ಕಾರ್ಕಳ: ‘ತುಳು ಭಾಷೆ ಎರಡು ಸಾವಿರ ವರ್ಷಗಳಿಗೂ ಅಧಿಕ ಪ್ರಾಚೀನ ಇತಿಹಾಸ ಹೊಂದಿದೆ’ ಎಂದು ಸಾಹಿತಿ, ಬೆಳ್ಮಣ್ ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ. ಜನಾರ್ದನ ಭಟ್ ಹೇಳಿದರು.

ತಾಲ್ಲೂಕಿನ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಭಾನುವಾರ ಫ್ರೆಂಡ್ಸ್ ಕ್ಲಬ್ನ ರಜತ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ‘ತುಳು ಪರ್ಬ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಪಾಂಗಾಳ ಬಾಬು ಕೊರಗ ಮಾತನಾಡಿ, ತುಳುವರು ತುಳು ಭಾಷೆಯ ಆರಾಧನೆ ಮಾಡುತ್ತಿರುವುದು ಅಭಿಮಾನದ ವಿಷಯವಾಗಿದೆ. ನಮ್ಮ ನಾಡಿನ ಆಚಾರ– ವಿಚಾರವನ್ನು ತುಳು ಪರ್ಬದ ಮೂಲಕ ಆಚರಿಸುತ್ತಿರುವುದು ಪ್ರಶಂಸನೀಯ ಎಂದರು.

ನಂದಳಿಕೆ ಅಬ್ಬನಡ್ಕ ಕ್ಲಬ್ ಅಧ್ಯಕ್ಷ ದಿನೇಶ್ ಪೂಜಾರಿ, ಕಾರ್ಯಕ್ರಮದ ನಿರ್ದೇಶಕಿ ಪುಷ್ಪಾ ಕುಲಾಲ್, ಅಬ್ಬನಡ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುರೇಶ್ ಕಾಸರಬೈಲು ಭಾಗವಹಿಸಿದ್ದರು. ತುಳು ಪರ್ಬದ ಅಂಗವಾಗಿ ಜರುಗಿದ ತುಳು ಕವಿಗೋಷ್ಠಿಯಲ್ಲಿ ವಾಸಂತಿ ಅಂಬಲಪಾಡಿ, ಹರಿಪ್ರಸಾದ್ ನಂದಳಿಕೆ, ದೀಪಿಕಾ ಉಡುಪಿ, ಸುಲೋಚನಾ ಪಚ್ಚಿನಡ್ಕ, ಶ್ರೀ ಮುದ್ರಾಡಿ ತುಳು ಕವನಗಳನ್ನು ವಾಚಿಸಿದರು.

ಫ್ರೆಂಡ್ಸ್ ಕ್ಲಬ್ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ನಿರೂಪಿಸಿದರು. ಪದ್ಮಶ್ರೀ ಪೂಜಾರಿ, ಅನ್ನಪೂರ್ಣ ಕಾಮತ್ ಪ್ರಾರ್ಥಿಸಿದರು. ಕಾರ್ಯದರ್ಶಿ ಸಂಧ್ಯಾ ಶೆಟ್ಟಿ ಸ್ವಾಗತಿಸಿದರು. ಮಹಿಳಾ ಸಂಘಟನಾ ಕಾರ್ಯದರ್ಶಿ ಲೀಲಾ ಪೂಜಾರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.