ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿಗಳಲ್ಲಿ ಸ್ವ-ನಂಬಿಕೆ ಬೇಕು: ಯೋಗೀಶ್ ಭಟ್

Last Updated 28 ಆಗಸ್ಟ್ 2022, 4:23 IST
ಅಕ್ಷರ ಗಾತ್ರ

ಹೆಬ್ರಿ: ‘ವಿದ್ಯಾರ್ಥಿಗಳು ಸ್ವಂತ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟುಕೊಂಡು ರಚನಾತ್ಮಕ ಬೆಳವಣಿಗೆ ಕಂಡುಕೊಳ್ಳುವುದು ಮುಖ್ಯ. ನಿಮ್ಮಲ್ಲಿರುವ ಅಗಾಧ ಶಕ್ತಿಯ ಮೂಲಕ ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸಿ’ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಯೋಗೀಶ್ ಭಟ್ ಹೇಳಿದರು.

ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಅಶ್ರಯದಲ್ಲಿ ನಡೆದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ. ಪ್ರಸಾದ್ ರಾವ್ ಮಾತನಾಡಿದರು.

ರಾಘವೇಂದ್ರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ. ರಾಮಚಂದ್ರ ಐತಾಳ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಹೆಬ್ರಿ ಗುರುದಾಸ್ ಶೆಣೈ, ನರೇಂದ್ರ ನಾಯಕ್, ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಉಪನ್ಯಾಸಕ
ರಾದ ವಿಷ್ಣುಮೂರ್ತಿ ಪ್ರಭು, ಆಶಾಲತಾ, ಪ್ರದೀಪ್ ಶೆಟ್ಟಿ ಸಿರಿಬೈಲು, ಬಾಲರಾಜ್ ಡಿಬಿ, ಅರುಣ್ ಕುಮಾರ್, ವಿಜಯೇಂದ್ರ ಶೆಣೈ, ಡಾ. ಪ್ರವೀಣ್ ಕುಮಾರ್ ಇದ್ದರು.

ವರ್ಗಾವಣೆಗೊಂಡ ಡಾ. ಗಣಪತಿ ಎಚ್.ಎ., ಎನ್ಎಸ್ಎಸ್ ಯೋಜನಾಧಿಕಾರಿ ಬಾಲರಾಜ್ ಡಿ.ಬಿ., ಪಿಎಚ್‌ಡಿ ಪದವಿ ಪಡೆದ ಕನ್ನಡ ಉಪನ್ಯಾಸಕ ಡಾ. ಪ್ರವೀಣ್ ಕುಮಾರ್ ಅವರನ್ನು ವಾರ್ಷಿಕೋತ್ಸವದಲ್ಲಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT