ಉಡುಪಿ: ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಹವಾಮಾನ ಮುನ್ಸೂಚನೆ ಸೇರಿದಂತೆ ವಿವಿಧ ಮಾಹಿತಿ ನೀಡಲು ಬಳಸುವ ಉಪಗ್ರಹ ಆಧಾರಿತ ದ್ವಿಮಾರ್ಗ ಸಂವಹನ ಯಂತ್ರಗಳನ್ನು (ಟ್ರಾನ್ಸ್ಪಾಂಡರ್) ನಾಡದೋಣಿಗಳಿಗೂ ಅಳವಡಿಸುವ ಕಾರ್ಯ ನಡೆಯುತ್ತಿದೆ.

ಭಾರತ ಸರ್ಕಾರದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಅಡಿಯಲ್ಲಿ ನೀಡುವ ಈ ಸಂವಹನ ಯಂತ್ರವನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ನಾಡದೋಣಿಗಳಿಗೂ ಅಳವಡಿಸುವ ಕಾರ್ಯ ನಡೆಯುತ್ತಿದೆ.

ಟ್ರಾನ್ಸ್ಪಾಂಡರ್ಗಳನ್ನು ಆಳ ಸಮುದ್ರಕ್ಕೆ ತೆರಳುವ ಕೆಲವು ಯಾಂತ್ರೀಕೃತ ದೋಣಿಗಳಿಗೆ ಆರಂಭದಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿತ್ತು. ಈ ಬಾರಿ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ ಬಹುತೇಕ ದೋಣಿಗಳಿಗೆ ಇದನ್ನು ಅಳವಡಿಸಲಾಗಿದೆ ಎಂದು ಮೀನುಗಾರಿಕಾ ಇಲಾಖೆಯ ಮೂಲಗಳು ತಿಳಿಸಿವೆ.

ಟ್ರಾಲಿಂಗ್ ನಿಷೇಧದ ಅವಧಿಯಲ್ಲಿ ನಾಡ ದೋಣಿಗಳು ಮೀನುಗಾರಿಕೆ ತೆರಳುವ ಕಾರಣ, ಪ್ರಕ್ಷುಬ್ಧ ಕಡಲಿನಲ್ಲಿ ಪದೇ ಪದೇ ದೋಣಿ ದುರಂತಗಳು ನಡೆಯುತ್ತಿವೆ. ಅದನ್ನು ಮನಗಂಡು ನಾಡ ದೋಣಿಗಳಿಗೂ ಈ ಉಪಕರಣವನ್ನು ಅಳವಡಿಸಲಾಗುತ್ತಿದೆ. ಈಗಾಗಲೇ 1,500ಕ್ಕೂ ಹೆಚ್ಚು ದೊಡ್ಡ ಯಾಂತ್ರೀಕೃತ ದೋಣಿಗಳಿಗೆ ಟ್ರಾನ್ಸ್ಪಾಂಡರ್ ಅಳವಡಿಸಲಾಗಿದೆ ಎಂದೂ ಹೇಳಿವೆ.

ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ ವೇಳೆ ಅಪಾಯ ಎದುರಾದರೆ ಕೂಡಲೇ ಸಂದೇಶ ರವಾನಿಸಲು ಈ ಉಪಕರಣವು ಅತ್ಯಂತ ಉಪಯೋಗಪ್ರದವಾಗಿದೆ. ಈ ದ್ವಿಮಾರ್ಗ (ಟು ವೇ) ಸಂವಹನ ಯಂತ್ರದ ಸಹಾಯದಿಂದ ಮೀನಿನ ಲಭ್ಯತೆ, ಕ್ಷಣ ಕ್ಷಣದ ಹವಾಮಾನ ಮುನ್ಸೂಚನೆ ಜೊತೆಗೆ ಒಂದು ದೋಣಿಯವರಿಗೆ ಇನ್ನೊಂದು ದೋಣಿಯವರೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತದೆ.

ಉಪಗ್ರಹ ಆಧಾರಿತ ಟ್ರಾನ್ಸ್ಪಾಂಡರ್ ಅಳವಡಿಸಿದ ಬಳಿಕ ಮೊಬೈಲ್ನಲ್ಲಿ ‘ನಭ ಮಿತ್ರ’ ಆ್ಯಂಡ್ರಾಯ್ಡ್ ಆ್ಯಪ್ ಅಳವಡಿಸಿಕೊಳ್ಳಬೇಕಾಗುತ್ತದೆ. ಈ ಆ್ಯಪ್ ಮೂಲಕ ವಿವಿಧ ಮಾಹಿತಿ ಲಭ್ಯವಾಗುತ್ತದೆ. ಇದು ಬ್ಯಾಟರಿ ಚಾಲಿತ ಉಪಕರಣವಾಗಿದೆ.

ದೋಣಿ ಮುಳುಗುವ ಸಂದರ್ಭದಲ್ಲಿ ಇದರಲ್ಲಿರುವ ಪ್ಯಾನಿಕ್ ಬಟನ್ ಅನ್ನು ಅದುಮಿದರೆ ಕಂಟ್ರೋಲ್ ರೂಮ್ಗೆ ಮಾಹಿತಿ ರವಾನೆ ಆಗುತ್ತದೆ ಎನ್ನುತ್ತವೆ ಮೀನುಗಾರಿಕಾ ಇಲಾಖೆಯ ಮೂಲಗಳು.

ಇಸ್ರೊದ ಉಪಗ್ರಹ ಆಧರಿತವಾಗಿ ಕಾರ್ಯಾಚರಿಸುವ ಈ ಉಪಕರಣದ ಮೂಲಕ ದೋಣಿಯ ಮಾಲಕರಿಗೆ ತಮ್ಮ ದೋಣಿ ಸಮುದ್ರದ ಯಾವ ಭಾಗದಲ್ಲಿದೆ ಎಂಬುದನ್ನು ಪತ್ತೆ ಹಚ್ಚಬಹುದಾಗಿದೆ. ಜೊತೆಗೆ ದೊಡ್ಡ ದೋಣಿಗಳು ನಮ್ಮ ದೇಶದ ಸಾಗರ ಗಡಿಯನ್ನು ದಾಟಿದರೆ ಅವರಿಗೆ ಎಚ್ಚರಿಕೆ ನೀಡಬಹುದಾಗಿದೆ. ಕರಾವಳಿ ಭದ್ರತಾ ಪಡೆಗಳಿಗೂ ದೋಣಿಗಳ ಮೇಲೆ ನಿಗಾ ವಹಿಸಬಹುದಾಗಿದೆ.

ಇದು ಅತ್ಯಂತ ಹಗುರವಾದ ಉಪಕರಣವಾಗಿದ್ದು ನಾಡದೋಣಿಗಳಲ್ಲೂ ಸುಲಭವಾಗಿ ಅಳವಡಿಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

ಜೂನ್ ಜುಲೈ ತಿಂಗಳಲ್ಲಿ ನಾಡದೋಣಿಗಳಲ್ಲಿ ಮೀನುಗಾರಿಕೆ ನಡೆಸುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕಾಗುತ್ತದೆ. ಟ್ರಾನ್ಸ್ಪಾಂಡರ್ ಅಳವಡಿಸಿದರೆ ಮೀನುಗಾರರಿಗೆ ಅನುಕೂಲವಾಗಲಿದೆ
ರತನ್ ಮೀನುಗಾರ ಮಲ್ಪೆ

‘ಒಂದೇ ಸೂರಿನಡಿ ಹಲವು ಸೇವೆ’:

‘ಜಿಲ್ಲೆಯಲ್ಲಿ 1000ಕ್ಕೂ ಹೆಚ್ಚು ನಾಡ ದೋಣಿಗಳಿಗೆ ಟ್ರಾನ್ಸ್ಪಾಂಡರ್ ಅಳವಡಿಸಲಾಗುವುದು. ಈಗಾಗಲೇ ಕೆಲವು ನಾಡ ದೋಣಿಗಳಿಗೆ ಟ್ರಾನ್ಸ್ಪಾಂಡರ್ ಅಳವಡಿಸಲಾಗಿದೆ. ಆಳಸಮುದ್ರಕ್ಕೆ ತೆರಳುವ ಯಾಂತ್ರೀಕೃತ ದೋಣಿಗಳು ಪರವಾನಗಿ ನವೀಕರಿಸುವ ಮೊದಲು ಈ ಉಪಕರಣವನ್ನು ಅಳವಡಿಸಲಾಗಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್. ಆರ್. ತಿಳಿಸಿದರು.

‘ಈ ಉಪಕರಣದ ಮೂಲಕ ಒಂದೇ ಸೂರಿನಡಿ ಹಲವು ಸೇವೆಗಳು ಲಭ್ಯವಾಗಲಿದೆ. ಮೀನಿನ ಲಭ್ಯತೆ ಹವಾಮಾನ ಮುನ್ಸೂಚನೆ ಮಾತ್ರವಲ್ಲದೆ ತಾವು ಹಿಡಿದಿರುವ ಮೀನುಗಳ ಮಾಹಿತಿಯನ್ನು ಮೀನುಗಾರರು ಸಮುದ್ರದಿಂದಲೇ ಹಂಚಿಕೊಳ್ಳುವ ಮೂಲಕ ಮೀನಿಗೆ ಮಾರುಕಟ್ಟೆಯನ್ನೂ ಒದಗಿಸಬಹುದಾಗಿದೆ. ಟ್ರಾನ್ಸ್ಪಾಂಡರ್ನಲ್ಲಿ ಬಳಸುವ ಬ್ಯಾಟರಿಯನ್ನು ಚಾರ್ಜ್ ಮಾಡಬಹುದಾಗಿದ್ದು ಒಮ್ಮೆ ಚಾರ್ಜ್ ಮಾಡಿದರೆ ಒಂದು ವಾರದವರೆಗೆ ಅದು ಕಾರ್ಯನಿರ್ವಹಿಸುತ್ತದೆ’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.