ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಂದಾಪುರದಲ್ಲಿ ವಿಶ್ವ ಯೋಗ ದಿನಾಚರಣೆ

Published 22 ಜೂನ್ 2024, 14:18 IST
Last Updated 22 ಜೂನ್ 2024, 14:18 IST
ಅಕ್ಷರ ಗಾತ್ರ

ಕುಂದಾಪುರ : ಇಲ್ಲಿನ ಭಂಡಾರಕಾರ್ಸ್ ಕಾಲಾ ಮತ್ತು ವಿಜ್ಞಾನ ಕಾಲೇಜಿನ ಐಕ್ಯೂಎಸಿ, ಭಾರತೀಯ ರೆಡ್ ಕ್ರಾಸ್ ಕುಂದಾಪುರ ಘಟಕ, ಯೂತ್ ರೆಡ್ ಕ್ರಾಸ್, ಎನ್ಎಸ್ಎಸ್, ಎನ್ ಸಿ ಸಿ, ರೇಂಜರ್ಸ್ ಮತ್ತು ರೋವರ್ಸ್, ಜೆಸಿಐ ಕುಂದಾಪುರ ಸಿಟಿ ಹಾಗೂ ಯೋಗ ಬಂಧು ಕುಂದಾಪುರ ಇವರ ಸಹಯೋಗದೊಂದಿಗೆ ಕಾಲೇಜಿನ ಆರ್‌.ಎನ್‌. ಶೆಟ್ಟಿ ಸಭಾಂಗಣದಲ್ಲಿ ಶುಕ್ರವಾರ ವಿಶ್ವ ಯೋಗ ದಿನಾಚರಣೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ ಶುಭಕರಾಚಾರ್ಯ ಅವರು , ಮನುಷ್ಯನ ಜೀವನದಲ್ಲಿ ಮುಖ್ಯವಾಗಿ ಬೇಕಾಗಿರುವುದು ಆರೋಗ್ಯ ಮತ್ತು ನೆಮ್ಮದಿ. ನಮ್ಮ ಆರೋಗ್ಯ ಮತ್ತು ನೆಮ್ಮದಿಗಾಗಿ ಪತಂಜಲಿ ಅವರು ಹಾಕಿಕೊಟ್ಟ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಯೋಗ ಬಂಧು ಕುಂದಾಪುರ ಇದರ ಸದಸ್ಯ ಸೀನಾ ಆಚಾರ ಕಾರ್ಯಕ್ರಮ ಉದ್ಘಾಟಿಸಿದರು. ಅನಿಲ್ ಚಾತ್ರ, ನಾಗೇಶ್, ಆದರ್ಶ ಹೆಬ್ಬಾರ್, ಗಜಾನಂದ, ಭಾಸ್ಕರ್ ಗಾಣಿಗ, ವಿಜಯಲಕ್ಷ್ಮೀ ಶೆಟ್ಟಿ, ಮೂಕಾಂಬಿಕ ಉಡುಪ, ಕ್ಯಾಪ್ಟನ್ ಅಂಜನ್ ಕುಮಾರ್ ಎ.ಎಲ್, ಸಬ್ ಲೆಫ್ಟಿನೆಂಟ್ ಶರಣ್ ಇದ್ದರು.

ಯೋಗದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿನಿ ಮಹಿಮಾ ಅವರನ್ನು ಸನ್ಮಾನಿಸಲಾಯಿತು.
ರೇಡಿಯೋ ಕುಂದಾಪುರ ಇದರ ಉದ್ಘೋಷಕಿ ಹಾಗೂ ಉಸ್ತುವಾರಿ ಜ್ಯೋತಿ ಸಾಲಿಗ್ರಾಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT