ಉಡುಪಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ 1ಕಿ.ಮೀ ಕಾಮಗಾರಿ ಮಾಡಿ 10 ಕಿ.ಮೀ ಕಾಮಗಾರಿಗೆ ಬಿಲ್ ಕೊಟ್ಟಿದ್ದಾರೆ. 24 ಗಂಟೆಯೊಳಗೆ ಕಾಮಗಾರಿ ಮಂಜೂರಾಗಿ ಕೆಲಸವನ್ನೂ ಮುಗಿಸಲಾಗಿದೆ. ವಾಸ್ತವದಲ್ಲಿ ಇದೆಲ್ಲ ಸಾಧ್ಯವೇ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದರು.
ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಸಮರ್ಪಕವಾಗಿ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಮಾತ್ರ ಸರ್ಕಾರ ಬಿಲ್ ಪಾವತಿಸಲಿದೆ. ಬಿಬಿಎಂಪಿ ನಡೆದಿರುವ ಅವ್ಯವಹಾರದ ಬಗ್ಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಕಳೆದ ಮೂರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಹೊಸ ಯೋಜನೆಗೆ ಕೈಹಾಕಿಲ್ಲ. ಹಿಂದಿನ ಸರ್ಕಾರದ ಕಾಮಗಾರಿಗಳು ನಡೆಯುತ್ತಿವೆ. ಹೊಸ ಕಾಮಗಾರಿಗಳು ನಡೆಯದಿರುವಾಗ ಕಮಿಷನ್ ವಿಚಾರ ಎಲ್ಲಿಂದ ಬರಲಿದೆ. ಕಾಂಗ್ರೆಸ್ ಕಮಿಷನ್ ಕೇಳಿರುವ ಯಾವ ಪ್ರಕರಣಗಳು ಇಲ್ಲ ಎಂದು ಸಚಿವೆ ಹೇಳಿದರು.
ಬಿಜೆಪಿ ಸಾಲ ಮಾಡಿ ಹೋಗಿರುವಾಗ ಗುತ್ತಿಗೆದಾರರಿಗೆ ನಾಲ್ಕು ವರ್ಷದ ಬಾಕಿ ಬಿಲ್ ಒಂದೇ ಬಾರಿ ಪಾವತಿಸುವುದು ಹೇಗೆ. ರಾಜ್ಯದ ಬೊಕ್ಕಸದ ಪರಿಸ್ಥಿತಿ ಎಲ್ಲರಿಗೂ ಗೊತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರೆಯಾಗದಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲಿದ್ದಾರೆ ಎಂದರು.
ಸಮರ್ಪಕವಾಗಿ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಮಾತ್ರ ಬಿಲ್ ಪಾವತಿ ಬಿಬಿಎಂಪಿ ನಡೆದಿರುವ ಅವ್ಯವಹಾರದ ಬಗ್ಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ ಕಾಂಗ್ರೆಸ್ ಕಮಿಷನ್ ಕೇಳಿರುವ ಯಾವ ಪ್ರಕರಣಗಳು ಇಲ್ಲ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.