ಶನಿವಾರ, ಜುಲೈ 31, 2021
25 °C
18 ಮಂದಿಗೆ ಕೋವಿಡ್‌–19 ದೃಢ:1047 ಮಾದರಿ ರವಾನೆ

ಅಂತರ ಜಿಲ್ಲಾ ಪ್ರಯಾಣ: ಸೋಂಕು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಅಂತರ ಜಿಲ್ಲೆಗೆ ಪ್ರಯಾಣಿಸಿದ 6 ಮಂದಿಗೆ ಸೇರಿ ಜಿಲ್ಲೆಯಲ್ಲಿ ಶನಿವಾರ 18 ಜನರಲ್ಲಿ ಕೋವಿಡ್‌–19 ಸೋಂಕು ದೃಢಪಟ್ಟಿದೆ.

ಮಂಗಳೂರು ಪ್ರಯಾಣದಿಂದ ಮೂವರಿಗೆ, ಬೆಂಗಳೂರು ಪ್ರಯಾಣದಿಂದ ಮೂವರಿಗೆ ಸೋಂಕು ತಗುಲಿದ್ದು,  ಪಿ–18671, ಪಿ–9599, ಪಿ–4691, ಪಿ–3624, ಪಿ–16595, ಪಿ–9767, ಪಿ.8328 ಸೋಂಕಿತರ ಸಂಪರ್ಕದಿಂದ 7 ಮಂದಿಗೆ ಸೋಂಕು ಹರಡಿದೆ.

ಪಿ–15281 ಸಂಪರ್ಕದಿಂದ ಮೂವರಿಗೆ, ಪಿ–15298 ಸಂಪರ್ಕದಿಂದ ಇಬ್ಬರಿಗೆ ಸೋಂಕು ತಗುಲಿದೆ. ಇವರಲ್ಲಿ 7 ಮಹಿಳೆಯರು, 10 ಪುರುಷರು ಹಾಗೂ ಒಂದು ಮಗು ಸೇರಿದೆ. ಎಲ್ಲರಿಗೂ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

1,047 ಮಾದರಿ ರವಾನೆ:

ಶನಿವಾರ ಜಿಲ್ಲೆಯಿಂದ 1,047 ಜನರ ಗಂಟಲ ಕಫದ ಮಾದರಿಯನ್ನು ಪ್ರಯೋಗಾಲಗಳಿಗೆ ಕಳುಹಿಸಲಾಗಿದೆ. ಉಸಿರಾಟದ ತೊಂದರೆ, ಶೀತದ ಲಕ್ಷಣಗಳಿದ್ದ 28 ಜನರಿಗೆ ಐಸೊಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 1,712 ವರದಿಗಳು ಪ್ರಯೋಗಾಲಯದಿಂದ ಬರಬೇಕಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,277ಕ್ಕೇರಿಕೆಯಾಗಿದ್ದು, ಶನಿವಾರ 10 ಮಂದಿ ಸೇರಿ ಇದುವರೆಗೂ 1,114 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ 160 ಸಕ್ರಿಯ ಪ್ರಕರಣಗಳು ಬಾಕಿ ಇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು