ಮಂಗಳವಾರ, ಜನವರಿ 19, 2021
21 °C

ಉಡುಪಿ: ಮಾಲ್ದಿ ದ್ವೀಪದಲ್ಲಿ ಸಂಕ್ರಾತಿ ಪೂಜೆ, ಸಮುದ್ರಕ್ಕೆ ಕ್ಷೀರ ಸಮರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೊಡವೂರು ಶಂಕರ ನಾರಾಯಣ ದೇವಸ್ಥಾನದಿಂದ ಮಲ್ಪೆ ಪಡುಕರೆ ಸಮೀಪದ ಸಮುದ್ರ ಮಧ್ಯೆ ಇರುವ ಮಾಲ್ದಿ ದ್ವೀಪದಲ್ಲಿ ಗುರುವಾರ ಮಕರ ಸಂಕ್ರಮಣದ ವಿಶೇಷ ಪೂಜೆ ನಡೆಯಿತು.

ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಮೀನುಗಾರರು ಮಾಲ್ದಿ ದ್ವೀಪಕ್ಕೆ ತೆರಳಿ ಪೂಜೆ ಸಲ್ಲಿಸಿದರು. ದೇವಳದ ತಂತ್ರಿ ಪುತ್ತೂರು ಹಯವದನ ತಂತ್ರಿ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ಜರಗಿದವು. ಬಳಿಕ ಸಮುದ್ರಕ್ಕೆ ಪುಷ್ಪ, ಕ್ಷೀರ ಹಾಗೂ ಸಿಯಾಳವನ್ನು ಸಮರ್ಪಿಸಿ ಮತ್ಸ್ಯ ಸಂಪತ್ತು ವೃದ್ಧಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೊಡವೂರು ಪ್ರಕಾಶ್, ಸದಸ್ಯ ಜನಾರ್ದನ್ ಕೊಡವೂರು, ರಾಜ ಎ.ಸೇರಿಗಾರ, ಭಾಸ್ಕರ್ ಪಾಲನ್ ಬಾಚನಬೈಲು, ಚಂದ್ರಕಾಂತ್ ಪುತ್ರನ್, ಹರೀಶ್ ಕೋಟ್ಯಾನ್, ಶ್ಯಾಮಸುಂದರ್ ಭಟ್, ಕೆ.ರವಿರಾಜ್ ಹೆಗ್ಡೆ, ಸಂಧ್ಯಾ ಪ್ರಕಾಶ್, ಪೂರ್ಣಿಮಾ ಜನಾರ್ದನ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು