ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಿನಿಂದ ಕಾಶ್ಮೀರಕ್ಕೆ ಕಾಲ್ನಡಿಗೆ ಹೊರಟ ಬಂಟ್ವಾಳದ ಹುಡುಗರು

ಫಜೀರ್‌ನ ಯುವಕರ ಯಾನ
Last Updated 17 ಆಗಸ್ಟ್ 2021, 3:10 IST
ಅಕ್ಷರ ಗಾತ್ರ

ಪಡುಬಿದ್ರಿ: ಐತಿಹಾಸಿಕ ಸ್ಥಳಗಳ ಅಧ್ಯಯನ ಮಾಡುವ ಉದ್ದೇಶದಿಂದ ಇಬ್ಬರು ಯುವಕರು ಕಾಲ್ನಡಿಗೆಯ ಮೂಲಕ ಕರ್ನಾಟಕದಿಂದ ಕಾಶ್ಮೀರಕ್ಕೆ ಹೊರಟಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಜೀರ್‌ ಗ್ರಾಮದ ಮೆಹತಾಬ್(21) ಹಾಗೂ ಬಿಲಾಲ್(18) ಸೋಮವಾರ ಪಾದ
ಯಾತ್ರೆ ಆರಂಭಿಸಿದ್ದು, ಮಧ್ಯಾಹ್ನ ವೇಳೆ ಪಡುಬಿದ್ರಿ ತಲುಪಿದ್ದಾರೆ.

ಮೆಹತಾಬ್ ಪ್ರಥಮ ಪಿಯುಸಿವರೆಗೆ ಕಲಿತಿದ್ದು, ಸೂಪರ್ ಮಾರ್ಕೆಟ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಬಿಲಾಲ್ ಈ ಬಾರಿ ಎಸ್ಸೆಸ್ಸೆಲ್ಸಿ ಉತ್ತೀರ್ಣನಾಗಿದ್ದು, ಶಿಕ್ಷಣ ಮುಂದುವರಿಸುವ ಇಚ್ಛೆಯನ್ನು ಹೊಂದಿದ್ದಾನೆ. ಲಾಕ್‌ಡೌನ್‌ನಿಂದ ಕೆಲಸವಿಲ್ಲದೇ ಮನೆಯಲ್ಲಿದ್ದ ವೇಳೆ ಸಾಧನೆ ಮಾಡಬೇಕೆಂಬ ಕನಸು ಕಂಡಿದ್ದರು. ಇಬ್ಬರು ಜೊತೆಗೂಡಿ ಪಾದಯಾತ್ರೆ ಮಾಡುವ ಬಗ್ಗೆ 4 ತಿಂಗಳ ಹಿಂದೆ ಯೋಜನೆ ಹಾಕಿಕೊಂಡಿದ್ದರು.

ಅದರಂತೆ 2,500 ಕಿ.ಮೀ. ದೂರ ಸಾಗುವ 90 ದಿನಗಳ ಪಾದಯಾತ್ರೆಯನ್ನು ಆರಂಭಿಸಿದ್ದು, ಮಾರ್ಗದಲ್ಲಿನ ಮಸೀದಿ, ಚರ್ಚ್ ಹಾಗೂ ಮಂದಿರಗಳ ಬಗ್ಗೆ ಮಾಹಿತಿಯನ್ನು ಯೂಟ್ಯೂಬ್ ಮೂಲಕ ಅಪ್‌ಲೋಡ್ ಮಾಡಲಾಗುತ್ತದೆ ಎಂದು ಮೆಹತಾಬ್ ತಿಳಿಸಿದರು.

ದಿನವೊಂದಕ್ಕೆ 50ರಿಂದ 70 ಕಿ.ಮೀ. ಕ್ರಮಿಸುವ ಗುರಿ ಹೊಂದಲಾಗಿದೆ. ರಾತ್ರಿ ವೇಳೆ ಪೆಟ್ರೋಲ್ ಬಂಕ್ ಇಲ್ಲವೇ ಇತರೆಡೆ ಟೆಂಟ್‌ಹೌಸ್ ನಿರ್ಮಿಸಿ ವಿಶ್ರಾಂತಿ ಪಡೆಯುತ್ತೇವೆ. ಬೆಳಿಗ್ಗೆ ಎದ್ದು ಯಾತ್ರೆ ಮುಂದುವರೆಸಲಾಗುವುದು ಎಂದರು.

ದಿನವೊಂದಕ್ಕೆ ₹350 ರಂತೆ ಸುಮಾರು ₹35 ಸಾವಿರ ವೆಚ್ಚದಲ್ಲಿ ಪಾದಯಾತ್ರೆ ಪೂರ್ಣಗೊಳಿಸುವ ಯೋಜನೆ ಇದೆ. ದುಡಿಮೆಯಿಂದ ಗಳಿಸಿದ ಹಣವಲ್ಲದೆ ವೆಚ್ಚವನ್ನು ಕೆಲ ಗೆಳೆಯರು ಭರಿಸುವ ಭರವಸೆಯನ್ನು ನೀಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT