ಶುಕ್ರವಾರ, ಮೇ 27, 2022
31 °C
ವೇತನ ವಿಳಂಬ: ಹೆಜಮಾಡಿ ಟೋಲ್‌ನಲ್ಲಿ ಕಾರ್ಮಿಕರ ಪ್ರತಿಭಟನೆ

ವೇತನ ವಿಳಂಬ: ಹೆಜಮಾಡಿ ಟೋಲ್‌ನಲ್ಲಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಡುಬಿದ್ರಿ: ಹೆಜಮಾಡಿಯಲ್ಲಿ ಕಾರ್ಯಾಚರಿಸುತ್ತಿರುವ ನವಯುಗ್ ಟೋಲ್ ಪ್ಲಾಝಾದ ಗುತ್ತಿಗೆ ಕಾರ್ಮಿಕರು ವೇತನ ಪಾವತಿ ವಿಳಂಬವನ್ನು ಖಂಡಿಸಿ ಗುರುವಾರ ದಿಢೀರ್ ಮುಷ್ಕರ ನಡೆಸಿದ್ದು, ವಾಹನ ಮಾಲೀಕರು ಟೋಲ್ ಮುಕ್ತವಾಗಿ ಸಂಚಾರ ಆನಂದಿಸಿದರೆ, ನವಯುಗ್‌ ಕಂಪೆನಿಯು ₹3.5 ಲಕ್ಷ ನಷ್ಟ ಅಂದಾಜಿಸಿದೆ. 

ಇಲ್ಲಿನ ಕಾರ್ಮಿಕರು ಟಿಬಿಆರ್ ಗುತ್ತಿಗೆ ಕಂಪನಿ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರತಿ ತಿಂಗಳ 10ನೇ ತಾರೀಕಿಗೆ ವೇತನ ಪಾವತಿಯಾಗುತ್ತಿತ್ತು.  ಈ ಬಾರಿ 18 ದಿನ ಕಳೆದರೂ ವೇತನ ಪಾವತಿಸಿಲ್ಲ. ಕಾರ್ಮಿಕರ ಬೇಡಿಕೆ ಹಿನ್ನೆಲೆಯಲ್ಲಿ 17ರೊಳಗೆ ವೇತನ ಪಾವತಿಸುವ ಭರವಸೆಯನ್ನು ಗುತ್ತಿಗೆ ಕಂಪನಿ ನೀಡಿತ್ತು. ಆದರೆ, ವೇತನ ಪಾವತಿಯಾಗದ ಕಾರಣ ಬೆಳಿಗ್ಗೆ 8 ಗಂಟೆಯಿಂದ ಸುಮಾರು 97 ಕಾರ್ಮಿಕರು ಮುಷ್ಕರ ನಡೆಸಿದರು.

ಟಿಬಿಆರ್ ಕಂಪನಿಯು ಕಾರ್ಮಿಕರಿಗೆ 7 ತಿಂಗಳಿಂದ ಭವಿಷ್ಯ ನಿಧಿ ಹಣ ನೀಡದೆ ಸತಾಯಿಸುತ್ತಿದೆ ಎಂದೂ ಕಾರ್ಮಿಕರು ಆರೋಪಿಸಿದ್ದಾರೆ. ನವಯುಗ್ ಕಂಪನಿಯು ಮಧ್ಯ ಪ್ರವೇಶಿಸಿ ಮಾತುಕತೆ ನಡೆಸಿದೆ. ಮುಷ್ಕರದ ಆರಂಭಗೊಂಡ ಬಳಿಕ, ಟಿಬಿಆರ್ ಕಂಪನಿಯು ವೇತನ ನೀಡಲು ಆರಂಭಿಸಿದೆ. ಆದರೆ, ಸಂಜೆ ವರೆಗೆ ಎಲ್ಲ ಕಾರ್ಮಿಕರಿಗೆ ವೇತನ ಪಾವತಿಸಲು ವಿಫಲವಾಗಿದೆ. ಇದರಿಂದ ಸಂಜೆವರೆಗೂ ಮುಷ್ಕರ ಮುಂದುವರಿದಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು