ಮಂಗಳವಾರ, ನವೆಂಬರ್ 24, 2020
27 °C
ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದ್ದ ಉಡುಪಿಯ ಲಿಂಗತ್ವ ಅಲ್ಪಸಂಖ್ಯಾತರು

ಮಗುವಿನ ಚಿಕಿತ್ಸೆಗೆ ಸಂಗ್ರಹಿಸಿದ್ದ ಹಣ ಹಸ್ತಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಎರಡೂವರೆ ವರ್ಷದ ಕಂದಮ್ಮನ ಚಿಕಿತ್ಸಾ ವೆಚ್ಚ ಭರಿಸಲು ಉಡುಪಿಯ ಲಿಂಗತ್ವ ಅಲ್ಪಸಂಖ್ಯಾತರು ಸಾರ್ವಜನಿಕರಿಂದ ಸಂಗ್ರಹಿಸಿದ್ದ ದೇಣಿಗೆಯನ್ನು ಗುರುವಾರ ಆರಾಧ್ಯ ಪೋಷಕರಿಗೆ ಹಸ್ತಾಂತರಿಸಲಾಯಿತು.

ಬೆಳ್ತಂಗಡಿ ತಾಲ್ಲೂಕಿನ ಮಡಂತ್ಯಾರುವಿನಲ್ಲಿರುವ ಮಗುವಿನ ನಿವಾಸಕ್ಕೆ ತೆರಳಿದ ಮಂಗಳೂರಿನ ನವಸಹಜ ಸಂಘಟನೆ ಹಾಗೂ ಉಡುಪಿ ಆಶ್ರಯ ಸಮುದಾಯ ಸಂಘಟನೆ ಸದಸ್ಯರು ₹ 70,000ದ ಚೆಕ್‌ ಅನ್ನು ಪೋಷಕರಿಗೆ ನೀಡಿದರು.

ಮಗುವಿನ ಪೋಷಕರು ಸಮುದಾಯದ ಸಮಾಜಮುಖಿ ಕಾರ್ಯಕ್ಕೆ ಸಂತಸಪಟ್ಟರು. ಇದೇವೇಳೆ ಮಗು ಶೀಘ್ರ ಗುಣಮುಖವಾಗಲಿದೆ ಎಂದು ಹಾರೈಸಿ ಬಂದೆವು ಎಂದು ಆಶ್ರಯ ಸಂಘಟನೆಯ ಸಮೀಕ್ಷಾ ತಿಳಿಸಿದರು.

ಆಶ್ರಯ ಸಂಸ್ಥೆ ಹಲವು ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗೆ ಶ್ರಮಿಸುತ್ತಿದೆ. ಈಚೆಗೆ ಮಗುವಿನ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸಮೀಕ್ಷಾ ನೇತೃತ್ವದ ತಂಡ ಉಡುಪಿ, ಮಣಿಪಾಲ್‌ ಹಾಗೂ ಕಾರ್ಕಳದಲ್ಲಿ ಸಾರ್ವಜನಿಕರಿಂದ ₹ 21,000 ದೇಣಿಗೆ ಸಂಗ್ರಹಿಸಿತ್ತು. ‌

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು