ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಹೆಕ್ಕಲು ಸರಳ ಸಾಧನ ತಯಾರಿಸಿದ ಯುವ ರೈತ

ನೂತನ ಸಾಧನ ಅಭಿವೃದ್ಧಿ ಪಡಿಸಿದ ಹೊನ್ನಾವರ ತಾಲ್ಲೂಕಿನ ಕಣ್ಣಿಮನೆ ರಾಮ ಹೆಗಡೆ
Last Updated 22 ಅಕ್ಟೋಬರ್ 2019, 3:44 IST
ಅಕ್ಷರ ಗಾತ್ರ

ಕಾರವಾರ:ತೋಟದಲ್ಲಿ ಬಿದ್ದ ಬಿಡಿ ಅಡಿಕೆಗಳನ್ನು ಹೆಕ್ಕುವುದು ಅಷ್ಟೊಂದು ಸುಲಭ ಕೆಲಸವಲ್ಲ. ಗಂಟೆಗಟ್ಟಲೆ ಬಗ್ಗಿ ನಿಂತು ಸೊಂಟನೋವು ಬರುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲುಹೊನ್ನಾವರ ತಾಲ್ಲೂಕಿನ ಮುಗ್ವಾ ಗ್ರಾಮದ ಕಣ್ಣಿಮನೆಯರಾಮ ಹೆಗಡೆ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

ಸುಬ್ರಾಯ ಹೆಗಡೆ, ವರಮಹಾಲಕ್ಷ್ಮೀ ಹೆಗಡೆ ದಂಪತಿಯ ಪುತ್ರರಾಗಿರುವ ಇವರು, ಹೊನ್ನಾವರದ ಎಸ್.ಡಿ.ಎಂಕಾಲೇಜಿನಲ್ಲಿ ಪದವಿ ಅಧ್ಯಯನ ಮಾಡಿದ್ದಾರೆ. ಬಳಿಕಉದ್ಯೋಗಕ್ಕಾಗಿ ನಗರಗಳ ಕಡೆ ಮುಖ ಮಾಡದೇ ತಮ್ಮ ಹುಟ್ಟೂರಿನಲ್ಲೇ ಕೃಷಿಯಲ್ಲಿ ನಿರತರಾದರು. ಪೂರ್ವಜರಿಂದ ಬಳುವಳಿಯಾಗಿ ಬಂದ ವ್ಯವಸಾಯವನ್ನು ಮುಂದುವರಿಸಿಕೊಂಡು ಬಂದರು.

ತೋಟದಲ್ಲಿ ಬಿದ್ದಿರುವ ಅಡಿಕೆಯನ್ನು ಹೆಕ್ಕಲು ಕೂಲಿ ಕಾರ್ಮಿಕರೂ ಸರಿಯಾದ ಸಮಯಕ್ಕೆ ಸಿಗುವುದಿಲ್ಲ. ಇದರಿಂದ ಬೆಳೆ ನಷ್ಟವಾಗುತ್ತದೆ ಎಂಬುದು ಬೆಳೆಗಾರರ ಸಾಮಾನ್ಯ ಆರೋಪ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾದ ರಾಮ ಹೆಗಡೆ, ಅಡಿಕೆ ಹೆಕ್ಕುವ ಸಾಧನದ ಹುಡುಕಾಟದಲ್ಲಿ ನಿರತರಾದರು.

‘ಈ ಮೊದಲು ದಕ್ಷಿಣ ಕನ್ನಡದ ಉಜಿರೆಯ ಗಜಾನನ ವಜೆ ಎನ್ನುವವರು ಇದೇ ಮಾದರಿಯ ಸಾಧನವನ್ನುಸಿದ್ಧಪಡಿಸಿದ್ದನ್ನು ನೋಡಿದ್ದೆ. ಕೃಷಿಗೆ ಅದರ ಮಹತ್ವವನ್ನು ಅರಿತು ಇನ್ನಷ್ಟು ಅಭಿವೃದ್ಧಿಪಡಿಸಿದೆ. ಇಂಥದ್ದೇ ಸಲಕರಣೆಯೊಂದನ್ನು ಶಿರಸಿಯಲ್ಲೂ ಒಬ್ಬರು ತಯಾರು ಮಾಡಿದ್ದಾರೆ.ನಾನು ಅಭಿವೃದ್ಧಿ ಪಡಿಸಿದ್ದುಇವುಗಳನವೀಕೃತ ಉಪಕರಣವಾಗಿದೆ’ ಎನ್ನುತ್ತಾರೆ ಅವರು.

‘ಈ ಸಾಧನವು ಕೆಲಸದ ಭಾರವನ್ನಿಳಿಸಲು ಸಹಕಾರಿ. ತೋಟದಲ್ಲಿ ನಿಂತುಕೊಂಡೇ ಅಡಿಕೆಗಳನ್ನು ವೇಗವಾಗಿ ಆರಿಸಿ ಚೀಲದೊಳಗೆ ತುಂಬಬಹುದು. ಸಮತಟ್ಟಾದ ಜಾಗ, ಏರು ತಗ್ಗು, ಗಿಡಗಂಟಿ, ಕಲ್ಲುಗಳು ಇರುವಲ್ಲಿಯೂ ಇದರ ಮೂಲಕ ಅಡಿಕೆಹೆಕ್ಕಿಕೊಳ್ಳಬಹುದು’ ಎಂದು ವಿವರಿಸಿದರು.

‘ಇಂತಹ ಒಂದು ಸಾಧನ ತಯಾರಿಸಲು ಎರಡು ದಿನಗಳು ಬೇಕು.ಕೋನ ಪಟ್ಟಿಯನ್ನು ಜೋಡಿಸಿ, ತೂತು ಮಾಡಿ ಬಲವಾದ ಸ್ಟೀಲ್ತಂತಿಯನ್ನುಬೇಕಾದ ಆಕಾರದಲ್ಲಿ ಬಗ್ಗಿಸಿಕೊಳ್ಳಬೇಕು. ಮಧ್ಯದಲ್ಲಿ ಮೂರುತಂತಿಗಳುಉದ್ದವಿರಬೇಕು. ಎಡ ಮತ್ತು ಬಲ ತುದಿಗಳಲ್ಲಿ ತಂತಿಗಳು ಸಣ್ಣದಿರಬೇಕು.ಇದನ್ನು ಅಡಿಕೆಯ ಮೇಲಿಟ್ಟು ಒತ್ತಿದಾಗಅದು ಸುಲಭವಾಗಿಸಾಧನದೊಳಗೆ ಸೇರುತ್ತದೆ. ಒಳಹೋದ ಅಡಿಕೆ ಪುನಹ ಕೆಳಗೆ ಬೀಳುವುದಿಲ್ಲ. ಕಾಯಡಿಕೆ, ಕೊಳೆ ಅಡಿಕೆ ಸೇರಿದಂತೆ ಗಾತ್ರದಲ್ಲಿ ಸಣ್ಣದೊಡ್ಡ ಇದ್ದರೂ ಸಲೀಸಾಗಿ ಹೆಕ್ಕಬಹುದು’ ಎಂದು ಮಾಹಿತಿ ನೀಡಿದರು.

‘ಬಾವಲಿಗಳ ಉಪಟಳದಿಂದನಿರಂತರವಾಗಿಅಡಿಕೆ ಉದುರುತ್ತಲೇ ಇರುತ್ತಿತ್ತು. ಪ್ರತಿದಿನ ಅಡಿಕೆ ಹೆಕ್ಕುವುದು ತ್ರಾಸದಾಯಕ. ಆದ್ದರಿಂದ ಕೆಲಸ ಸುಲಭ ಪಡಿಸಿಕೊಳ್ಳಲು ಚಿಂತನೆ ನಡೆಸಿದೆ. ಇದರ ಅಗತ್ಯತೆ ಎಲ್ಲಾ ರೈತರಿಗೂ ಇರುವುದರಿಂದ ಬೇಡಿಕೆ ಇಟ್ಟವರಿಗೆ ಮಾಡಿಕೊಟ್ಟಿದ್ದೇನೆ. ನೆಂಟರು, ಆಪ್ತರೆಲ್ಲರೂಸಾಧನಮಾಡಿಸಿಕೊಂಡಿದ್ದಾರೆ. ವರ್ಷಕ್ಕೊಮ್ಮೆ ಬಣ್ಣ ಬಳಿಯುವುದರಿಂದ ತುಕ್ಕಿನಿಂದ ರಕ್ಷಣೆ ಮಾಡಿಕೊಳ್ಳಬಹುದು’ ಎಂದರು.

ಆರೋಗ್ಯ ಸಮತೋಲನ:‘ಕೃಷಿಯತ್ತಯುವಕರ ಗಮನ ಕಡಿಮೆಯಾಗಿದೆ. ಯಂತ್ರೋಪಕರಣಗಳನ್ನು ಬಳಕೆ ಮಾಡಿದರೆ ಕೃಷಿ ಸುಲಭದ ಕೆಲಸ.ಕೃಷಿಕರಾದರೆ ಸ್ವಾವಲಂಬಿ ಬದುಕು ನಡೆಸಬಹುದು. ಸಣ್ಣಪುಟ್ಟ ಸಮಸ್ಯೆ, ಕೊರತೆಗಳು ಎಲ್ಲಾ ವಿಭಾಗಗಳಲ್ಲೂಇರುತ್ತವೆ. ಕೃಷಿ ಸಮಸ್ಯೆ ನಿವಾರಣೆಗೆ ಪರಿಹಾರೋಪಾಯಗಳು ಬಂದಿವೆ. ಆರೋಗ್ಯದ ದೃಷ್ಟಿಯಿಂದಲೂ ಕೃಷಿ ಮಹತ್ವದ್ದಾಗಿದೆ. ನಾವು ಬೊಜ್ಜು, ಕೊಲೆಸ್ಟ್ರಾಲ್, ಸಕ್ಕರೆ ಕಾಯಿಲೆಗಳಿಂದದೂರವಿದ್ದೇವೆ’ ಎನ್ನುತ್ತಾರೆ ಕೃಷಿಕ ರಾಮಹೆಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT