ಶನಿವಾರ, ಏಪ್ರಿಲ್ 17, 2021
23 °C

ರಸ್ತೆಗಿಳಿಯದ ಬಸ್: ಮ್ಯಾಕ್ಸಿಕ್ಯಾಬ್ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಶಿರಸಿ: ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಪರಿಣಾಮ ನಗರವೂ ಸೇರಿದಂತೆ ಜಿಲ್ಲೆಯ ಇನ್ನಿತರ ತಾಲ್ಲೂಕುಗಳಲ್ಲಿ ಬಸ್ ಸಂಚಾರ ಸ್ತಬ್ಧಗೊಂಡಿದೆ.

ನೂರಾರು ಬಸ್ ಗಳು ಇಲ್ಲಿನ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಹಿಂಭಾಗದ ಆವರಣದಲ್ಲಿ ನಿಂತಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಮ್ಯಾಕ್ಸಿ ಕ್ಯಾಬ್ ಸಂಚರಿಸುತ್ತಿವೆ. ಹಳೆ ಬಸ್ ನಿಲ್ದಾಣದಲ್ಲಿ ದೂರದ ಊರುಗಳಿಗೆ ತೆರಳಲು ನಿಂತಿದ್ದ ಪ್ರಯಾಣಿಕರು ಬಸ್ ಗಳಿಲ್ಲದ ಪರಿಣಾಮ ಪರದಾಡುತ್ತಿದ್ದಾರೆ.

'ಹೆಚ್ಚು ಪ್ರಯಾಣಿಕರು ಇದ್ದರೆ ಮಾತ್ರ ವಾಹನ ಓಡಿಸುತ್ತೇವೆ. ಸೀಮಿತ ಸೀಟುಗಳಿದ್ದರೆ ಕಷ್ಟ' ಎಂದು ಮ್ಯಾಕ್ಸಿಕ್ಯಾಬ್ ಚಾಲಕರೊಬ್ಬರು ತಿಳಿಸಿದರು.

ಬಸ್ ನಿಲ್ದಾಣಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಆರ್ ಟಿಓ ಕೂಡ ಸ್ಥಳದಲ್ಲಿ ಬೀಡುಬಿಟ್ಟು ಮ್ಯಾಕ್ಸಿಕ್ಯಾಬ್‌ಗಳ ಓಡಾಟ ಪರಿಶೀಲಿಸತೊಡಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು