ಗುರುವಾರ , ಜುಲೈ 16, 2020
24 °C

50 ‘ಶ್ರಮಿಕ್ ಎಕ್ಸ್‌ಪ್ರೆಸ್‌’ ರೈಲುಗಳ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಲಾಕ್‌ಡೌನ್‌ನಿಂದಾಗಿ ದೇಶದ ವಿವಿಧೆಡೆ ಬಾಕಿಯಾಗಿದ್ದ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕರೆದುಕೊಂಡು ಹೋಗಲು ಕೊಂಕಣ ರೈಲ್ವೆಯ ಒಟ್ಟು 50 ‘ಶ್ರಮಿಕ್ ಎಕ್ಸ್‌ಪ್ರೆಸ್’ ರೈಲುಗಳು ಈವರೆಗೆ ಸಂಚರಿಸಿವೆ.

ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯ ಸರ್ಕಾರಗಳ ಕೋರಿಕೆಯ ಮೇರೆಗೆ ಈ ರೈಲುಗಳ ಸಂಚಾರಕ್ಕೆ ನಿಗಮವು ವ್ಯವಸ್ಥೆ ಮಾಡಿದೆ. ಒಟ್ಟು 67,178 ಕಾರ್ಮಿಕರು ಪ್ರಯಾಣಿಸಿದ್ದಾರೆ. ಅವರಲ್ಲಿ ಉಡುಪಿ, ಮಡಗಾಂ, ಥಿವಿಮ್, ಕರ್ಮಾಲಿ, ಸಿಂಧುದುರ್ಗ, ರತ್ನಗಿರಿ ಹಾಗೂ ಚಿಪ್ಲುನ್ ನಿಲ್ದಾಣಗಳಿಂದ ಕಾರ್ಮಿಕರು ರೈಲನ್ನೇರಿದ್ದರು ಎಂದು ಕೊಂಕಣ ರೈಲ್ವೆ ನಿಗಮದ ಸಾರ್ವಜನಿಕ ಸಂಪರ್ಕ ವಿಭಾಗದ ವ್ಯವಸ್ಥಾಪಕಿ ಕೆ.ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು