ಮಂಗಳವಾರ, ಮಾರ್ಚ್ 31, 2020
19 °C
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಹೇಲಿಕೆ

ಪಕ್ಷ ಸಂಘಟನೆಗೆ ಪದಾಧಿಕಾರಿ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಪಕ್ಷದಲ್ಲಿನ ಆಂತರಿಕ ಪ್ರಜಾಪ್ರಭುತ್ವ ಹಾಗೂ ಪಕ್ಷ ಸಂಘಟನೆಗೆ ಪೂರಕವಾಗಿ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ 1423 ಬೂತ್‌ ಸಮಿತಿಗಳನ್ನು ಹೊಸದಾಗಿ ರಚಿಸಿ, ಅಧ್ಯಕ್ಷರನ್ನು ನೇಮಿಸಲಾಗಿದೆ. ಮುಂಬರುವ ಗ್ರಾಮ ಪಂಚಾಯ್ತಿ ಚುನಾವಣೆ ಹಾಗೂ ಪಕ್ಷ ಸಂಘಟನೆ ಗಮನದಲ್ಲಿಟ್ಟು, ಸಕ್ರಿಯವಾಗಿರುವ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ’ ಎಂದರು.

ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಘಟಕ ಅಧ್ಯಕ್ಷರಾಗಿ ರವಿ ನಾಯ್ಕ ಜಾಲಿ, ಯುವ ಮೋರ್ಚಾ ಘಟಕದ ಅಧ್ಯಕ್ಷರಾಗಿ ಪ್ರಶಾಂತ ನಾಯಕ ಅಂಕೋಲಾ, ಮಹಿಳಾ ಮೋರ್ಚಾ ಘಟಕದ ಅಧ್ಯಕ್ಷರಾಗಿ ಶೋಭಾ ನಾಯ್ಕ ಶಿರಸಿ, ರೈತ ಮೋರ್ಚಾ ಘಟಕದ ಅಧ್ಯಕ್ಷರಾಗಿ ಮಹೇಶ ಹೊಸಕೊಪ್ಪ, ಎಸ್.ಸಿ. ಮೋರ್ಚಾ ಘಟಕದ ಅಧ್ಯಕ್ಷರಾಗಿ ಉದಯ ಶೆಟ್ಟಿ ಕಾರವಾರ, ಎಸ್.ಟಿ. ಮೋರ್ಚಾ ಘಟಕದ ಅಧ್ಯಕ್ಷರಾಗಿ ಮಾಸ್ತಿ ಗೊಂಡ ಭಟ್ಕಳ, ಅಲ್ಪಸಂಖ್ಯಾತ ಮೋರ್ಚಾ ಘಟಕದ ಅಧ್ಯಕ್ಷರಾಗಿ ಅನೀಸ್ ತಹಶೀಲ್ದಾರ್ ನೇಮಕಗೊಂಡಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ವಿಶೇಷ ಆಹ್ವಾನಿತರಾಗಿ ಎಂ.ಜಿ.ಭಟ್ಟ, ಗಜಾನನ ಗುನಗ, ನಾಗರಾಜ ನಾಯಕ ತೊರ್ಕೆ, ಸುಧಾ ಗೌಡ, ಉಮೇಶ ನಾಯ್ಕ, ವೆಂಕಟರಮಣ ಹೆಗಡೆ, ಕುಮಾರ ಮಾರ್ಕಾಂಡೆ, ಜಗದೀಶ ನಾಯಕ, ಮನೋಜ ಭಟ್, ಸುಧಾಕರ ರೆಡ್ಡಿ, ರಾಘವೇಂದ್ರ ಭಟ್ಟ, ಗಣಪತಿ ಮಾನಿಗದ್ದೆ, ಆರ್.ವಿ.ಹೆಗಡೆ, ಮಂಗೇಶ ದೇಶಪಾಂಡೆ, ಶ್ಯಾಮಿಲಿ ಪಾಠಣಕರ ನೇಮಕವಾಗಿದ್ದಾರೆ ಎಂದು ತಿಳಿಸಿದರು.

ಪದಾಧಿಕಾರಿಗಳು: ನಾಗರಾಜ ನಾಯಕ ಕಾರವಾರ, ಉಮೇಶ ಭಾಗವತ ಯಲ್ಲಾಪುರ, ಅಶೋಕ ಛಲವಾದಿ ಮುಂಡಗೋಡ, ಉಮೇಶ ಹಳೇಬಂಕಾಪುರ ಶಿರಸಿ, ನಯನಾ ನೀಲಾವರ ಕಾರವಾರ, ಭಾಗ್ಯಾ ಲೋಕೇಶ ಮೇಸ್ತಾ ಹೊನ್ನಾವರ, ಕಲ್ಪನಾ ಗಜಾನನ ನಾಯ್ಕ ಯಲ್ಲಾಪುರ, ರೇಖಾ ಅಂಡಗಿ ಮುಂಡಗೋಡ (ಉಪಾಧ್ಯಕ್ಷರು), ಎನ್.ಎಸ್.ಹೆಗಡೆ ಹೊನ್ನಾವರ, ಗೋವಿಂದ ನಾಯ್ಕ ಭಟ್ಕಳ, ಚಂದ್ರು ದೇವಾಡಿಗ ಶಿರಸಿ (ಪ್ರಧಾನ ಕಾರ್ಯದರ್ಶಿ), ಆರತಿ ಗೌಡ ಆಂಕೋಲಾ, ಶಿವಾನಿ ಭಟ್ಕಳ, ಉಷಾ ಹೆಗಡೆ ಶಿರಸಿ, ಪ್ರಶಾಂತ ನಾಯ್ಕ ಕುಮಟಾ, ನಿತ್ಯಾನಂದ ಗಾಂವಕರ ಆಂಕೋಲಾ, ಕೃಷ್ಣಮೂರ್ತಿ ಮಡಿವಾಳ ಸಿದ್ದಾಪುರ, ಗುರುಪ್ರಸಾದ ಹೆಗಡೆ ಸಿದ್ದಾಪುರ, ಬಸವರಾಜ್ ಕಲಶೆಟ್ಟಿ ದಾಂಡೇಲಿ (ಕಾರ್ಯದರ್ಶಿ), ಶ್ರೀಕಾಂತ ನಾಯ್ಕ ಶಿರಸಿ (ಕೋಶಾಧ್ಯಕ್ಷ), ಶ್ರೀರಾಮ ನಾಯ್ಕ ಶಿರಸಿ (ಕಾರ್ಯಾಲಯ ಕಾರ್ಯದರ್ಶಿ).

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು