ಬುಧವಾರ, ಜುಲೈ 28, 2021
26 °C
ಹೈ ಫ್ಲೋ ನೇಸಲ್ ಆಕ್ಸಿಜನ್ ವ್ಯವಸ್ಥೆ ಇರುವ ಜಿಲ್ಲೆಯ ಮೊದಲ ಕೇಂದ್ರ

ಶಿರಸಿಯಲ್ಲಿ ಕೋವಿಡ್ ಚಿಕಿತ್ಸಾ ಕೊಠಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಹೈ ಫ್ಲೋ ನೇಸಲ್ ಆಕ್ಸಿಜನ್ ವ್ಯವಸ್ಥೆ ಇರುವ ಜಿಲ್ಲೆಯ ಮೊದಲ ಕೋವಿಡ್ ಚಿಕಿತ್ಸಾ ಕೊಠಡಿಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ಇಲ್ಲಿ ಉದ್ಘಾಟಿಸಿದರು. 

 ಕೊರೊನಾ ಸೋಂಕಿತ ರೋಗಿಗೆ, ತೀವ್ರ ಉಸಿರಾಟದ ಸಮಸ್ಯೆ ಇದ್ದಾಗ ಹೈ ಫ್ಲೋ ನೇಸಲ್‌ ಬಳಸಬೇಕಾಗುತ್ತದೆ. ಶ್ವಾಸನಾಳಕ್ಕೆ ಆಕ್ಸಿಜನ್‌ ಪೈಪ್‌ ಅಳವಡಿಸಿ, ಉಸಿರಾಟಕ್ಕೆ ಆಮ್ಲಜನಕ ಪೂರೈಸಲಾಗುತ್ತದೆ. ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ವ್ಯವಸ್ಥೆಗಳಿರುವ ಕೊಠಡಿ ತೆರೆಯಲಾಗಿದೆ.

‘25 ಹಾಸಿಗೆಗಳಿರುವ ಕೋವಿಡ್ 19 ವಾರ್ಡ್ ತೆರೆಯಲಾಗಿದೆ. ಇಲ್ಲಿನ ರೋಗ ಲಕ್ಷಣವಿರುವವರನ್ನು ದಾಖಲಿಸಿಕೊಳ್ಳಲಾಗುತ್ತದೆ. ಇದಕ್ಕಾಗಿ ಪ್ರತಿ ಹಾಸಿಗೆಗೂ ಆಮ್ಲಜನಕ ಪೂರೈಕೆಯ ವ್ಯವಸ್ಥೆ ಮಾಡಲಾಗಿದೆ’ ಎಂದು ಪಂಡಿತ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಜಾನನ ಭಟ್ಟ ಹೇಳಿದರು. ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿನಾಯಕ ಭಟ್ಟ, ತಹಶೀಲ್ದಾರ್ ಎಂ.ಆರ್. ಕುಲಕರ್ಣಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.