ಸೋಮವಾರ, ಜೂನ್ 21, 2021
21 °C

ಶೀರೂರು ಮಠದ ನೂತನ ಯತಿ ವೇದವರ್ಧನ ತೀರ್ಥ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಉಡುಪಿ: ಅಷ್ಟಮಠಗಳಲ್ಲಿ ಒಂದಾಗಿರುವ ಶೀರೂರು ಮಠಕ್ಕೆ ಶುಕ್ರವಾರ ನೂತನ ಉತ್ತರಾಧಿಕಾರಿಯ ಪಟ್ಟಾಭಿಷೇಕ ನೆರವೇರಿತು. ಅನಿರುದ್ಧ ಸರಳತ್ತಾಯ ಎಂಬ 16 ವರ್ಷದ ಬಾಲಕ ವೇದವರ್ಧನ ತೀರ್ಥ ಸ್ವಾಮೀಜಿಯಾಗಿ ಮರು ನಾಮಕರಣಗೊಂಡು, ಶೀರೂರು ಮಠದ 31ನೇ ಯತಿಯಾಗಿ ನಿಯುಕ್ತಿಗೊಂಡರು.

ಮಧ್ಯಾಹ್ನ 12.45ಕ್ಕೆ ಹಿರಿಯಡಕದಲ್ಲಿರುವ ಶೀರೂರು ಮೂಲಮಠದಲ್ಲಿ ಪಟ್ಟಾಭಿಷೇಕದ ವಿಧಿವಿಧಾನಗಳು ನಡೆದವು. ದ್ವಂದ್ವ ಮಠವಾದ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ನೂತನ ಯತಿಗೆ ಪಟ್ಟಾಭಿಷೇಕ ಮಾಡಿದರು. ಇದಕ್ಕೂ ಮುನ್ನ ಪುರುಷಸೂಕ್ತ ಹೋಮ, ವಿರಜಾ ಹೋಮ, ವೇದವ್ಯಾಸ ಮಂತ್ರ ಹೋಮ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳು ನಡೆದವು.

ನೂತನ ಯತಿ ವೇದವರ್ಧನ ತೀರ್ಥರು ಧರ್ಮಸ್ಥಳದ ನಿಡ್ಲೆಯವರು. ವಿದ್ವಾನ್ ಎಂ.ಉದಯಕುಮಾರ್‌ ಹಾಗೂ ವಿದ್ಯಾ ದಂಪತಿಯ ಪುತ್ರ. 10ನೇ ತರಗತಿಯವರೆಗೂ ಉಡುಪಿಯ ವಿದ್ಯೋದಯ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಮುಂದಿನ ವೇದಾಧ್ಯಯನವನ್ನು ಶಿರಸಿಯ ಸೋಂದಾ ಕ್ಷೇತ್ರದಲ್ಲಿ ಮಂದುವರಿಸಲಿದ್ದಾರೆ.

ಜುಲೈ 19, 2018ರಂದು ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ವಿಧಿವಶರಾಗಿದ್ದರು. ಬಳಿಕ ದೀರ್ಘ ಕಾಲದವರೆಗೂ ಪೀಠಕ್ಕೆ ಉತ್ತರಾಧಿಕಾರಿ ನೇಮಕವಾಗಿರಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು