ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿ ಮೆಣಸು ಮತ್ತಷ್ಟು ತುಟ್ಟಿ

₹ 300ಕ್ಕೆ ಏರಿಕೆಯಾಗಿ ‘ಖಾರ’ವಾದ ಮೆಣಸು: ಬೇಡಿಕೆ ಕಳೆದುಕೊಂಡ ಚಿಕನ್
Last Updated 12 ಮಾರ್ಚ್ 2020, 11:31 IST
ಅಕ್ಷರ ಗಾತ್ರ

ಕಾರವಾರ: ನಗರದ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನ ದರ ಅನಿರೀಕ್ಷಿತ ಏರಿಕೆಯಾದರೆ, ಚಿಕನ್ ದರವು ದಿಢೀರ್ ಇಳಿಕೆ ಕಂಡಿದೆ. ತರಕಾರಿಗಳ ದರ ಸ್ಥಿರವಾಗಿದೆ.

ಈರುಳ್ಳಿ ಪ್ರತಿ ಕೆ.ಜಿಗೆ ₹ 30ರ ದರದಲ್ಲಿ ವಹಿವಾಟು ಕಾಣುತ್ತಿದೆ. ಟೊಮೆಟೊ ₹ 20, ಹೂಕೋಸು ₹ 30, ಕ್ಯಾಬೇಜ್₹ 20, ಆಲೂಗಡ್ಡೆ₹ 30ರ ದರ ಹೊಂದಿವೆ. ಬೀನ್ಸ್₹ 40, ಕ್ಯಾಪ್ಸಿಕಂ ₹ 50, ಮೆಣಸಿನಕಾಯಿ ₹ 50, ಬೀಟ್‌ರೂಟ್₹ 40, ಬೆಂಡೆಕಾಯಿ₹ 40 ಬೆಲೆಯಲ್ಲಿ ಬಿಕರಿಯಾಗುತ್ತಿದೆ.₹ 50 ಇದ್ದಕ್ಯಾರೆಟ್ ದರವು ಸದ್ಯ₹10ರಷ್ಟು ಇಳಿಕೆ ಕಂಡಿದೆ.

ಪ್ರತಿ ಕೆ.ಜಿ.ಗೆ₹ 240ರಲ್ಲಿ ವಹಿವಾಟು ಕಾಣುತ್ತಿದ್ದ ಬ್ಯಾಡಗಿ ಮೆಣಸು ಈ ವಾರ ತುಟ್ಟಿಯಾಗಿದೆ.₹ 60ರಷ್ಟು ಏರಿಕೆ ಕಂಡು₹ 300ರ ದರ ಹೊಂದಿದೆ. ಮಾರುಕಟ್ಟೆಗೆ ತಾಜಾ ಮೆಣಸು ಆವಕಗೊಂಡಿದೆ. ಹಾಗಾಗಿ ಸಹಜವಾಗಿ ದುಬಾರಿ ಬೆಲೆ ನಿಗದಿಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ಸ್ವಸ್ತಿಕ್ ಹಳೆಯ ಅಕ್ಕಿಯು 25 ಕೆ.ಜಿ ಚೀಲವೊಂದಕ್ಕೆ ₹ 950ಇದೆ.ಶೇಂಗಾ ಹಿಂದಿನವಾರ ₹ 160ರಿಂದ₹ 120ಕ್ಕೆ ಇಳಿಕೆಯಾಗಿತ್ತು. ಸದ್ಯ ಇದರ ದರವು ಸ್ಥಿರವಾಗಿದೆ.ಸಕ್ಕರೆ₹ 40,ಪಾಮ್ ಆಯಿಲ್‌ ಲೀಟರ್‌ಗೆ₹ 90, ಜೋಳ₹ 38, ತೊಗರಿಬೇಳೆ₹ 100ರಲ್ಲಿ ಸ್ಥಿರವಾಗಿದೆ.

ತೋತಾಪುರಿ ಮಾವು ₹ 100ಕ್ಕೆ ಮೂರು ಸಿಗುತ್ತಿವೆ. ಅಡುಗೆಗೆ ಬಳಸುವ ಸಣ್ಣ ಗಾತ್ರದ ಹಲಸು ಒಂದಕ್ಕೆ₹ 20, ಗೋಕರ್ಣದ ಗೆಣಸಿಗೆ ₹ 30, ಸುವರ್ಣಗಡ್ಡೆ ಒಂದಕ್ಕೆ ₹ 200ರ ದರವಿದೆ.ಮಹಾಲಿಂಗಪುರದ ಬೆಲ್ಲ ₹ 50, ಜೋನಿಬೆಲ್ಲ ₹ 80, ಜೇನುತುಪ್ಪ ₹270ರಲ್ಲಿ ಬಿಕರಿಯಾಗುತ್ತಿವೆ. ಬಿಸಿಲಿನ ತಾಪ ಜಾಸ್ತಿಯಾಗಿರುವುದರಿಂದ ಮುಂಡಗೋಡದ ಕಲ್ಲಂಗಡಿ ವ್ಯಾಪಾರಸ್ಥರು ಉತ್ತಮ ಲಾಭದಲ್ಲಿದ್ದಾರೆ. ಕುಂದಾಪುರ ಭಾಗದಿಂದ ಇವರು ಆವಕ ಮಾಡಿಕೊಂಡಿರುವ ಕಲ್ಲಂಗಡಿ ಹಣ್ಣಿಗೆ ಉತ್ತಮ ಬೇಡಿಕೆ ಇದೆ.

ಸಣ್ಣ ಗಾತ್ರದ ಬಂಗಡೆ ₹ 100ಕ್ಕೆ ಐದರಿಂದ ಆರುಸಿಗುತ್ತಿದೆ. ಪಾಂಫ್ರೆಟ್ ₹ 500ರಿಂದ ₹ 600ರವರೆಗೆ ಇದೆ. ಬೆಳುಂಜೆ ₹ 100, ಲೆಪ್ಪೆ ₹ 100, ಸೋಂದಾಳೆ ₹ 200ರಲ್ಲಿ ಸಿಗುತ್ತಿವೆ. ಲುಸ್ಕಾ ಹಾಗೂ ಇಸೋಣ್ ಮಾರುಕಟ್ಟೆಗೆ ಆವಕಗೊಂಡಿಲ್ಲ.

ಚಿಕನ್‌ಗೆ ‘ಕೋವಿಡ್’ಭಯ

‘ಕೋವಿಡ್ 19’ ಸೋಂಕಿನ ಆತಂಕದಿಂದಾಗಿ ಕೋಳಿ ಮಾಂಸ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ.

ಪ್ರತಿ ಕೆ.ಜಿ.ಗೆ ₹ 220ರಲ್ಲಿ ಮಾರಾಟವಾಗುತ್ತಿದ್ದ ಚಿಕನ್, ಈ ವಾರದಲ್ಲಿ₹ 130ಕ್ಕೆ ಕುಸಿದಿದೆ. ಹೊನ್ನಾವರತಾಲ್ಲೂಕಿನಲ್ಲಿ ಭಾರಿಇಳಿಕೆ ಕಂಡು₹ 70ಕ್ಕೆ ಇಳಿಕೆಯಾಗಿದೆ. ಕೋವಿಡ್ ಸೋಂಕಿನ ಭಯದಿಂದ ಕೋಳಿಮಾಂಸ ತಿನ್ನಲು ಹಿಂಜರಿಯುತ್ತಿದ್ದಾರೆ. ಇದು ವಹಿವಾಟಿನ ಮೇಲೆ ಪರಿಣಾಮ ಬೀರಿದೆ ಎನ್ನುವುದು ಉದ್ಯಮಿಯೊಬ್ಬರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT