ಭಾನುವಾರ, ಜೂಲೈ 5, 2020
23 °C
ಸ್ವರ್ಣವಲ್ಲಿ ಮಠದಿಂದ ಸಲಹೆ

ಕೊರೊನಾ ನಿವಾರಣೆಗೆ ಶಿರಸಿಯಲ್ಲಿ ಸ್ತೋತ್ರ ಪಠಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಕೊರೊನಾ ವೈರಸ್‌ ನಿವಾರಣೆಗೆ ಎಲ್ಲರೂ ಧನ್ವಂತರಿ ಸಹಸ್ರನಾಮ ಪಠಿಸಬೇಕು ಎಂದು ತಾಲ್ಲೂಕಿನ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಂದೇಶದಲ್ಲಿ ತಿಳಿಸಿದ್ದಾರೆ.

ವೈರಸ್ ಪೀಡೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರೋಗಕ್ಕೆ ಔಷಧ ಕಂಡುಹಿಡಿಯಲಾಗದ ಕಾರಣ ದೇವರ ಮೊರೆ ಹೋಗಬೇಕಾಗಿದೆ. ಜೂನ್ 30ರೊಳಗೆ ಪ್ರತಿ ವ್ಯಕ್ತಿ ಕನಿಷ್ಠ 100 ಸಲವಾದರೂ ಇದರ ಪಠಣ ಮಾಡಬೇಕು. ಕೇವಲ ತನ್ನ ಆರೋಗ್ಯಕ್ಕೆ ಮಾತ್ರವಲ್ಲ, ಎಲ್ಲರ ಆರೋಗ್ಯಕ್ಕಾಗಿ ಎಂದು ಮನಸ್ಸಿನಲ್ಲಿ ಸಂಕಲ್ಪ ಮಾಡಿ, ದಿನವೊಂದಕ್ಕೆ ಎರಡು ಸಲ, ಪ್ರಯತ್ನ ಪಟ್ಟರೆ ಮೂರು ಸಲ ಪಠಿಸಬಹುದು. ಹೆಚ್ಚು ಜನ ಪಠಿಸಿದಾಗ ಉತ್ತಮವಾದ ಶಕ್ತಿ ನಿರ್ಮಾಣವಾಗುತ್ತದೆ. ಅದರಿಂದ ಸಮಾಜವನ್ನು ರೋಗಮುಕ್ತ ಮಾಡಲು ಸಾಧ್ಯವಾಗಬಹುದು.

ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಹಸ್ರನಾಮ ಸ್ತೋತ್ರದ ಧ್ವನಿಮುದ್ರಣ ಮತ್ತು ಪಠ್ಯವನ್ನು ಒದಗಿಸಲಾಗಿದೆ. ಸ್ತೋತ್ರ ಪಠಣವನ್ನು ಶುಚಿಯಾಗಿ ಒಂದೇ ಸ್ಥಳದಲ್ಲಿ ಕುಳಿತು ಮಾಡಬೇಕು. ಸ್ತೋತ್ರವನ್ನು ಮೊಬೈಲ್‌ನಲ್ಲಿ ಪಡೆಯಲು ಹಾಗೂ ಹೆಚ್ಚಿನ ವಿವರಗಳಿಗೆ 8105733655 ಅಥವಾ 9483998443 ವಾಟ್ಸ್‌ಆ್ಯಪ್‌ ಸಂಖ್ಯೆಯನ್ನು ಸಂಪರ್ಕಿಸಬಹುದು. ಮಾಡಿರುವ ಸಹಸ್ರನಾಮದ ಪಾರಾಯಣ ಸಂಖ್ಯೆಯನ್ನು ಪ್ರತಿನಿತ್ಯ 8105733655 ಈ ಸಂಖ್ಯೆಗೆ ಕಳುಹಿಸಬೇಕು ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು