ಸೋಮವಾರ, ಸೆಪ್ಟೆಂಬರ್ 27, 2021
21 °C

ಸುಕೃತೀಂದ್ರ ಸ್ವಾಮಿಜಿ ಪುಣ್ಯತಿಥಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 ಕಾರ್ಕಳ: ಇಲ್ಲಿನ ಶ್ರೀನಿವಾಸಾಶ್ರಮದ ಸುಕೃತೀಂದ್ರ ಬಲಾಕಾಶ್ರಮದಲ್ಲಿ ಭಕ್ತರ ಉಪಸ್ಥಿತಿಯಲ್ಲಿ ಕಾಶೀಮಠಾಧೀಶ ಸುಕೃತೀಂದ್ರ ತೀರ್ಥ ಸ್ವಾಮೀಜಿ ಪುಣ್ಯತಿಥಿ ಆಚರಿಸಲಾಯಿತು.

ಬೆಳಿಗ್ಗೆ ಸ್ತೋತ್ರ ಪಠಣ, ಭಜನಾ ಕಾರ್ಯಕ್ರಮ ನಡೆದವು. ಮಧ್ಯಾಹ್ನ ಮುರಳೀಧರ ಗೋಪಾಲಕೃಷ್ಣ ದೇವರ ಪೂಜೆ, ಗುರುಪೂಜೆ ನಡೆಯಿತು.

ವೆಂಕಟರಮಣ ಮಹಿಳಾ ಭಜನಾ ಮಂಡಳಿ ಹಾಗೂ ವೆಂಕಟರಮಣ ಭಜನಾ ಮಂಡಳಿ ವತಿಯಿಂದ ಸಂಕೀರ್ತನಾ ಕಾರ್ಯಕ್ರಮಗಳು ನಡೆದವು.

ವೇದಮೂರ್ತಿ ಗೋಪಿನಾಥ ಪುರಾಣಿಕ ಧಾರ್ಮಿಕ ವಿಧಿ ನಡೆಸಿದರು. ಸೇವಾದಾರರಾದ ಟಿ.ಸುರೇಂದ್ರ ಕಾಮತ್, ಟಿ.ಶ್ರೀನಿವಾಸ ಕಾಮತ್, ಸುಕೃತೀಂದ್ರ ಬಲಾಕಾಶ್ರಮದ ಸಂಚಾಲಕ ಎಂ.ಶ್ರೀನಿವಾಸ ಪೈ ಇದ್ದರು.

ಕಾಶೀಮಠ ವ್ಯವಸ್ಥಾಪನಾ ಸಮಿತಿಯ ಕೋಶಾಧಿಕಾರಿ ಐ. ರವೀಂದ್ರನಾಥ ಪೈ ಸ್ವಾಗತಿಸಿ, ನಿರೂಪಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು