ಉಡುಪಿ: ಶೀರೂರು ಮಠಾಧೀಶ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಅಂಗವಾಗಿ ಹೊರೆಕಾಣಿಕೆ ಸಲ್ಲಿಕೆಗೆ ಶನಿವಾರ ಚಾಲನೆ ನೀಡಲಾಯಿತು.

ಶೀರೂರು ಮಠದ ದಿವಾನ ಉದಯಕುಮಾರ್ ಸರಳತ್ತಾಯ
ಅವರು ನಗರದ ಜೋಡುಕಟ್ಟೆ ಬಳಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶೀರೂರು ಪರ್ಯಾಯ
ಎಂದರೆ ಭಕ್ತರ ಪರ್ಯಾಯ. ಕೃಷ್ಣ ಭಕ್ತರೆಲ್ಲರೂ ಈ ಮಹೋತ್ಸವದಲ್ಲಿ ಭಾಗಿಗಳಾಗಬೇಕು. ಅನ್ನಬ್ರಹ್ಮ ಉಡುಪಿ ಶ್ರೀಕೃಷ್ಣನ ಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಹೊರೆಕಾಣಿಕೆ ಸಮಿತಿ ಸಂಚಾಲಕ ಬೈಕಾಡಿ ಸುಪ್ರಸಾದ ಶೆಟ್ಟಿ ನೇತೃತ್ವದಲ್ಲಿ ಹೊರೆಕಾಣಿಕೆ ಮೆರವಣಿಗೆ ನಡೆದಿದ್ದು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಒಕ್ಕೂಟ ಹಾಗೂ ಬೆಳ್ತಂಗಡಿ ಭಾಗದಿಂದ ಹೊರೆಕಾಣಿಕೆ ಸಲ್ಲಿಕೆಯಾಯಿತು.

ದವಸಧಾನ್ಯ, ಅಕ್ಕಿಮುಡಿಗಳು, ತರಕಾರಿ ಇತ್ಯಾದಿಗಳನ್ನು ಸಾಂಪ್ರದಾಯಿಕ ಮೆರವಣಿಗೆ ಮೂಲಕ ಕೊಂಡೊಯ್ದು, ಕೃಷ್ಣಮಠ ಪಾರ್ಕಿಂಗ್ ಪ್ರದೇಶದ ಬಳಿ ನಿರ್ಮಿಸಿರುವ ಉಗ್ರಾಣದಲ್ಲಿರಿಸಲಾಯಿತು. ಭಾವಿ ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಗ್ರಾಣಕ್ಕೆ ಭೇಟಿ ನೀಡಿದರು.

ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್ಪಾಲ್ ಸುವರ್ಣ, ಕಾರ್ಯದರ್ಶಿ ಮೋಹನ ಭಟ್, ಮಠದ ಪಾರುಪತ್ಯಗಾರ ಶ್ರೀಶ ಭಟ್ ಕಡೆಕಾರ್, ವಿಜಯ ಕೊಡವೂರು, ಸಂದೀಪ ಮಂಜ, ರಘುಪತಿ ರಾವ್, ಪದ್ಮಾ ರತ್ನಾಕರ್ ಪಾಲ್ಗೊಂಡಿದ್ದರು.

ಜ. 17ರವರೆಗೆ ಪ್ರತಿದಿನ ಹೊರೆಕಾಣಿಕೆ ಸಮರ್ಪಣೆಯಾಗಲಿದೆ.

ಜ. 17ರವರೆಗೆ ಪ್ರತಿದಿನ ಹೊರೆಕಾಣಿಕೆ ಸಮರ್ಪಣೆ ಕೃಷ್ಣ ಭಕ್ತರೆಲ್ಲರೂ ಈ ಮಹೋತ್ಸವದಲ್ಲಿ ಭಾಗಿಗಳಾಗಿ: ಉದಯಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.