಗೆ ಸೂಚಿಸಿದರು. ಬಿಲ್ಲುಬೈಲು ನಾತು ಪಾಣ ಮತ್ತು ಮನೆಯವರು ಇದ್ದರು.