ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಲರ್‌ ಹಾಕಿ: ಜಿಲ್ಲೆಯ 11 ಆಟಗಾರರು ರಾಜ್ಯ ತಂಡಕ್ಕೆ

ಬಂಗಾರ ಜಯಿಸಿದ ಕೈಗಾ ರೋಲರ್ ಸ್ಕೇಟಿಂಗ್ ಕ್ಲಬ್‌ನ 13 ಕ್ರೀಡಾಪಟುಗಳು
Last Updated 7 ಡಿಸೆಂಬರ್ 2019, 13:09 IST
ಅಕ್ಷರ ಗಾತ್ರ

ಕಾರವಾರ:ಕೈಗಾ ರೋಲರ್ ಸ್ಕೇಟಿಂಗ್ ಕ್ಲಬ್‌ನ13 ಕ್ರೀಡಾಪಟುಗಳು 35ನೇ ರಾಜ್ಯಮಟ್ಟದ ರೋಲರ್ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರದ ಪದಕ ಜಯಿಸಿದ್ದಾರೆ. 11ಕ್ರೀಡಾಪಟುಗಳು ರಾಜ್ಯ ತಂಡಕ್ಕೆಆಯ್ಕೆಯಾಗಿದ್ದಾರೆ.

ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಬೆಂಗಳೂರಿನಲ್ಲಿ ಈಚೆಗೆ ಚಾಂಪಿಯನ್‌ಶಿಪ್ ಹಾಗೂ ರಾಜ್ಯ ತಂಡಕ್ಕೆ ಆಯ್ಕೆ ಪ್ರಕ್ರಿಯೆ ಹಮ್ಮಿಕೊಂಡಿತ್ತು.

ಇದರಲ್ಲಿ ವಿವಿಧ ಜಿಲ್ಲೆಗಳಿಂದ 200ಕ್ಕೂಹೆಚ್ಚುರೋಲರ್ ಹಾಕಿ ಕ್ರೀಡಾಪಟುಗಳು ಭಾಗವಹಿಸಿದ್ದರು. ಉತ್ತರ ಕನ್ನಡವನ್ನು ಕೈಗಾ, ಶಿರಸಿ, ಕಾರವಾರ ರೋಲರ್ ಸ್ಕೇಟಿಂಗ್ ಕ್ಲಬ್‌ನ30 ಕ್ರೀಡಾಪಟುಗಳು ಪ್ರತಿನಿಧಿಸಿದ್ದರು. ಕೆಡೆಟ್, ಸಬ್ ಜೂನಿಯರ್, ಹಾಗೂ ಜೂನಿಯರ್ ವಿಭಾಗದಲ್ಲಿ ಭಾಗವಹಿಸಿದ್ದರು.

ರಾಜ್ಯ ತಂಡಕ್ಕೆ ಆಯ್ಕೆಯಾದವರು:ಕೆಡೆಟ್ ವಿಭಾಗದಲ್ಲಿ ಬಾಲಕರು: ಅನೂಪ್ ಗುನಗಿ, ಮೋಹನ್ ಹಣುಮಂತರಾಯಪ್ಪ, ಸೂರ್ಯ ಬಾಲಕೃಷ್ಣ, ಸುತೇಜ್ ಗೌಡ. ಬಾಲಕಿಯರು: ಸಹೇಲಿ ನಾಯ್ಕ್, ಪ್ರಿಯದರ್ಶಿನಿ ಹಿರೇಮಠ್, ಬೃಂದಾವನಿ ಅಬ್ಬಿಗೇರಿ, ಸಿಂಚನಾ ಸಜ್ಜನ, ಅನ್ವಿ ಕುಡತರಕರ್.

ಸಬ್ ಜೂನಿಯರ್ ವಿಭಾಗ:ಸಂಗಮೇಶ ಸೀಳಿನ್, ನಿಹಾಲ್ ಮತ್ತು ಆರ್ಟಿಸಿಕ್ ಸ್ಕೇಟಿಂಗ್‌ನಫ್ರೀಸ್ಟೈಲ್ ಸಾಲಾಲಂ ವಿಭಾಗದಲ್ಲಿ ರಣವೀತಾ ಗೌಡಾ ಆಯ್ಕೆಯಾಗಿದ್ದಾರೆ.

ಕೈಗಾ ರೋಲರ್ ಸ್ಕೇಟಿಂಗ್ ಕ್ಲಬ್‌ನ ತರಬೇತುದಾರ ದಿಲೀಪ್ ಹಣಬರ್ ಅವರನ್ನು ರಾಜ್ಯ ತಂಡದ ಮುಖ್ಯ ತರಬೇತುದಾರರನ್ನಾಗಿ ನಿಯೋಜಿಸಲಾಗಿದೆ.

ಇವರು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಡಿ.14ರಿಂದ 24ರವರೆಗೆ ನಡೆಯುವ57ನೇ ರಾಷ್ಟ್ರಮಟ್ಟದ ರೋಲರ್ ಹಾಗೂ ಇನ್‌ಲೈನ್ ಹಾಕಿ ಚಾಂಪಿಯನಶಿಪ್‌ನಲ್ಲಿರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಟೂರ್ನಿಯಲ್ಲಿ ವಿವಿಧ ರಾಜ್ಯಗಳ 22ಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳಲಿವೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT