ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: 14 ಮಂದಿಗೆ ಕೋವಿಡ್-19, ಸೋಂಕಿತರ ಸಂಖ್ಯೆ 1,006ಕ್ಕೆ ಏರಿಕೆ

Last Updated 13 ಜೂನ್ 2020, 14:17 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕಿತರ ಸಂಖ್ಯೆ 1,000ರ ಗಡಿ ದಾಟಿದೆ. ಶನಿವಾರ 14 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,006ಕ್ಕೇರಿದೆ.

ಎಲ್ಲ ಸೋಂಕಿತರೂ ಮಹಾರಾಷ್ಟ್ರದ ಸಂಪರ್ಕ ಹೊಂದಿದ್ದು, 8 ಪುರುಷರು, ಐವರು ಮಹಿಳೆಯರು ಹಾಗೂ 6 ವರ್ಷದ ಬಾಲಕಿಗೆ ಸೋಂಕು ತಗುಲಿದೆ. ಎಲ್ಲರಿಗೂ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲೇ ಹೆಚ್ಚು ಸೋಂಕಿತರು

ರಾಜ್ಯದಲ್ಲಿ ಹೆಚ್ಚು ಸೋಂಕಿತರು ಇರುವ ಪಟ್ಟಿಯಲ್ಲಿ ಉಡುಪಿ (1,006) ಮೊದಲ ಸ್ಥಾನದಲ್ಲಿದೆ. ಕಲಬುರಗಿ (883), ಯಾದಗಿರಿ (787), ಬೆಂಗಳೂರು ನಗರ (648) ನಂತದ ಸ್ಥಾನಗಳಲ್ಲಿವೆ.

ಗುಣಮುಖರಾದವರಲ್ಲೂ ಜಿಲ್ಲೆ ಪ್ರಥಮ

ರಾಜ್ಯದಲ್ಲಿ ಅತಿ ಹೆಚ್ಚು ಸೋಂಕಿತರು ಗುಣಮುಖರಾಗುತ್ತಿರುವ ಪಟ್ಟಿಯಲ್ಲೂ ಉಡುಪಿ ಮುಂಚೂಣಿಯಲ್ಲಿದೆ. ಜಿಲ್ಲಾ ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಇದುವರೆಗೂ 720 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಲಬುರಗಿ (377), ಬೆಂಗಳೂರು ನಗರ (299) ನಂತರದ ಸ್ಥಾನಗಳಲ್ಲಿವೆ.

ಸದ್ಯ ಜಿಲ್ಲೆಯಲ್ಲಿ 285 ಸಕ್ರಿಯ ಪ್ರಕರಣಗಳಷ್ಟೆ ಬಾಕಿ ಇದ್ದು, ಶೀಘ್ರ ಎಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

ತಿಂಗಳಲ್ಲಿ ಸಾವಿರ ಪ್ರಕರಣ

ಮೇ 14ರವರೆಗೂ ಜಿಲ್ಲೆಯಲ್ಲಿದ್ದ ಸೋಂಕಿತರ ಸಂಖ್ಯೆ ಕೇವಲ ಮೂರು. ಯಾವುದೇ ಸಕ್ರಿಯ ಪ್ರಕರಣಗಳು ಇರಲಿಲ್ಲ. ಇದಾಗಿ ಒಂದು ತಿಂಗಳು ಕಳೆಯುವಷ್ಟರಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿರುವುದು ಆತಂಕ ಮೂಡಿಸಿದೆ.

ಮುಂಬೈ ‘ಆಘಾತ’

ಸೋಂಕಿತರ ಪೈಕಿ ಶೇ 90ರಷ್ಟು ಮಂದಿ ಮುಂಬೈನಿಂದ ಬಂದವರು. ಉಳಿದ ಪ್ರಕರಣಗಳಿಗೆ ದುಬೈ ಸೇರಿದಂತೆ ಸ್ಥಳೀಯ ಸಂಪರ್ಕವಿದೆ. ಜಿಲ್ಲೆಗೆ ಇದುವರೆಗೂ 8,500ಕ್ಕೂ ಹೆಚ್ಚು ಮಂದಿ ಮುಂಬೈ ನಗರವೊಂದರಿಂದಲೇ ಬಂದಿದ್ದು, ಶೇ 10ರಷ್ಟು ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದು ಆತಂಕಕಾರಿ.

ಮತ್ತೆ ಮುಂಬೈನಿಂದ ಪ್ರತಿದಿನ ಜಿಲ್ಲೆಗೆ ಬರುವವರ ಸಂಖ್ಯೆ ಹೆಚ್ಚುತ್ತಿದ್ದು, ಎಲ್ಲರನ್ನೂ ಜಿಲ್ಲಾಡಳಿತ 14 ದಿನಗಳ ಹೋಂ ಕ್ವಾರಂಟೈನ್‌ನಲ್ಲಿಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT